Composer : Shri Purandara dasaru
ನಾರಾಯಣಾಯ ನಮೋ ನಾಗೇಂದ್ರ ಶಯನಾಯ
ನಾರದಾದ್ಯಖಿಳ ಮುನಿ ನಮಿತ ಚರಣಾಂಭೋಜ
ಸಾರಿದರೆ ಪೊರೆವ ಕಂಸಾರಿ ರಕ್ಷಿಪುದಿಂದು
ಕಾರುಣ್ಯದಿಂದೊಲಿದು ಹರಿಯೇ ||ಪ||
ಪಾಂಡ್ಯದೇಶದೊಳು ಇಂದ್ರದ್ಯುಮ್ನನೆಂಬ ಭೂ
ಮಂಡಲಾಧಿಪನು ವೈರಾಗ್ಯದಲಿ
ಹರಿಪಾದ ಪುಂಡರೀಕನ ಧ್ಯಾನದಿಂ ಮಹಾತಪದೊಳಿರೆ
ಚಂಡತಾಪಸ ಅಗಸ್ತ್ಯ
ಹಿಂಡು ಶಿಷ್ಯರವೆರಸಿ ಬರಲು ಸತ್ಕರಿಸದಿರೆ
ಕಂಡು ಗಜಯೋನಿಯಲಿ ಜನಿಸು ಹೋಗೆನುತ-ಲುದ್ದಂಡ
ಶಾಪವನಿತ್ತು, ಮುನಿ ಪೋಗುತ್ತಿರಲತ್ತ
ಶುಂಡಾಲ-ನಾದನರಸ ||೧||
ಕ್ಷೀರ ಸಾಗರತಡಿಯ ಐದು ಯೋಜನದ
ವಿಸ್ತಾರದಲಿ ವರ ತ್ರಿಕೂಟಾದ್ರಿ ಶೃಂಗತ್ರಯದಿ
ರಾರಾಜಿಸುತಲಿಪ್ಪ
ರಜತ ತಾಮ್ರಧ್ವಜದ ಮೇರುಸಮ ಗಾಂಭೀರ್ಯದಿ
ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ
ಸೌರಭದೊಳಶ್ವತ್ಥ ಪೂಗು ಪುನ್ನಾಗ
ಜಂಬೀರಾದಿ ತರುಗುಲ್ಮ ಖಗ ಮೃಗಗಳೆಸೆವಲ್ಲಿ
ವಾರಣೇಂದ್ರನು ಮೆರೆದನು ||೨||
ಆನೆ ಹೆಣ್ಣಾನೆ ಮರಿಯಾನೆಗಳ ಸಹಿತ ಆ
ಕಾನನದಿ ನಲಿಯುತ್ತ ಬೇಸಿಗೆಯ ಬಿಸಿಲಿನಲಿ
ತಾ ನೀರಡಿಸಿ ಬಂದುದೊಂದು ಸರಸಿಗೆ ಸಲಿಲ
ಪಾನಾಭಿಲಾಷೆಯಿಂದ
ನಾನಾ ಪ್ರಕಾರದಲಿ ಜಲಕ್ರೀಡೆಯಾಡುತಿರಿ
ಏನಿದೆತ್ತಣ ರಭಸವೆಂದುಗ್ರ ಕೋಪದಿಂದಾ
ನೆಗಳು ಬಾಯ್ತೆರೆದು ನುಂಗಿ-ಕೊಂಡಂಘ್ರಿಯನು
ಏನೆಂಬೆನಾಕ್ಷಣದೊಳು ||೩||
ಒತ್ತಿ ಹಿಡಿದೆಳೆಯುತಿರೆ ಎತ್ತಣದಿದೇನೆನುತ
ಮತ್ತ ಗಜರಾಜ ಅವುಡೊತ್ತಿ ಘೀಳಿಡುತ-ಲೆಳದೊತ್ತಿ
ತಂದುದು ದಡಕೆ ಮತ್ತೆ
ನಡುಮಡುವಿನೊ-ಳಗೆತ್ತೆ-ಳೆದುದಾ-ನೆಗಳವು
ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ
ವಿಸ್ತರಿಸಿ-ತೇನೆಂಬೆ ಮತ್ತಾ ಗಜೇಂದ್ರಂಗೆ
ಸತ್ವ ತಗ್ಗಿತು ತನ್ನ ಚಿತ್ತದೊಳು ಧ್ಯಾನಿಸುತ
ಮತ್ತಾರು ತನಗೆನುತಲಿ ||೪||
ಬಂದುದಾ ಸಮಯದಲಿ ಹಿಂದೆ ಮಾಡಿದ
ಸುಕೃತದಿಂದ ದಿವ್ಯಜ್ಞಾನ ಕಣ್ದೆರದು ಕೈಮುಗಿದು
ವಂದಿಸುತ ಮನದೊ-ಳರವಿಂದನಾಭಾಚ್ಯುತ
ಮುಕುಂದ ಮುನಿವೃಂದವಂದ್ಯ
ಇಂದಿರಾರಮಣ ಗೋವಿಂದ ಕೇಶವ ಭಕ್ತ
ಬಂಧು ಕರುಣಾಸಿಂಧು ತಂದೆ ನೀ ಸಲಹೆನ್ನ
ಬಂದು ಸಿಲುಕಿದೆನು ಬಲು ದಂದುಗದ ಮಾಯಾ
ಪ್ರಬಂಧದಿಂ ನೆಗಳೆಯಿಂದ ||೫||
ಪರಮಾತ್ಮ ಪರಿಪೂರ್ಣ ಪರಮೇಶ ಪರತತ್ತ್ವ
ಪರತರ ಪರಂಜ್ಯೋತಿ ಪರಮಪಾವನ ಮೂರ್ತಿ
ಪರಮೇಷ್ಠಿ ಉರುತರಾ ಪರಬ್ರಹ್ಮ ಆನಂದ
ಪರಮೇಷ್ಠಿ ಪರಾತ್ಪರ, ಪರಮಪುರುಷ
ನಿರುಪಮ ನಿಜಾನಂದ ನಿರ್ಭಯ ನಿರಾವರಣ
