Composer : Shri Vadirajaru
ಎಂದು ಕಾಂಬೆನು ಎನ್ನ ಸಲಹುವ
ಬಂಧು ಬಳಗ ನಮ್ಮಪ್ಪನ ||
ತಿರುಪತಿಲಿಪ್ಪನ ವರಾಹ ತಿಮ್ಮಪ್ಪನ ||ಪ||
ದಂಡಿಗೆಯ ಬಾರಿಸುತ ಶ್ರುತಿಗೂಡಿಕೊಂಡು ಪಾಡುತ ||
ಮನದಿ ಲೋಲ್ಯಾಡುತ ಕುಣಿಕುಣಿದಾಡುತ ||೧||
ಬೆಟ್ಟದೊಡೆಯನ ಚರಣಕಮಲಕೆ ಶಿರವಿಟ್ಟು ಕರಗಳ ||
ಮುಗಿವೆ ನಾ ಕವಕವ ನಗುವೆ ನಾ ಎನ್ನೊಡೆಯನಾ ಪೊಗಳಿ ||೨||
ಸ್ವಾಮಿ ಪುಷ್ಕರಿಣಿಯಲ್ಲಿ ಸ್ನಾನ ನೇಮವ ಮಾಡುವೆ ||
ಪುಣ್ಯಕ್ಷೇತ್ರವ ನೋಡುವೆ, ಹಯವದನನ ಕೊಂಡಾಡುವೆ ||೩||
eMdu kAMbenu enna salahuva
baMdhu baLaga nammappana ||
tirupatilippana varAha timmappana ||pa||
daMDigeya bArisuta SrutigUDikoMDu pADuta ||
manadi lOlyADuta kuNikuNidADuta ||1||
beTTadoDeyana caraNakamalake SiraviTTu karagaLa ||
mugive nA kavakava naguve nA ennoDeyanA pogaLi ||2||
svAmi puShkariNiyalli snAna nEmava mADuve ||
puNyakShEtrava nODuve, hayavadanana koMDADuve ||3||
Leave a Reply