Composer : Shri Gurupranesha vittala
ಆನಂದ ತೀರ್ಥರೆಂಬೊ | ಅರ್ಥೀಯ ಪೆಸರುಳ್ಳ |
ಗುರುಮಧ್ವ ಮುನಿರಾಯ |
ಏನೆಂಬೆನೋ ನಿನ್ನ ಕರುಣೆಗೆ ಎಣೆಗಾಣೆ
ಗುರುಮಧ್ವ ಮುನಿರಾಯ ||ಪ||
ಬೇಸರದೆ ಸರ್ವರೊಳು | ಶ್ವಾಸ ಜಪಗಳ ಮಾಡಿ
ಗುರುಮಧ್ವ ಮುನಿರಾಯ ||
ಶ್ರೀಶಗರ್ಪಿಸುತ ನಿನ್ನ | ದಾಸರನು ಸಲಹಿದೆ
ಗುರುಮಧ್ವ ಮುನಿರಾಯ ||೧ ||
ಅಂದು ಹನುಮಂತನಾಗಿ ಬಂದು ಸುಗ್ರೀವಗೆ
ಗುರುಮಧ್ವ ಮುನಿರಾಯ ||
ಅಂದವಾದ ಪದವಿತ್ತಾ |ನಂದದಿಂದ ಸಲಹಿದೆ
ಗುರುಮಧ್ವ ಮುನಿರಾಯ ||೨||
ಕುಂತಿಯ ಕುಮಾರನಾಗಿ | ಹಂತ ಕೌರವರ ಕೊಂದೆ
ಗುರುಮಧ್ವ ಮುನಿರಾಯ ||
ಅನಂತ ಪುಣ್ಯವ ಘಳಿಸಿ ಶ್ರೀಕಾಂತನಿಗರ್ಪಿಸಿದೆ
ಗುರುಮಧ್ವ ಮುನಿರಾಯ||೩||
ಅದ್ವೈತರನ್ನು ಕಾದು | ಗೆದ್ದು ನಿನ್ನ ಭಕ್ತರಿಗೆ
ಗುರುಮಧ್ವ ಮುನಿರಾಯ ||
ಶುದ್ಧ ತಾತ್ಪರ್ಯ ವಾಕ್ಯ | ಪದ್ಧತಿಯ ತೋರಿಸಿದೆ
ಗುರುಮಧ್ವ ಮುನಿರಾಯ ||೪||
ಗುರುಪ್ರಾಣೇಶ ವಿಠ್ಠಲ ಪರನೆಂದು ಡಂಗುರವ
ಗುರುಮಧ್ವ ಮುನಿರಾಯ ||
ಸಾರಿ ಸಜ್ಜನರಿಗೆ | ಹರಿಯಲೋಕ ತೋರಿಸಿದಿ
ಗುರುಮಧ್ವ ಮುನಿರಾಯ ||೫ ||
AnaMda tIrthareMbo | arthIya pesaruLLa |
gurumadhva munirAya |
EneMbenO ninna karuNege eNegANe
gurumadhva munirAya ||pa||
bEsarade sarvaroLu | shvAsa japagaLa mADi
gurumadhva munirAya ||
shrIshagarpisuta ninna | dAsaranu salahide
gurumadhva munirAya ||1 ||
aMdu hanumaMtanAgi baMdu sugrIvage
gurumadhva munirAya ||
aMdavAda padavittA |naMdadiMda salahide
gurumadhva munirAya ||2||
kuMtiya kumAranAgi | haMta kauravara koMde
gurumadhva munirAya ||
anaMta puNyava ghaLisi SrIkAMtanigarpiside
gurumadhva munirAya||3||
advaitarannu kAdu | geddu ninna Baktarige
gurumadhva munirAya ||
Suddha tAtparya vAkya | paddhatiya tOriside
gurumadhva munirAya ||4||
guruprANEsha viThThala paraneMdu DaMgurava
gurumadhva munirAya ||
sAri sajjanarige | hariyalOka tOrisidi
gurumadhva munirAya ||5 ||
Leave a Reply