Soda puradali nintu

Composer : Shri Gurujagannatha dasaru on Shri Vadirajaru

ಸೋದಾಪುರದಲಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯಾ ||ಪ||
ಭೂಧರ ಹಯಮುಖ ಪಾದವ ಭಜಿಸುವ
ವಾದಿಗಜಕೆ ಮೃಗರಾಜ ಕಾಣಮ್ಮಯ್ಯ ||ಅ.ಪ||

ಅಂಚೆವಾಹನ ಪ್ರಪಂಚದಿ ಪೊಳೆವ ವಿ –
ರಿಂಚಿಗೆ ಸಮನೇನೆ ಪೇಳಮ್ಮಯ್ಯಾ
ಸಂಚಿತ ಕರ್ಮವ ಕೊಂಚಿಸಿ ಭಕ್ತರ
ಚಂಚಲ ಬಿಡಿಸುವನ್ಯಾರೇ ಪೇಳಮ್ಮಯ್ಯಾ
ಮಿಂಚುರಾಶಿಗೆ ಸಮ ಪಂಚವೃಂದಾವನ
ಲಾಂಚಿತನಾಗಿಹನ್ಯಾರೆ ಪೇಳಮ್ಮಯ್ಯಾ
ಚಂಚಲಾಕ್ಷಿ ತಿಳಿ ಪಂಚರೂಪಾತ್ಮಕ
ಮುಂಚಿಗೆ ಪ್ರಾಣ ವಿರಿಂಚಿ ಕಾಣಮ್ಮಾಯ್ಯ [೧]

ಸುಂದರ ಶುಭತಮ ವೃಂದಾವನ ನಿಜ
ಸ್ತಿತನ್ಯಾರೇ ಪೇಳಮ್ಮಯ್ಯಾ
ವಂದಿಪ ಜನರಘ ವೃಂದ ಕಳೆದು ಆ
ನಂದ ನೀಡುವನ್ಯಾರೇ ಪೇಳಮ್ಮಯ್ಯಾ
ಇಂದು ಮುಖಿಯೆ ಈತ ಗಂಧವಾಹನನಾಗಿ
ಮಂದಜಾಸನ ಪದಪೊಂದಿಹ ನಮ್ಮಾ [೨]

ಖ್ಯಾತಮಹಿಮ ಮಾಯಿವ್ರಾತಗಳ ವಿ –
ಘಾತವ ಮಾಡಿಹನ್ಯಾರೇ ಪೇಳಮ್ಮಯ್ಯಾ
ಆತುರ ಜನರಿಗೆ ಮಾತಾ ಪಿತರಂತೆ
ನೀತಪಾಲಿಸುವನ್ಯಾರೇ ಪೇಳಮ್ಮಯ್ಯಾ
ದಾತ ಗುರುಜಗನ್ನಾಥವಿಠಲನ
ಪ್ರೀತಿಯ ಪಡೆದಿಹನ್ಯಾರೇ ಪೇಳಮ್ಮಯ್ಯಾ
ವೀತಭಯ ಪುರುಹೂತ ಪ್ರಮುಖ
ಭೂತನಾಥನನುತ ಮಾತರಿಶ್ವನಮ್ಮಾ [೩]


sOdApuradali niMta suyativaranyArE pELammayyA ||pa||
BUdhara hayamuKa pAdava Bajisuva
vAdigajake mRugarAja kANammayya ||a.pa||

aMcevAhana prapaMcadi poLeva vi –
riMcige samanEne pELammayyA
saMcita karmava koMcisi Baktara
caMcala biDisuvanyArE pELammayyA
miMcurASige sama paMcavRuMdAvana
lAMcitanAgihanyAre pELammayyA
caMcalAkShi tiLi paMcarUpAtmaka
muMcige prANa viriMci kANammAyya [1]

suMdara shubhatama vRuMdAvana nija
stitanyArE pELammayyA
vaMdipa janaraGa vRuMda kaLedu A
naMda nIDuvanyArE pELammayyA
iMdu muKiye Ita gaMdhavAhananAgi
maMdajAsana padapoMdiha nammA [2]

KyAtamahima mAyivrAtagaLa vi –
GAtava mADihanyArE pELammayyA
Atura janarige mAtA pitaraMte
nItapAlisuvanyArE pELammayyA
dAta gurujagannAthaviThalana
prItiya paDedihanyArE pELammayyA
vItaBaya puruhUta pramuKa
BUtanAthananuta mAtariSvanammA [3]

Leave a Reply

Your email address will not be published. Required fields are marked *

You might also like

error: Content is protected !!