Composer : Shri Varada Vittala
ಸಾರಿ ಭಜಿಸುವೆ ಸೂರ್ಯಾಂತರ್ಗತ ನಾರಾಯಣ ನಿನ್ನ (ಪ್)
ಘೋರತರ ಈ ಭವವ ತಾರಿಸೊ ನಾರಿಕಾಂತ ದುಷ್ಟಹಂತ (ಅ)
ಬಾಲಕ ಧ್ರುವ ರಾಜನಂತೆ , ವಾಯು ಸುತನಂತೆ
ಶೀಲ ಅಜಮಿಳನಂತೆ , ಮತ್ತಾ ಸತ್ರಾಜಿತನಂತೆ |
ಕಾಲಸುತ ಶ್ರೀ ಧರ್ಮನಂತೆ, ವೀರ ಮಾತೆ ಕುಂತಿಯಂತೆ
ಬಾಲೆ ದ್ರೌಪದಿ ಕಾಯ್ದೆಯಂತೆ, ಕಾಲ ಮೂರ್ತಿ ಭಕ್ತರಂತೆ (೧)
ಕಂಜ ಸಖನ ಮಧ್ಯನಂತೆ, ಕಂಜ ಸ್ತಿಥನಂತೆ
ಕಂಜಾದಿ ಧರಿಸಿದಂತೆ, ಕಂಜ ನಯನಂತೆ
ಕಂಜಸದ್ಮಗೆ ನಾಥನಂತೆ, ಬಾಡದೆ ಸರ ಧರಿಸಿದಂತೆ
ಕುಂಜರ ಕರೆಗೊದಗಿದಂತೆ , ಬಂಧಿಸೆನ್ನ ಪಾಪ ಕಂತೆ (೨)
ದಕ್ಷಿನಾಕ್ಷಿಯೊಳಿರುವಿಯಂತೆ ವಕ್ಷ ಸ್ಥಳವಂತೆ
ಪಕ್ಷಿವಾಹನನಂತೆ ಮತ್ತೆ ಸಾಕ್ಷಿ ನೀನಂತೆ
ಕುಕ್ಷಿಯೊಳು ಈರೇಳು ಲೋಕವ ಇಟ್ಟು ನೀನು ರಕ್ಷಿಪೆಯಂತೆ
ಮೋಕ್ಷದಾತ ಭಕ್ತರಿಗಂತೆ, ವರದ ವಿಠ್ಠಲ ನೀನಂತೆ (೩)
saari bhajisuve sUryAMtargata nArAyaNa ninna (p)
ghOratara ee bhavava taariso nArikAMta duShTahaMta (a)
bAlaka dhruva rAjanaMte , vAyu sutanaMte
sheela ajamiLanaMte , mattA satrAjitanaMte |
kAlasuta shrI dharmanaMte, veera mAte kuMtiyaMte
bAle draupadi kAydeyaMte, kAla moorti bhaktaraMte (1)
kaMja sakhana madhyanaMte, kaMja stithanaMte
kaMjAdi dharisidaMte, kaMja nayanaMte
kaMjasadmage nAthanaMte, bADade sara dharisidaMte
kuMjara karegodagidaMte , baMdhisenna paapa kaMte (2)
dakShinAkShiyoLiruviyaMte vakSha sthaLavaMte
pakShivAhananaMte matte sAkShi neenaMte
kukShiyoLu eerELu lOkava iTTu neenu rakShipeyaMte
mOkShadAta bhaktarigaMte, varada viThThala neenaMte (3)
Leave a Reply