Shrinivasa neene paaliso

Composer : Shri Purandara dasaru

By Smt.Shubhalakshmi Rao

ಶ್ರೀನಿವಾಸ ನೀನೇ ಪಾಲಿಸೋ ಶ್ರುತಜನ ಪಾಲ
ಗಾನಲೋಲ ಶ್ರೀ ಮುಕುಂದನೇ | ಪ |

ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ
ವೇಣುಗೋಪಾಲಾ ಗೋವಿಂದ ವೇದವೇದ್ಯ ನಿತ್ಯಾನಂದ |ಅ.ಪ|

ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ
ಎಂದಿಗೆ ಲಭ್ಯವೋ ಮಾಧವ
ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನೊ
ಅಂದದಿಂ ಭವಾಬ್ಧಿಯೊಳು ನಿಂದು ನೊಂದೆನೊ ಮುಕುಂದ |೧|

ಎಷ್ಟು ದಿನ ಕಷ್ಟ ಪಡುವದೊ
ಯಶೋದೆ ಕಂದ ದೃಷ್ಟಿಯಿಂದ ನೋಡಲಾಗದೆ
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯು ಇಷ್ಟನಾಗಿ ಕೈಯ್ಯ ಪಿಡಿದು |೨|

ಅನುದಿನ ಅನೇಕ ರೋಗಂಗಳಾ ಅನುಭವಿಸಿದೆನೊ
ಘನ್ನ ಮಹಿಮ ನೀನೆ ಕೇಳಯ್ಯಾ
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರ ವಿಠ್ಠಲ ನೀ ಕೈಯ್ಯ ಪಿಡಿದು |೩|


shrInivAsa nInE pAlisO shrutajana pAla
gAnalOla shrI mukuMdanE | pa |

dhyAnamALpa sajjanara mAnadiM paripAlipa
vENugOpAlA gOviMda vEdavEdya nityAnaMda |a.pa|

eMdige ninna pAdAbjava poMduva sukha
eMdige labhyavO mAdhava
aMdhakAraNyadalli niMdu tattarisutiheno
aMdadiM bhavAbdhiyoLu niMdu noMdeno mukuMda |1|

eShTu dina kaShTa paDuvado
yashOde kaMda dRuShTiyiMda nODalAgade
muTTi ninna bhajisalAre keTTa narajanmadava
duShTa kArya mADidAgyu iShTanAgi kaiyya piDidu |2|

anudina anEka rOgaMgaLA anubhavisideno
ghanna mahima nIne kELayyA
tanuvinalli balavilla neneda mAtra salahuva
hanumadIsha puraMdara viThThala nI kaiyya piDidu |3|

Leave a Reply

Your email address will not be published. Required fields are marked *

You might also like

error: Content is protected !!