Namo namo Shri Bheema

Composer : Shri Pranesha dasaru

By Smt.Shubhalakshmi Rao

ನಮೋ ನಮೋ ಶ್ರೀ ಭೀಮ | ನಮೋ ನಮೋ ಜಿತಕಾಮ |
ಕಮಲಾಕ್ಷ ದಾಸ | ಪೊರೆಯಬ್ಜಾಪ್ತ ಭಾಸ [ಪ]

ಘನಗಿರಿಯೊಳಗೆ ಕುಂತಿ ನಿನ್ನೆತ್ತಿಕೊಂಡಿರಲು |
ಧ್ವನಿ ಮಾಡೆ ಹುಲಿ ತಾಯಿ ನಡುಗಿ ಬಿಸುಟೀ ||
ತನುವು ನಿನ್ನದು ಸೋಂಕೆ ನಗವೊಡೆದು ಶತಶೃಂಗ- |
ವೆನಿಸಿಕೊಂಡಿತೋ ದ್ವಾಪರದಿ ಬಲವಂತ (೧)

ಲೋಕದೊಳು ಮನುಜರಾ ಶಿಶುಗಳಂದದಿ ಬೆಳೆದು |
ಪಾಕಶಾಸನಿ ಯಮಜ ಯಮಳರ ಜನನೀ |
ಯಾ ಕೂಡಿಕೊಂಡು ಇಭಪುರಿಗೈದಿ ಮೋದದಲಿ |
ಸಾಕಿಕೊಂಡೆಯಂಬಿಕೆಯ ಮಗನಿಂದಾ (೨)

ಚಿಕ್ಕವರೊಡನೆ ಚಂಡು ಬುಗುರಿ ಈಸಿರೆ ಓಟ |
ತೆಕ್ಕೆ ಮುಷ್ಟಿ ಮರಗಳನೇರುವಲ್ಲಿ ||
ಸೊಕ್ಕಿದನಿವನೆಂದು ಆವಾಗಲೆಲ್ಲರಿಗೆ |
ಬಿಕ್ಕಿ ಬಾಯ್ದೆರೆವಂತೆ ಮಾಡಿ ತೋರಿಸಿದೆ (೩)

ಅಹಿತರಾದವರು ನೀರೊಳಗೆ ಕೆಡಹಲು ಎದ್ದೆ |
ಅಹಿಗಳಿಂ ಕಟ್ಟಿಸಲು ನೋಯದಿದ್ದೆ ||
ಸಹಿಸದಲೇ ವಿಷಹಾಕಿ ಬದುಕಲ್ಕೆ ಹೊರಘಾಕೆ |
ಮಹಮೋಸ ಮಾಡೆ ಗೆದ್ದು ಧರಿಯೊಳು ಮೆರೆದೆ (೪)

ಸೋಕಿಯಸುರಿಯ ಮಗನ ಪಡೆದು ಖಲನನು ತರಿದು |
ಏಕಚಕ್ರ ನಗರದಲ್ಲಿದ್ದು |
ಬೇಕೆಂದು ನೀನಾಗಿ ಪೋಗಿ ಬಕನನು ಕೊಂದೆ |
ಈ ಕುಂಭಿಣೀಯೊಳು ನಿನಗಿದಿರಾರು ದೇವಾ (೫)

ಪಾಂಚಾಲಿಯನು ಗಳಿಸೆ ಕೋಪದಿಂ ಬಂದಹರಿ|
ವಂಚಕರ ದರ್ಪವ ಭಂಗಿಸಿ ಲೀಲೆಯಿಂ |
ಮಿಂಚುವಾ ಗದೆಲಿಹ ನಿಶ್ಚಿಂತ ಬಲವಂತ |
ಮುಂಚಿನಜ ಪ್ರಣತ ಸುರಭೂಜ ರವಿತೇಜ (೬)

