Composer : Shri Venugopala vittala dasaru on Shri Vadirajaru
ಸಂತೈಸು ತವದಾಸನೆಂದೆನ್ನನೂ |ಪ|
ಸ್ವಾಂತದಲಿ ನೆಲಸಿ ಏಕಾಂತ ಭಕ್ತೋತ್ತಮನೆ |ಅ.ಪ|
ವಾಗೀಶ ಮುನಿಕರಾಂಬುಜ ಜಪದಿಂದ ಸಂಭವಿಸಿ
ಆಗಮೋಕ್ತಾರ್ಥಗಳ ಶಿಷ್ಯರಾದ
ಭಾಗವತ ಜನರಿಗುಲ್ಹಾಸದಲಿ ಬಿಡದೆ
ಚೆನ್ನಾಗಿ ವ್ಯಾಖ್ಯಾನವನು ಪೇಳ್ದಗುರು ಸುರತರುವೇ ||೧||
ಮೋದ ತೀರ್ಥಾನುಜರ ವಂಶಾಂಬುನಿಧಿ ಚಂದ್ರ
ಬಾಧಿಸುವ ದುಃಶಾಸ್ತ್ರಗಳನೆ ಮುರಿದೂ
ವಾದದಿಂದಲೆ ಸಕಲ ಮೇದಿನಿಯೊಳಗಿಪ್ಪ ದು-
ರ್ವಾದಿಗಳ ಭಂಗಿಸಿದೆ ಮಾಧವನ ಪ್ರಿಯನೇ ||೨||
ಕಲಿಕೃತಾಚರಣೆಗಳ ಬಲಿಯೆ ಹರಿ ಆಜ್ಞೆಯಿಂ
ದಿಳಿಯೊಳವತರಿಸಿ ಸಜ್ಜನರಿಗೆಲ್ಲಾ
ತಿಳಿಯೆ ಪರತತ್ವವನು ಶಾಸ್ತ್ರಮುಖದಿಂದ ಯತಿ
ಕುಲತಿಲಕ ನಂಬಿದವರಿಗೆ ನಿತ್ಯ ಸುರಧೇನು ||೩||
ಪಾದಚಾರಿಗಳಾಗಿ ತೀರ್ಥಯಾತ್ರೆಗಳ ಸಂ-
ಮೋದದಲಿ ಚರಿಸುತಲಿ ಚಮತ್ಕೃತಿಯಲೀ
ಸಾಧು ಸಮ್ಮತವಾದ ತೀರ್ಥ ಪ್ರಬಂಧವನು
ಆದರದಿ ರಚಿಸಿದ ಮಹಾ ದಯಾಂಬುಧಿಯೆ ||೪||
ಕ್ಷೋಭಕಾಲದಲಿ ಸಂಚರಿಸುತ್ತಿರಲು ಅ-
ಹೋಬಲದಿ ನೈವೇದ್ಯ ಕಲಹದಿಂದ
ಕ್ಷೋಭಿಗರ ಮಿಶ್ರಿತಾನ್ನವನುಂಡು ಕರಗಿಸಿದೆ |
ಶ್ರೀಭಾರತಿರಮಣನಂತೆ ಹರಿ ಕರುಣದಲಿ ||೫||
ಚಂದ್ರಿಕಾಚಾರ್ಯರಲಿ ಶಿಷ್ಯರಂದದಿ ಚರಿಸಿ ಆ –
ನಂದದಿಂದಲಿ ವ್ಯಾಸ ಪ್ರತೀಕವನ್ನು
ತಂದು ನಿರ್ಭಯದಿ ಸರ್ವತ್ರದಲಿ ಮೆರೆದೆ ಯೋ –
ಗೀಂದ್ರ ದಂಡ ಕಾಷಾಯ ಧರಿಸಿದ ಗುರುವೆ ||೬||
ಅಂಕದಲ್ಲಿಪ್ಪ ಬಾಲಕನ ಬರುತಲೆ ಕಂಡು
ಶಂಖಚಾಕ್ರಾಂಕಿತನು ಈತನೆಂದು
ಶಂಕಿಸದೆ ಎನಗೆ ಪ್ರಾಗ್ಜನಮದಲಿ ಪೇಳ್ದೆ ಅಕ-
ಳಂಕ ಸನ್ಮಹಿಮ ಹಯಮುಖನ ದಾಸಾಗ್ರಣಿಯೇ ||೭||
ಮಾರಪಿತ ನೀರಜಾಸನ ತೀವ್ರಗಮನ ಪ-
ದ್ಮಾರಿ ಮೌಳಿಗಳಿಂದ ಸಹಿತರಾಗಿ
ಸಾರಶ್ವೇತದೊಳಗಿಪ್ಪ ತೆರನಂತೆ
ಧೀರ ವೃಂದಾವನದಿ ತೋರುವೆ ನಿರಂತರದಿ ||೮||
ಸನ್ಮಹಿಮ ವೇಣುಗೋಪಾಲವಿಟ್ಠಲ ಯದುವ-
ರೇಣ್ಯನ ಕೃಪಾ ಪಾತ್ರನೆಂದೆನಿಸುವ
ಘನ್ನ ಋಜುಗಣದೊಳಗೆ ಮಾನ್ಯನಾಗಿಹ ಸುಪ್ರ –
ಸನ್ನ ದ್ವಿಜಕುಲರನ್ನ ನಂಬಿದೆನೋ ನಿನ್ನ ||೯||
saMtaisu tavadAsaneMdennanU |pa|
svAMtadali nelasi EkAMta BaktOttamane |a.pa|
