Composer : Shri Vadirajaru
ಒಂದು ಬಾರಿ ಸ್ಮರಣೆ ಸಾಲದೆ ಆ-
ನಂದ ತೀರ್ಥರ ಪೂರ್ಣಪ್ರಜ್ಞರ
ಸರ್ವಜ್ಞರಾಯರ ಮಧ್ವರಾಯರ ||ಪ||
ಪ್ರಕೃತಿ ಬಂಧದಲಿ ಸಿಲುಕಿ
ಸಕಲ ವಿಷಯಗಳಲಿ ನೊಂದು
ಅಕಳಂಕ ಚರಿತ ಹರಿಯ ಪಾದ
ಸೇರ ಬೇಕೆಂಬುವರಿಗೆ ||೧||
ಘೋರ ಸಂಸಾರಾಂಬುಧಿಗೆ
ಪರಮಜ್ಞಾನವೆಂಬ ವಾಡೆ
ಏರಿ ಮೆಲ್ಲನೆ ಹರಿಯ ಪಾದ
ಸೇರ ಬೇಕು ಎಂಬುವರಿಗೆ ||೨||
ಹಿಂದನೇಕ ಜನ್ಮಗಳಲಿ
ನೊಂದು ಯೋನಿಯಲ್ಲಿ ಬಂದು
ಇಂದಿರೇಶನ ಪಾದವನ್ನು
ಹೊಂದ ಬೇಕೆಂಬುವರಿಗೆ ||೩||
ಆರುಮಂದಿ ವೈರಿಗಳನು
ಸೇರದಂತೆ ಜರಿದು
ಧೀರನಾಗಿ ಹರಿಯ ಪಾದ
ಸೇರ ಬೇಕೆಂಬುವರಿಗೆ ||೪||
ಹೀನ ಬುದ್ಧಿಯಿಂದ ಶ್ರೀ
ಹಯವದನನ ಜರಿದು
ತಾನು ಬದುಕಲಾರದಿರಲು
ತೋರಿಕೊಟ್ಟ ಮಧ್ವಮುನಿಯ ||೫||
oMdu bAri smaraNe sAlade A-
naMda tIrthara pUrNapraj~jara
sarvaj~jarAyara madhvarAyara ||pa||
prakRuti baMdhadali siluki
sakala viShayagaLali noMdu
akaLaMka carita hariya pAda
sEra bEkeMbuvarige ||1||
GOra saMsArAMbudhige
paramaj~jAnaveMba vADe
Eri mellane hariya pAda
sEra bEku eMbuvarige ||2||
hiMdanEka janmagaLali
noMdu yOniyalli baMdu
iMdirESana pAdavannu
hoMda bEkeMbuvarige ||3||
ArumaMdi vairigaLanu
sEradaMte jaridu
dhIranAgi hariya pAda
sEra bEkeMbuvarige ||4||
hIna buddhiyiMda SrI
hayavadanana jaridu
tAnu badukalAradiralu
tOrikoTTa madhvamuniya ||5||
Leave a Reply