Composer : Shri Vadirajaru
ಸಾರಿದೆನೊ ನಾ ನಿನ್ನ ವೆಂಕಟರನ್ನ ||ಪ||
ನೀರಜನಯನನೆ ನಿರ್ಮಲ ಗುಣಪೂರ್ಣ ||ಅ.ಪ||
ಅನಾಥನು ನಾನು ಎನಗೆ ಬಂಧುವು ನೀನು
ನಿನ್ನವನೆಂದು ನೋಡೊ ನೀನಾಗಿ ದಯಮಾಡೊ ||೧||
ಎನ್ನ ಕುಂದುಗಳನ್ನು ಎಣಿಸಲಾಗದೊ ದೇವ
ಪನ್ನಗಾದ್ರಿವಾಸ ನೀನೆ ನಿರ್ದೋಷ ||೨||
ದೇಶದೇಶದವರ ಪೊರೆವಂತೆ ಪೊರೆಯೆನ್ನ
ಶೇಷಾಚಲ ಘನ್ನ ಶ್ರೀಶ ಶ್ರೀಹಯವದನ ||೩||
sArideno nA ninna veMkaTaranna ||pa||
nIrajanayanane nirmala guNapUrNa ||a.pa||
anAthanu nAnu enage baMdhuvu nInu
ninnavaneMdu nODo nInAgi dayamADo ||1||
enna kuMdugaLannu eNisalAgado dEva
pannagAdrivAsa nIne nirdOSha ||2||
dESadESadavara porevaMte poreyenna
SEShAcala Ganna SrISa SrIhayavadana ||3||
Leave a Reply