Vara Vaikuntadi – mangalam

Composer : Shri Anantadreesharu

By Smt.Shubhalakshmi Rao

ವರ ವೈಕುಂಠದಿ ಬಂದವಗೆ
ವರಗಿರಿಯಲಿ ಸಂಚರಿಸುವಗೆ
ವರಹ ದೇವನ ಅನುಸರಿಸಿ
ಸ್ವಾಮಿ ಪುಷ್ಕರಣಿ ತೀರದಲ್ಲಿರುವವಗೆ
ಮಂಗಳಂ ಜಯ ಮಂಗಳಂ [೧]

ಸರಸದಿ ಬೇಟೆಗೆ ಹೊರಟವಗೆ
ಸರಸಿಜಾಕ್ಷಿಯಳ ಕಂಡವಗೆ
ಮರುಳಾಟದಿ ತಾ ಪರವಶನಾಗುತ
ಕೊರವಿ ವೇಷ ಧರಿಸಿರುವವಗೆ
ಮಂಗಳಂ ಜಯ ಮಂಗಳಂ [೨]

ಗಗನ ರಾಜನ ಪುರಕ್ ಹೋದವಗೆ
ಬಗೆ ಬಗೆ ನುಡಿಗಳ ನುಡಿದವಗೆ
ಅಗವಾಸಿಗೆ ನಿನ್ನ ಮಗಳನು ಕೊಡು ಎಂದು
ಗಗನ ರಾಜನ ಸತಿಗ್ ಹೇಳಿದವಗೆ
ಮಂಗಳಂ ಜಯ ಮಂಗಳಂ [೩]

ತನ್ನ ಕಾರ್ಯ ತಾ ಮಾಡಿದವಗೆ
ಇನ್ನೊಬ್ಬರ ಹೆಸರ್ ಹೇಳಿದವಗೆ
ಮುನ್ನ ಮದುವೆ ನಿಶ್ಚಯವಾಗಿರಲು
ತನ್ನ ಬಳಗ ಕರೆಸಿರುವವಗೆ
ಮಂಗಳಂ ಜಯ ಮಂಗಳಂ [೪]

ಎತ್ತಿ ನಿಬ್ಬಣ ಹೊರಟವಗೆ
ನಿತ್ಯ ತೃಪ್ತನಾಗಿರುವವಗೆ
ಉತ್ತರಣೆಯ ವಾಗರನುಂಡು ನಿತ್ಯ
ತೃಪ್ತನಾಗಿ ತೇಗಿರುವವಗೆ
ಮಂಗಳಂ ಜಯ ಮಂಗಳಂ [೫]

ಒದಗಿ ಮುಹೂರ್ತಕೆ ಬಂದವಗೆ
ಸದಯ ಹೃದಯನಆಗಿರುವವಗೆ
ಮುದದಿಂದಲಿ ಶ್ರೀ ಪದುಮಾವತಿಯಳ
ಮದುವೆ ಮಾಡಿಕೊಂಡ ಮದುಮಗಗೆ
ಮಂಗಳಂ ಜಯ ಮಂಗಳಂ [೬]

ಕಾನ್ತೆಯಿಂದ ಸಹಿತಾದವಗೆ
ಸಂತೋಷದಿ ಕುಳಿತಿರುವವಗೆ
ಸಂತತ ಶ್ರೀಮದನಂತಾದ್ರೀಶಗೆ
ಶಾಂತ ಮೂರುತಿ ಸರ್ವೋತ್ತಮಗೆ
ಮಂಗಳಂ ಜಯ ಮಂಗಳಂ [೭]


vara vaikuMThadi baMdavage
varagiriyali saMcharisuvage
varaha dEvana anusarisi
swaami puShkaraNi teeradalliruvavage
maMgaLaM jaya maMgaLaM [1]

sarasadi bETege horaTavage
sarasijaakShiyaLa kaMDavage
maruLATadi taa paravashanaaguta
koravi vESha dharisiruvavage
maMgaLaM jaya maMgaLaM [2]

gagana rAjana purak hOdavage
bage bage nuDigaLa nuDidavage
agavaasige ninna magaLanu koDu eMdu
gagana raajana satig hELidavage
maMgaLaM jaya maMgaLaM [3]

tanna kaarya taa maaDidavage
innobbara hesar hELidavage
munna maduve nishchayavAgiralu
tanna baLaga karesiruvavage
maMgaLaM jaya maMgaLaM [4]

etti nibbaNa horaTavage
nitya tRuptanAgiruvavage
uttaraNeya vaagaranuMDu nitya
tRuptanaagi tEgiruvavage
maMgaLaM jaya maMgaLaM [5]

odagi muhoortake baMdavage
sadaya hRudayanaAgiruvavage
mudadiMdali shree padumaavatiyaLa
maduve maaDikoMDa madumagage
maMgaLaM jaya maMgaLaM [6]

kAnteyiMda sahitaadavage
saMtOShadi kuLitiruvavage
saMtata shreemadanaMtAdreeshage
shAMta mooruti sarvOttamage
maMgaLaM jaya maMgaLaM [7]

Leave a Reply

Your email address will not be published. Required fields are marked *

You might also like

error: Content is protected !!