ಈ ಪರಿಯಿಂದ ಕೆಲಕಾಲವಲ್ಲೆಲ್ಲ |
ಕಾಪಾಡಿ ವಜ್ರಿಪ್ರಸ್ಥಕೈ ತಂದು ||
ಪಾಪಿ ಜರಿಜನ ಕೊಂದು ರಾಜಸೂಯವ ಮಾಡಿ |
ನೀಂ ಪಾಲಿಸಿದೆಯವನಿ ಸದ್ಧರ್ಮದಿಂದ (೭)

ದ್ಯೂತವಾಡಿದ ಸಮಯದಲ್ಲಿ ದ್ರೌಪದಿಯಳನು |
ಪಾತಕಿವಸವೆಳೆಯೆ ಕೋಪದಿಂದ ||
ಘಾತಿಸುವೆನೆಂದಬ್ಬರಿಸಿ ಪಲ್ಗಡಿದು ಲಕ್ಷ್ಮೀ |
ನಾಥನಿಚ್ಛೆಂಗೆ ಈಗೇಂದು ಕೈಮರೆದೇ (೮)

ತಮೋ ಯೋಗ್ಯನಾ ಪಾಪಪೂರ್ಣದಾಹದಕೆ ಬ- |
ಹು ಮಿತಿಯಿಂದ ವನವಾಸ ಪತ್ಕರಿಸಿದೆ ||
ಸಮರಾಂಗಣದೊಳಿವರ ಹೀಗೆ ಸವರುವೆನೆಂದು |
ಸುಮನಸಾರಾಧ್ಯ ಬಾಹುಗಳೆತ್ತಿ ನಡೆದೆ (೯)

ಕಾನನದಿ ಕಿರ್ಮೀರನಂ ಕೊಂದು ಖುಷಿಯಿಂದ |
ಮಾನವಂ ಕೈಕೊಂಡು ಮತ್ತೆ ಮುಂದೆ ||
ಆ ನಗದಿ ಬಹುಕಾಲ ಸೇರಿಕೊಂಡಿದ್ದಂಥ |
ದಾನವರ ಮಡುಹಿ ಸೌಗಂಧಿಕವ ತಂದೆ (೧೦)

ನಿನ್ನೊಳಗೆ ನೀಂ ಲೀಲೆ ಮಾಡಿದ್ಯಾ ಸಮಯದಲಿ |
ಚಿನ್ನದೋಪಮ ಪುಷ್ಪವೊಂದು ಬೀಳೆ ||
ನಿನ್ನರಸಿಯಿದು ಎನಗೆ ಇಷ್ಟವೆನಲವಳ ನುಡಿ |
ಮನ್ನಿಸುತೆ ಪೋಗಿ ಮಣಿಮಂತನೊಂಚಿಸಿದೆ (೧೧)

ದ್ವೈತ ವನದೊಳು ಬಂದು ಮೃಗಬೇಟೆಯಾಡೆ ಪುರು |
ಹೂತ ಪದವಾಳ್ದವನು ಮೈಯ್ಯ ಸುತ್ತಲ್ ||
ನೀತವಕಬೀಳದೆ ಅವನ ಪುನೀತನ ಮಾಡಿ |
ಖ್ಯಾತಿ ತಂದಿತ್ತೆಯಂತಕನ ಸುತಗಂದು (೧೨)

ಮತ್ಸ್ಯ ದೇಶಾಧಿಪನ ಮನೆಯಲ್ಲಿ ಇದ್ದಾಗ |
ಹೆಚ್ಚಿನಾ ಬಲದ ಮಲ್ಲನ ಕೆಡಹಿದೆ ||
ಅಚ್ಚ ಪಾಪಾತ್ಮ ಕೀಚಕನನ್ವಯ ತಂದೆ |
ಅಚ್ಯುತನ ನಿಜದಾಸ ಭಕ್ತರಘ ನಾಶ (೧೩)

