Varijalayapate – Barayya baa baa

Composer : Shri Gopaladasaru

Shri Anantharam & grp

ವಾರಿಜ ಲಯಪತೆ ವಾರಿಜನಾಭನೆ ,
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರಭಾವನೆ ,
ವಾರಿಜಜಾಂಡದ ಕಾರಣದೊರೆಯೇ
ಬಾರೈಯ್ಯ ಬಾ ಬಾ ಬಾ ಬಾಬಾ (೫)
ಭಕುಥರಪ್ರಿಯಾ ಶ್ರೀನಿವಾಸರಾಯ ||

ಮಾರಜನಕಮುಕುತಾರೊಡೆಯ , ದೇವೈಯ್ಯ ಜೀಯ್ಯ
ಬಾರೈಯ್ಯ ಬಾಬಾಬಾಬಾಬಾಬಾಬಾಬಾಬಾ(೯)
ಭಕುಥರಪ್ರಿಯಾ ಶ್ರೀನಿವಾಸರಾಯ|

ಸ್ಯಂದನವೇರಿಬಾಪ್ಪಾ ರಂಗ ,
ದೇವೋತ್ತುಂಗಾ ನಂದಾ ನಂದನ ಅರಿಮದಭಂಗ,
ಕರುಣಾಪಾಂಗ ಸಿಂಧು,, ಶಯನ ಸುಂದರಾಂಗ
ಹೇ ನಾರಸಿಂಗ |
ಕಂದವಿರಂಚಿಯು ನಂದಿವಾಹನ
ಅಮರೆಂದ್ರ ಸನಕ, ಸನಂ-ದನಾದಿಮುನಿ ವೃಂದ
ನಿಂದುಬಂದು ಧಿಂ ಧಿಂ ಧಿಮಿಕೆಂದು
ನಿಂದಾಡಲು ಆನಂದದಿ ಮನೆಗೆ ||೧||
ಬಾರೈಯ್ಯ ಬಾಬಾಬಾಬಾಬಾಬಾಬಾಬಾಬಾ(೯) ||

ಜಗ್ಗಜ್ಜನ್ಮಾ ದಿ ಕರ್ತಾಗೋವಿಂದಾ ಉದರದಿಲೋಕ ಲಗುವಾಗಿಧರಿಸೀದಾ ಮುಕುಂದ
ಭಕ್ತರ ಮನಕೆ, ಝಗಝಗಿಸುತ ಪೊಳೆವಾನಂದ, ನಿಗಮಾವಳಿಯಿಂದ
ಅಗಣಿತ ಮುನಿಗಳು ನಗ ಖಗ ಮೃಗ ಶಶಿ
ಗಗನಮನ್ಯಾದ್ಯರು ಸೊಗಸಾಗಿ
ಬಗೆಬಗೆ ಪೋಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯ ಮಹ ಉರಗ ಗಿರಿವಾಸ ||೨||

ಬಾರೈಯ್ಯ ಬಾಬಾಬಾಬಾಬಾಬಾಬಾಬಾಬಾ(೯)
ಭಕುಥರಪ್ರಿಯಾ ಶ್ರೀನಿವಾಸರಾಯ

ತಡಮಾಡಬ್ಯಾಡವೋ ಹೇ ನಲ್ಲ,
ವಾಕುಲಾಲಿಸೆನ್ನೋಡೆಯ ಗೋಪಾಲವಿಠಲ
ದೇವ ಪರಾಕು ಅಡಿ ಇಡು ಭಕ್ತವತ್ಸಲ ಶ್ರೀ ಲಕುಮೀ ನಲ್ಲ,
ಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ
ಮಡದಿಗೆ ಹೇಳದೆ ದುಡದುಡನೆ ಬಂದು
ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆ ಪೊಡವಿ ಒಡಗೂಡಿ ||೩||

ಬಾರೈಯ್ಯ ಬಾಬಾಬಾಬಾಬಾಬಾಬಾಬಾಬಾ(೯)
ಭಕುಥರಪ್ರಿಯಾ ಶ್ರೀನಿವಾಸರಾಯ||
ವಾರಿಜ ಲಯಪತೆ ವಾರಿಜನಾಭನೆ ,
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರಭಾವನೆ ,
ವಾರಿಜಜಾಂಡದ ಕಾರಣದೊರೆಯೇ, ಬಾರೈಯ್ಯ ಬಾ (೫)
ಭಕುಥರಪ್ರಿಯಾ ಶ್ರೀನಿವಾಸರಾಯ ,ಶ್ರೀನಿವಾಸರಾಯ, ಹೇ ಶ್ರೀನಿವಾಸರಾಯ ||


vArija layapate vArijanABane ,
vArijaBavapita vArijanEtrane
vArijamitra apArapraBAvane ,
vArijajAMDada kAraNadoreyE
bAraiyya bA bA bA bAbA (5)
BakutharapriyA SrInivAsarAya ||

mArajanakamukutAroDeya , dEvaiyya jIyya
bAraiyya bAbAbAbAbAbAbAbAbA(9)
BakutharapriyA SrInivAsarAya|

syaMdanavEribAppA raMga ,
dEvOttuMgA naMdA naMdana arimadaBaMga,
karuNApAMga siMdhu,, Sayana suMdarAMga
hE nArasiMga |
kaMdaviraMciyu naMdivAhana
amareMdra sanaka, sanaM-danAdimuni vRuMda
niMdubaMdu dhiM dhiM dhimikeMdu
niMdADalu AnaMdadi manege ||1||
bAraiyya bAbAbAbAbAbAbAbAbA(9) ||

jaggajjanmA di kartAgOviMdA udaradi lOka laguvAgi dharisIdA mukuMda
Baktara manake, JagaJagisuta poLevAnaMda, nigamAvaLiyiMda
agaNita munigaLu naga Kaga mRuga SaSi
gaganamanyAdyaru sogasAgi
bagebage pOgaLutali bEga jigijigidADalu
muguLunageya maha uraga girivAsa ||2||

bAraiyya bAbAbAbAbAbAbAbAbA(9)
BakutharapriyA SrInivAsarAya

taDamADabyADavO hE nalla,
vAkulAlisennODeya gOpAlaviThala
dEva parAku aDi iDu Baktavatsala SrI lakumI nalla,
maDuvinoLage gaja moreyiDalAkShaNa
maDadige hELade duDaduDane baMdu
hiDidu nakrana bAya kaDidu biDisidane
saDagaradali rame poDavi oDagUDi ||3||

bAraiyya bAbAbAbAbAbAbAbAbA(9)
BakutharapriyA SrInivAsarAya||
vArija layapate vArijanABane ,
vArijaBavapita vArijanEtrane
vArijamitra apArapraBAvane ,
vArijajAMDada kAraNadoreyE, bAraiyya bA (5)
BakutharapriyA SrInivAsarAya ,SrInivAsarAya, hE SrInivAsarAya ||

Leave a Reply

Your email address will not be published. Required fields are marked *

You might also like

error: Content is protected !!