Bandanene ranga

Composer : Shri Purandara dasaru

ಬಂದನೇನೆ ರಂಗ ಬಂದನೇನೆ
ಎನ್ನ ತಂದೆ ಬಾಲಕೃಷ್ಣ ನವನೀತ ಚೋರ ||ಅ.ಪ.||

ಘಲು ಘಲು ಘಲುರೆಂಬ ಪೊನ್ನೊಂದು ಗೆಜ್ಜೆಯ
ಹೊಳೆ ಹೊಳೆ ಹೊಳೆ ಯುವ ಪಾದವನೂರುತ ||
ನಲಿ ನಲಿ ನಲಿದಾಡುತ ಉಂಗುರದರಳೆಲೆ
ಥಳ ಥಳ ಥಳ ಹೊಳೆಯುತ ಶ್ರೀ ಕೃಷ್ಣ ||೧||

ಕಿಣಿ ಕಿಣಿ ಕಿಣಿ ರೆಂಬ ಕರದ ಕಂಕಣ ಬಳೆ |
ಝಣ ಝಣ ಝಣ ರೆಂಬ ನಡುವಿನ ಘಂಟೆ |
ಡಣ ಡಣ ಡಣ ರೆಂಬ ಪಾದದ ತೊಡವಿನ
ಮಿಣಿ ಮಿಣಿ ಕುಣಿದಾಡುತ ಶ್ರೀ ಕೃಷ್ಣ ||೨||

ಹಿಡಿ ಹಿಡಿ ಹಿಡಿ ಯೆಂದು ಪುರಂದರ ವಿಠಲನ
ದುಡು ದುಡು ದುಡು ಎಂದೋಡುತ ಹರಿ
ನಡೆ ನಡೆ ನಡೆ ಯೆಂದು ಮಲ್ಲನೆ ಪಿಡಿಯುತ
ಬಿಡು ಬಿಡು ಬಿಡು ದಮ್ಮಯ್ಯ ಎನ್ನುತ ||೩||


baMdanEne raMga baMdanEne
enna taMde bAlakRuShNa navanIta chOra ||a.pa.||

ghalu ghalu ghalureMba ponnoMdu gejjeya
hoLe hoLe hoLe yuva pAdavanUruta ||
nali nali nalidADuta uMguradaraLele
thaLa thaLa thaLa hoLeyuta shrI kRuShNa ||1||

kiNi kiNi kiNi reMba karada kaMkaNa baLe |
jhaNa jhaNa jhaNa reMba naDuvina ghaMTe |
DaNa DaNa DaNa reMba pAdada toDavina
miNi miNi kuNidADuta shrI kRuShNa ||2||

hiDi hiDi hiDi yeMdu puraMdara viThalana
duDu duDu duDu eMdODuta hari
naDe naDe naDe yeMdu mallane piDiyuta
biDu biDu biDu dammayya ennuta ||3||

Leave a Reply

Your email address will not be published. Required fields are marked *

You might also like

error: Content is protected !!