ಎಂಟೈದು ವರುಷ ಈ ರೀತಿಯಲಿ ಕಳೆದು ವೈ- |
ಕುಂಠಪತಿ ದಯದಿಂದ ಉಪಪ್ಲಾವ್ಯದಿ ||
ಗಂಟು ಹಾಕಿದಿ ದುರಾತ್ಮನ ಕೂಡ ಸಂಗರಕೆ |
ಕಂಠೀರವರವದಿಂ ತಲೆದೂಗಿ ನಡೆದೆ (೧೪)

ಮುತ್ತೆ ಭೀಷ್ಮಗೆ ವಂದು ಸ್ವಲ್ಪಮಾತ್ರಕೆಮಾನ|
ವಿತ್ತಂತೆ ತೋರಿ ಎಲ್ಲರ ರಥವನೂ |
ಕತ್ತರಿಸಿ ಹಿಂದಕ್ಕೋಡಿಸಿದೆ ನಿನ್ನಾರ್ಭಟಕೆ |
ಹತ್ತು ದಿಕ್ಕಿನೊಳೊಬ್ಬರಿದಿರಾಗಲಿಲ್ಲ (೧೫)

ಪ್ರಹ್ಲಾದನವತಾರ ಬಾಹ್ಲೀಕನನು ಗೆದ್ದು |
ಮಹೀಜಸುತನಾನಿ ಮಸ್ತಕ ಶೀಳಿದೆ ||
ಬಹು ಖೋಡಿ ಧಾರ್ತರಾಷ್ಟ್ರರ ಕೊಂದು ಹರೆಬಿಟ್ಟ |
ಅಹಿಯಂತೆ ರಣರಂಗದಲ್ಲಿ ಸಂಚರಿಸಿದೆ (೧೬)

ಕಡು ಕೋಪದಿಂದ ಹೂಂಕರಿಸಿ ಯುರಿಯುಗುಳುತಲಿ |
ಪೊಡವಿ ನಡುಗಿಸಿ ನಭ ಬೇಯಿಸುತ್ತಲಿ ||
ಪಿಡಿದು ದುಶ್ಶಾಸನನ ತೊಡೆಯಲ್ಲಿ ನೆರೆಗೆಡಹಿ |
ಒಡಲ ಛೇದಿಸಿ ರಕ್ತ ಮಜ್ಜನವಗೈದೆ (೧೭)

ಕರುಳ ದಂಡೆಯ ಮಾಡಿ ಅರಸಿ ಮಂಡೆಗೆ ಮುಡಿಸಿ |
ಖರೆಯ ಮಾಡಿದೆ ಉಭಯತರ ಶಪಥವ ||
ಕರೆದೆ ಕುರು ಪಾಂಡವರ ಬಿಡಿಸ ಬನ್ನೀರೆಂದು |
ಮರುಳಗೊಂಡರೆಲ್ಲ ನಿನ್ನರೂಪನೋಡುತಲಿ (೧೮)

ಸ್ವಾಮಿ ಪ್ರಾಣೇಶ ವಿಠಲನ ಆಜ್ಞೆಯ ವಹಿಸಿ |
ಭೂಮಿ ಭಾರಿಳುಹುದಕೆ ಅವತರಿಸಿದೆ ||
ನಾ ಮಾಡುವೆನೆ ಪೂರ್ತಿ ನಿನ್ನ ಮಹಿಮೆಯ ಸಮರ |
ಭೀಮ ಕರಪಿಡಿದು ಸಲಹುವದೋ ಪ್ರತಿದಿನದಿ (೧೯)


namO namO SrI BIma | namO namO jitakAma |
kamalAkSha dAsa | poreyabjApta BAsa [pa]

