Composer : Shri Purandara dasaru
ಮಧ್ವರಾಯ ಗುರು ಮಧ್ವರಾಯ ಗುರು
ಮಧ್ವರಾಯ ಗುರು ಮಧ್ವರಾಯ |ಪ|
ರಾಮಾವತಾರದೊಳೊಮ್ಮೆ ಮಧ್ವರಾಯ
ನೀ ಮಹಾ ಹನುಮನಾದ್ಯೋ ಮಧ್ವರಾಯ
ಕಾಮಿತಾರ್ಥ ಸುರರಿಗಿತ್ಯೋ ಮಧ್ವರಾಯ
ಮುಷ್ಟಿಯಿಂದ ರಾವಣನ ಗೆದ್ಯೋ ಮಧ್ವರಾಯ ||೧||
ಕೃಷ್ಣಾವತಾರದೊಳೊಮ್ಮೆ ಮಧ್ವರಾಯ
ನೀ ದಿಟ್ಟ ಕಲಿ ಭೀಮನಾದ್ಯೋ ಮಧ್ವರಾಯ
ಕುಟ್ಟಿದ್ಯೋ ಕೌರವನೆಲ್ಲ ಮಧ್ವರಾಯ ಶ್ರೀ
ಕೃಷ್ಣನ ಹಿತವ ಪಡೆದ್ಯೋ ಮಧ್ವರಾಯ ||೨||
ಧರಣಿಯೊಳು ಯತಿಯಾಗಿ ಮಧ್ವರಾಯ
ದುರುಳ ಮಾಯಿ ಮದವ ಮುರಿದ್ಯೋ ಮಧ್ವರಾಯ
ಗುರು ವ್ಯಾಸರ ಹಿತವ ಪಡೆದ್ಯೋ ಮಧ್ವರಾಯ
ಪುರಂದರ ವಿಠ್ಠಲನ ದಾಸನಾದ್ಯೋ ಮಧ್ವರಾಯ ||೩||
madhvarAya guru madhvarAya guru
madhvarAya guru madhvarAya |pa|
rAmAvatAradoLomme madhvarAya
nI mahA hanumanAdyO madhvarAya
kAmitArtha surarigityO madhvarAya
muShTiyiMda rAvaNana gedyO madhvarAya ||1||
kRuShNAvatAradoLomme madhvarAya
nI diTTa kali bhImanAdyO madhvarAya
kuTTidyO kauravanella madhvarAya SrI
kRuShNana hitava paDedyO madhvarAya ||2||
dharaNiyoLu yatiyAgi madhvarAya
duruLa mAyi madava muridyO madhvarAya
guru vyAsara hitava paDedyO madhvarAya
puraMdara viThThalana dAsanAdyO madhvarAya ||3||
Leave a Reply