Ananda ananda matte

Composer : Shri Vijayadasaru

ಆನಂದ ಆನಂದ ಮತ್ತೆ ಪರಮಾನಂದ ||ಪ||
ಆ ನಂದನ ಕಂದ ಒಲಿಯಲು ಏನಂದದ್ದೆ ವೇದವೃಂದಾ ||ಅ.ಪ||

ಆ ಮೊದಲು ಕ್ಷಕಾರಾಂತ ಈ ಮಹಾ ವರ್ಣಗಳೆಲ್ಲ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧||

ತಾರೋ ಬಾರೋ ಬೀರೊ ಸಾರೊ ಮಾರೊ ತೋರೊ ಹಾರೊ ಹೋರೊ
ಸೇರೋ ತೋರೆಂಬುದೆಲ್ಲ ಈಶಪ್ರೇರಣೆ ಎಂದರಿತವರಿಗೆ ||೨||

ಜಲ ಕಾಷ್ಠ ಶೈಲ ಗಗನ ಜಲ ಪಾವಕ ವಾಯು ತರು
ಫಲ ಪುಷ್ಪ ಬಳ್ಳಿಗಳಲ್ಲಿ ಹರಿ ವ್ಯಾಪ್ತನೆಂದರಿತವರಿಗೆ ||೩||

ಪೋಪುದು ಬಪ್ಪುದು ಕೋಪ ಶಾಂತ ಮಾಡುವುದು
ರೂಪ ಲಾವಣ್ಯವು ಹರಿ ವ್ಯಾಪಾರ ಎಂದರಿತವರಿಗೆ ||೪||

ಮಧ್ವಶಾಸ್ತ್ರ ಪ್ರವಚನ ಮುದ್ದು ಕೃಷ್ಣನ ದರುಶನ
ಸಿದ್ಧ ವಿಜಯವಿಠ್ಠಲನ್ನ ಶುದ್ಧ ಮನದಿ ಕೊಂಡಾಡುವವರಿಗೆ ||೫||


AnaMda AnaMda matte paramAnaMda ||pa||
A naMdana kaMda oliyalu EnaMdadde vEdavRuMdA ||a.pa||

A modalu kShakArAMta I mahA varNagaLella
svAmiyAda viShNuvina nAmaveMdu tiLidavarige ||1||

tArO bArO bIro sAro mAro tOro hAro hOro
sErO tOreMbudella ISaprEraNe eMdaritavarige ||2||

jala kAShTha Saila gagana jala pAvaka vAyu taru
Pala puShpa baLLigaLalli hari vyAptaneMdaritavarige ||3||

pOpudu bappudu kOpa SAMta mADuvudu
rUpa lAvaNyavu hari vyApAra eMdaritavarige ||4||

madhvaSAstra pravacana muddu kRuShNana daruSana
siddha vijayaviThThalanna shuddha manadi koMDADuvavarige ||5||

Leave a Reply

Your email address will not be published. Required fields are marked *

You might also like

error: Content is protected !!