vAgISa munikarAMbuja japadiMda saMBavisi
AgamOktArthagaLa SiShyarAda
BAgavata janarigulhAsadali biDade
cennAgi vyAKyAnavanu pELdaguru surataruvE ||1||
mOda tIrthAnujara vaMSAMbunidhi caMdra
bAdhisuva duHSAstragaLane muridU
vAdadiMdale sakala mEdiniyoLagippa du-
rvAdigaLa BaMgiside mAdhavana priyanE ||2||
kalikRutAcaraNegaLa baliye hari Aj~jeyiM
diLiyoLavatarisi sajjanarigellA
tiLiye paratatvavanu SAstramuKadiMda yati
kulatilaka naMbidavarige nitya suradhEnu ||3||
pAdacArigaLAgi tIrthayAtregaLa saM-
mOdadali carisutali camatkRutiyalI
sAdhu sammatavAda tIrtha prabaMdhavanu
Adaradi racisida mahA dayAMbudhiye ||4||
kShOBakAladali saMcarisuttiralu a-
hObaladi naivEdya kalahadiMda
kShOBigara miSritAnnavanuMDu karagiside |
SrIBAratiramaNanaMte hari karuNadali ||5||
caMdrikAcAryarali SiShyaraMdadi carisi A –
naMdadiMdali vyAsa pratIkavannu
taMdu nirBayadi sarvatradali merede yO –
gIMdra daMDa kAShAya dharisida guruve ||6||
aMkadallippa bAlakana barutale kaMDu
SaMKacAkrAMkitanu ItaneMdu
SaMkisade enage prAgjanamadali pELde aka-
LaMka sanmahima hayamuKana dAsAgraNiyE ||7||
mArapita nIrajAsana tIvragamana pa-
dmAri mauLigaLiMda sahitarAgi
sAraSvEtadoLagippa teranaMte
dhIra vRuMdAvanadi tOruve niraMtaradi ||8||
sanmahima vENugOpAlaviTThala yaduva-
rENyana kRupA pAtraneMdenisuva
Ganna RujugaNadoLage mAnyanAgiha supra –
sanna dvijakularanna naMbidenO ninna ||9||
Leave a Reply