Composer : Shri Ananda vittala
ಅಂದವಾದ ತೋಯಜದ ಚಂದವಾದ |
ಪಾದದಿಂದ ಓಡಿಬಾರೊ ರಂಗ ಸಾಗಿಬಾರೊ |
ಸುತ್ತ ಮುತ್ತ ಗುಮ್ಮಗಳು ಎತ್ತಿಕೊಂಡು ಒಯ್ಯುವ ನಿನ್ನ |
ಸುತ್ತಿ ಸುತ್ತಿ ತಾಳಲಾರೆ ಓಡೀ ಬಾರೊ |
ಕತ್ತಲಾಯಿತೆನ್ನ ಕಂದಾ ಸಾಗಿ ಬಾರೋ | ೧ |
ನೊರೆ ಹಾಲು ಮೊಸರು ಬೆಣ್ಣೆ ಕರೆವ ತುರುಗಳು ಎಲ್ಲಾ |
ಹರೀ ಎಲ್ಲಿ ಎನ್ನುತಲಿವೆ ಓಡೀ ಬಾರೋ |
ಕರೆದರೆ ಸುಮ್ಮನೆ ನೀನು ಸಾಗಿ ಬಾರೋ | ೨ |
ಕಂಡ ಕಂಡ ಜನರು ನಿನ್ನ
ಪುಂಡನೆಂದು ಸಾರುತ್ತೀರೆ |
ಪುಂಡನೇನೊ ನೀನು ಓಡೀ ಬಾರೋ |
ಪ್ರಚಂಡ ಆನಂದವಿಠ್ಠಲ ಸಾಗಿ ಬಾರೋ | ೩ |
aMdavAda tOyajada caMdavAda |
pAdadiMda ODibAro raMga sAgibAro |
sutta mutta gummagaLu ettikoMDu oyyuva ninna |
sutti sutti tALalAre ODI bAro |
kattalAyitenna kaMdA sAgi bArO | 1 |
nore hAlu mosaru beNNe kareva turugaLu ellA |
harI elli ennutalive ODI bArO |
karedare summane nInu sAgi bArO | 2 |
kaMDa kaMDa janaru ninna
puMDaneMdu sAruttIre |
puMDanEno nInu ODI bArO |
pracaMDa AnaMdaviThThala sAgi bArO | 3 |
Leave a Reply