GanagiriyoLage kuMti ninnettikoMDiralu |
dhvani mADe huli tAyi naDugi bisuTI ||
tanuvu ninnadu sOMke nagavoDedu SataSRuMga- |
venisikoMDitO dvAparadi balavaMta (1)

lOkadoLu manujarA SiSugaLaMdadi beLedu |
pAkaSAsani yamaja yamaLara jananI |
yA kUDikoMDu iBapurigaidi mOdadali |
sAkikoMDeyaMbikeya maganiMdA (2)

cikkavaroDane caMDu buguri Isire OTa |
tekke muShTi maragaLanEruvalli ||
sokkidanivaneMdu AvAgalellarige |
bikki bAyderevaMte mADi tOriside (3)

ahitarAdavaru nIroLage keDahalu edde |
ahigaLiM kaTTisalu nOyadidde ||
sahisadalE viShahAki badukalke horaGAke |
mahamOsa mADe geddu dhariyoLu merede (4)

sOkiyasuriya magana paDedu Kalananu taridu |
Ekacakra nagaradalliddu |
bEkeMdu nInAgi pOgi bakananu koMde |
I kuMBiNIyoLu ninagidirAru dEvA (5)

pAMcAliyanu gaLise kOpadiM baMdahari|
vaMcakara darpava BaMgisi lIleyiM |
miMcuvA gadeliha niSciMta balavaMta |
muMcinaja praNata suraBUja ravitEja (6)

I pariyiMda kelakAlavallella |
kApADi vajriprasthakai taMdu ||
pApi jarijana koMdu rAjasUyava mADi |
nIM pAlisideyavani saddharmadiMda (7)

dyUtavADida samayadalli draupadiyaLanu |
pAtakivasaveLeye kOpadiMda ||
GAtisuveneMdabbarisi palgaDidu lakShmI |
nAthanicCeMge IgEMdu kaimaredE (8)

tamO yOgyanA pApapUrNadAhadake ba- |
hu mitiyiMda vanavAsa patkariside ||
samarAMgaNadoLivara hIge savaruveneMdu |
sumanasArAdhya bAhugaLetti naDede (9)

kAnanadi kirmIranaM koMdu khuShiyiMda |
mAnavaM kaikoMDu matte muMde ||
A nagadi bahukAla sErikoMDiddaMtha |
dAnavara maDuhi saugaMdhikava taMde (10)

ninnoLage nIM lIle mADidyA samayadali |
cinnadOpama puShpavoMdu bILe ||
ninnarasiyidu enage iShTavenalavaLa nuDi |
mannisute pOgi maNimaMtanoMciside (11)

dvaita vanadoLu baMdu mRugabETeyADe puru |
hUta padavALdavanu maiyya suttal ||
nItavakabILade avana punItana mADi |
KyAti taMditteyaMtakana sutagaMdu (12)

matsya dESAdhipana maneyalli iddAga |
heccinA balada mallana keDahide ||
acca pApAtma kIcakananvaya taMde |
acyutana nijadAsa BaktaraGa nASa (13)

eMTaidu varuSha I rItiyali kaLedu vai- |
kuMThapati dayadiMda upaplAvyadi ||
gaMTu hAkidi durAtmana kUDa saMgarake |
kaMThIravaravadiM taledUgi naDede (14)

mutte BIShmage vaMdu svalpamAtrakemAna|
vittaMte tOri ellara rathavanU |
kattarisi hiMdakkODiside ninnArBaTake |
hattu dikkinoLobbaridirAgalilla (15)

prahlAdanavatAra bAhlIkananu geddu |
mahIjasutanAni mastaka SILide ||
bahu KODi dhArtarAShTrara koMdu harebiTTa |
ahiyaMte raNaraMgadalli saMcariside (16)

kaDu kOpadiMda hUMkarisi yuriyuguLutali |
poDavi naDugisi naBa bEyisuttali ||
piDidu duSSAsanana toDeyalli neregeDahi |
oDala CEdisi rakta majjanavagaide (17)

karuLa daMDeya mADi arasi maMDege muDisi |
Kareya mADide uBayatara Sapathava ||
karede kuru pAMDavara biDisa bannIreMdu |
maruLagoMDarella ninnarUpanODutali (18)

svAmi prANESa viThalana Aj~jeya vahisi |
BUmi BAriLuhudake avatariside ||
nA mADuvene pUrti ninna mahimeya samara |
BIma karapiDidu salahuvadO pratidinadi (19)

Leave a Reply

Your email address will not be published. Required fields are marked *

You might also like

error: Content is protected !!