ನಿರವಧಿಕ ನಿರ್ಗುಣ ನಿರಂಜನ ನಿರಾಧಾರ
ನಿರವೇದ್ಯ ನಿಸ್ಸಂಗ ನಿಶ್ಚಿಂತ್ಯ ನಿತ್ಯನೇ ನೋಯಿಸದೆ
ಸಲಹೆನ್ನ ಹರಿಯೇ ||೬||
ಇಂತೆನುತ ಮೂರ್ಛೆಯಲಿ ಕಂಪಿತ ಕಂಠ
ಧ್ವನಿಯೊಳ್-ಅಂತರಾತ್ಮಕನ
ನೆನೆಯುತ್ತ-ಳುತ್ತಿರ-ಲಿತ್ತನಂತ ಮಹಿಮನು ಕೇಳಿ
ಕರುಣದಿಂ-ದಾಕ್ಷಣಾ-ನಂತ-ಶಯನದಿಂ-ದೆದ್ದನು
ಸಂತೈಸಿ ಸಿರಿ ಸಹಿತ ಗರುಡ ವಾಹನನಾಗಿ
ಚಿಂತೆ ಬೇಡೇಳೆನುತ ಅಭಯ ಹಸ್ತವನಿತ್ತೇ
ಕಾಂತ ಭಕ್ತನ ಬಳಿಗೆ ಬಂದೆರಡು
ಕೈಯಿಂದ ದಂತಿವರನನು ನೆಗೆಹಿದ ||೭||
ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ
ಉಗುವ ಕರುಣದಲಿ ಮೈದಡಹಲ್ಕೆ ಗಜ ಜನ್ಮ
ತೆಗುದು-ದಾಕ್ಷಣದಿ ಮಣಿಮಕರ
ಕುಂಡಲದಿಂದ ಮಿಗೆ ಶೋಭಿಸುತಲೆಸೆದನು
ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ
ಮಿಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ
ಅಘಹರನ ಕಂಡು ನಿಜ ಗತಿಯೈದು-ದಮರರೋಳ್
ಮಿಗೆ ಮೆರೆದುದೋಲೈಸುತ ||೮||
ಮಣಿಮಯ ಕಿರೀಟಕುಂಡಲ ಹಾರ ಕೌಸ್ತುಭದ
ಮಿನುಗುತಿಹ ವೈಜಯಂತಿಯ ಭೂಷಣಾಂಗದ
ಫಣೆಯ ಕಸ್ತೂರಿ ತಿಲಕ ನಾಮದಿಂದೆಸೆವುತಿಹ
ವರ ಶಂಖ ಚಕ್ರದಿಂದ
ಝಣಿಝಣಿತ ನೂಪುರದ ದಂತ ಪಂಕ್ತಿಯ ಕೃಪೇ
ಕ್ಷಣದ ಸಿರಿಮೊಗದ ಪೀತಾಂಬರಾ-ಲಂಕೃತ
ಮಣಿದಾ ಜಯ ಜಯವೆಂಬ ಸುರಸಿದ್ಧ ಸಾಧ್ಯ
ಸಂದಣಿಯೊಳಗೆ ಹರಿ ಮೆರೆದನು ||೯||
ಹರಿಸ್ತುತಿಯ ಗೈದಂಘ್ರಿ-ಗೆರಗಲಾ
ಭೂಪನಾದರದಿಂದ
ಸತ್ಕರಿಸಿ ಶರಧಿ ಶ್ವೇತದೀಪ
ಗಿರಿಶೃಂಗ ವಾರಾಶಿ ತರುಶೇಷ ವಾಲ್ಮೀಕಿ ಮುನಿ
ಧರಣಿ ಧ್ರುವ ಲಕ್ಷ್ಮಿಯು
ಹರ ಗಿರಿಜೆ ವಿಧಿ ವಾಣಿ ನಾರದ ಪ್ರಹ್ಲಾದ
ಗರುಡ ಗೋ ವಿಪ್ರ ಋಷಿ ಗಂಗಾರ್ಕ ಚಂದ್ರಾಗ್ನಿ
ಸಿರಿವತ್ಸ ಶಂಖ ಚಕ್ರಾದಿ-ಯವತಾರಗಳ
ಸ್ಮರಿಸುವವರ ಕಾಯ್ವೆನೆಂದ ||೧೦||
ಆವನಿದ-ನುದಯ ಕಾಲದೊಳೆದ್ದು ನಿಜ ಭಕ್ತಿ
ಭಾವ ಶುದ್ಧಿಗಳಿಂದ ಪೇಳಿ ಕೇಳುವ
ಜನರಘಾವಳಿಯ ಪರಿಹರಿಸಿ ಸುಜ್ಞಾನ ಪದವಿತ್ತು
ದೇಹವಸಾನದೊಳಗೆ
ಶ್ರೀ ವಾಸುದೇವ-ನಾಜ್ಞಾಪಿಸಿ ಗಜೇಂದ್ರ ಸಹಿತಾ
ವಿಹಂಗಾಧಿಪನೇರಿ ವೈಕುಂಠಕ್ಕೆ
ದೇವ ಬಿಜಯಂಗೈದ ಶ್ರೀಹರಿ ಪುರಂದರವಿಠ್ಠಲನು ||೧೧||
nArAyaNAya namO nAgEMdra SayanAya
nAradAdyaKiLa muni namita caraNAMBOja
sAridare poreva kaMsAri rakShipudiMdu
kAruNyadiMdolidu hariyE ||pa||
pAMDyadESadoLu iMdradyumnaneMba BU
