Composer : Shri Shyamasundara dasaru
ಅಡವಿನಿಲಯ ನಿನ್ನಡಿಗೆರಗುವೆ
ಕರ ಪಿಡಿದು ಪಾಲಿಸಯ್ಯ ||ಪ||
ಮೃಡನುತ ಭಾರತಿ ಒಡೆಯನೆ ಪ್ರಾರ್ಥಿಪೆ |
ಬಿಡಿಸು ಭವದ ಮಾಯಾ ||ಅ.ಪ||
ನಿನ್ನ ದರುಶನದಿ | ಎನ್ನ ಜನುಮ
ಪಾವನ್ನ ವಾಯಿತಯ್ಯ |
ನಿನ್ನನುಗ್ರಹವನ್ನು ಪಡೆದ
ಸಂಪನ್ನರೊಳಿಡು ಜೀಯಾ ||೧||
ತರುಚರ ನರ ದ್ವಿಜ ವರರೂಪತ್ರಯ
ಧರಿಸಿದಂತ ದೇವ ||
ದುರುಳ ದೈತ್ಯ ಪರಿವಾರ ಗರ್ವಹರ
ಶರಣರ ಸಂಜೀವ ||೨||
ಸೃಷ್ಟಿಯೊಳಗೆ ಅತಿ ಶ್ರೇಷ್ಠವೆಂದೆನಿಸಿದ
ಕುಷ್ಟಗಿ ಪುರವಾಸ
ಧಿಟ್ಟ ಮೂರುತಿ ಶಾಮಸುಂದರ
ವಿಠ್ಠಲ ಪ್ರಿಯದಾಸ ||೩||
aDavinilaya ninnaDigeraguve
kara piDidu pAlisayya ||pa||
mRuDanuta bhArati oDeyane prArthipe |
biDisu bhavada mAyA ||a.pa||
ninna darushanadi | enna januma
pAvanna vAyitayya |
ninnanugrahavannu paDeda
saMpannaroLiDu jIyA ||1||
tarucara nara dvija vararUpatraya
dharisidaMta dEva ||
duruLa daitya parivAra garvahara
sharaNara saMjIva ||2||
sRuShTiyoLage ati SrEShThaveMdenisida
kuShTagi puravAsa
dhiTTa mUruti shAmasuMdara
viThThala priyadAsa ||3||
Leave a Reply