Banda manmanasake

Composer : Vyasa Vittala ankita Shri Kalluru Subbannacharya

By Smt.Shubhalakshmi Rao

ಬಂದಾ ಮನ್ಮಾನಸಕೆ ಶ್ರೀಹರಿ || ಪ ||
ಇಂದಿರೆ ರಮಣ ಮುಕುಂದ ಆನಂದದಿ || ಅ ಪ ||

ಥಳಿಥಳಿಸುವ ನವರತ್ನ ಕಿರೀಟವು |
ಹೊಳೆವ ಮಕರಕುಂಡಲ ಧ್ವಜವು ||
ತುಲಸಿಮಾಲೆ ವನಮಾಲೆಯಿಂದೊಪ್ಪುತ |
ಬಲು ತೇಜಸ್ಸಿಗೆ ತೇಜೋಮಯನಾದ ಹರಿ || ೧ ||

ಲಲನೆ ರುಕ್ಮಿಣಿ ಸತ್ಯಭಾಮೆಯರಿಂದೊಡಗೂಡಿ |
ನಲಿದಾಡುತ ಎನ್ನ ಹೃದಯದಲಿ ||
ಬಲುಬಲು ವಿಗಡ ಅಜ್ಞಾನಾಂಧಕಾರದ |
ಕುಲವನೋಡಿಸಿ ಮತ್ಕುಲ ದೈವಮೂರುತಿ || ೨ ||

ಎಷ್ಟು ಜನುಮದ ಪುಣ್ಯ ಬಂದೊದಗಿತೋ |
ಎಷ್ಟು ಧನ್ಯರೋ ನಮ್ಮ ಹಿರಿಯರು ||
ಎಷ್ಟು ದೇವತೆಗಳು ನಮಗೆ ಹರಸಿದರೋ |
ದೃಷ್ಟಿಗೋಚರ ನಮ್ಮ ವ್ಯಾಸವಿಠ್ಠಲ ಬಲ್ಲ || ೩ ||


baMdA manmAnasake SrIhari || pa ||
iMdire ramaNa mukuMda AnaMdadi || a pa ||

thaLithaLisuva navaratna kirITavu |
hoLeva makarakuMDala dhvajavu ||
tulasimAle vanamAleyiMdopputa |
balu tEjassige tEjOmayanAda hari || 1 ||

lalane rukmiNi satyaBAmeyariMdoDagUDi |
nalidADuta enna hRudayadali ||
balubalu vigaDa aj~jAnAMdhakArada |
kulavanODisi matkula daivamUruti || 2 ||

eShTu janumada puNya baMdodagitO |
eShTu dhanyarO namma hiriyaru ||
eShTu dEvategaLu namage harasidarO |
dRuShTigOcara namma vyAsaviThThala balla || 3 ||

Leave a Reply

Your email address will not be published. Required fields are marked *

You might also like

error: Content is protected !!