maMDalAdhipanu vairAgyadali
haripAda puMDarIkana dhyAnadiM mahAtapadoLire
caMDatApasa agastya
hiMDu SiShyaraverasi baralu satkarisadire
kaMDu gajayOniyali janisu hOgenuta-luddaMDa
SApavanittu, muni pOguttiralatta
SuMDAla-nAdanarasa ||1||
kShIra sAgarataDiya aidu yOjanada
vistAradali vara trikUTAdri SRuMgatrayadi
rArAjisutalippa
rajata tAmradhvajada mErusama gAMBIryadi
pArijAtAMBOja tuLasi mallige jAji
sauraBadoLaSvattha pUgu punnAga
jaMbIrAdi tarugulma Kaga mRugagaLesevalli
vAraNEMdranu meredanu ||2||
Ane heNNAne mariyAnegaLa sahita A
kAnanadi naliyutta bEsigeya bisilinali
tA nIraDisi baMdudoMdu sarasige salila
pAnABilASheyiMda
nAnA prakAradali jalakrIDeyADutiri
EnidettaNa raBasaveMdugra kOpadiMdA
negaLu bAyteredu nuMgi-koMDaMGriyanu
EneMbenAkShaNadoLu ||3||
otti hiDideLeyutire ettaNadidEnenuta
matta gajarAja avuDotti GILiDuta-leLadotti
taMdudu daDake matte
naDumaDuvino-Lagette-LedudA-negaLavu
ittaMDavittu kAdittu sAvira varuSha
vistarisi-tEneMbe mattA gajEMdraMge
satva taggitu tanna cittadoLu dhyAnisuta
mattAru tanagenutali ||4||
baMdudA samayadali hiMde mADida
sukRutadiMda divyaj~jAna kaNderadu kaimugidu
vaMdisuta manado-LaraviMdanABAcyuta
mukuMda munivRuMdavaMdya
iMdirAramaNa gOviMda kESava Bakta
baMdhu karuNAsiMdhu taMde nI salahenna
baMdu silukidenu balu daMdugada mAyA
prabaMdhadiM negaLeyiMda ||5||
paramAtma paripUrNa paramESa paratattva
paratara paraMjyOti paramapAvana mUrti
paramEShThi urutarA parabrahma AnaMda
paramEShThi parAtpara, paramapuruSha
nirupama nijAnaMda nirBaya nirAvaraNa
niravadhika nirguNa niraMjana nirAdhAra
niravEdya nissaMga niSciMtya nityanE nOyisade
salahenna hariyE ||6||
iMtenuta mUrCeyali kaMpita kaMTha
dhvaniyoL-aMtarAtmakana
neneyutta-Luttira-littanaMta mahimanu kELi
karuNadiM-dAkShaNA-naMta-SayanadiM-deddanu
saMtaisi siri sahita garuDa vAhananAgi
ciMte bEDELenuta aBaya hastavanittE
kAMta Baktana baLige baMderaDu
kaiyiMda daMtivarananu negehida ||7||
negaLa bAyanu cakradali sILi karivarana
uguva karuNadali maidaDahalke gaja janma
tegudu-dAkShaNadi maNimakara
kuMDaladiMda mige SOBisutalesedanu
vigaDa dEvala RuShiya SApadali biddiLege
mige nakranAgi hUhU eMba gaMdharva
aGaharana kaMDu nija gatiyaidu-damararOL
mige meredudOlaisuta ||8||
maNimaya kirITakuMDala hAra kaustuBada
minugutiha vaijayaMtiya bhUShaNAMgada
PaNeya kastUri tilaka nAmadiMdesevutiha
vara SaMKa cakradiMda
JaNiJaNita nUpurada daMta paMktiya kRupE
kShaNada sirimogada pItAMbarA-laMkRuta
maNidA jaya jayaveMba surasiddha sAdhya
saMdaNiyoLage hari meredanu ||9||
haristutiya gaidaMGri-geragalA
BUpanAdaradiMda
satkarisi Saradhi SvEtadIpa
giriSRuMga vArASi taruSESha vAlmIki muni
dharaNi dhruva lakShmiyu
hara girije vidhi vANi nArada prahlAda
garuDa gO vipra RuShi gaMgArka caMdrAgni
sirivatsa SaMKa cakrAdi-yavatAragaLa
smarisuvavara kAyveneMda ||10||
Avanida-nudaya kAladoLeddu nija Bakti
BAva SuddhigaLiMda pELi kELuva
janaraGAvaLiya pariharisi suj~jAna padavittu
dEhavasAnadoLage
SrI vAsudEva-nAj~jApisi gajEMdra sahitA
vihaMgAdhipanEri vaikuMThakke
dEva bijayaMgaida SrIhari puraMdaraviThThalanu ||11||
Leave a Reply