Composer : Shri Jagannatha dasaru
ಶ್ರೀ ವೆಂಕಟಾಚಲ ನಿವಾಸ ನಿನ್ನ
ಸೇವಾನುಸೇವಕರ ದಾಸಾ ಎನಿಸಿ
ಜೀವಿಸುವ ನರಗೆ ಆಯಾಸಾ ಯಾಕೆ
ಶ್ರೀವರನೆ ಕೊಡು ಎನಗೆ ಲೇಸಾ (೧)
ಸ್ವಾಮಿ ಕಂಸಾರಿ ಪ್ರಭು ನಿನ್ನ ದಿವ್ಯ
ನಾಮ ಒದಗಲು ಜಿಹ್ವೆಗೆನ್ನಾ ದೋಷ
ಸೀಮೆಗಾಣದಿದ್ದರೆನ್ನ ಸ್ವಾಮಿ
ನೀ ಮರೆಯಲಾಗದು ಸುಪ್ರಸನ್ನ (೨)
ನೀಚ ಯೋನಿಗಳಲ್ಲಿ ಬಂದೆ ಇನ್ನು
ನಾಚಿಕಿಲ್ಲವೊ ಎನಗೆ ತಂದೆ ನೀನೆ
ಮೋಚಕನು ಬಿನ್ನಪ ವಿದೆಂದೆ ಸವ್ಯ
ಸಾಚಿಸಖ ಕೈಪಿಡಿಯೋ ಮುಂದೆ (೩)
ನಾನೊಬ್ಬನೇ ನಿನಗೆ ಭಾರವಾದೆ
ನೇನೊ ಸಂತತ ನಿರ್ವಿಕಾರ ಎನ್ನ
ಹೀನತ್ವ ನೋಡಲ್ಕಪಾರ ಚಕ್ರ
ಪಾಣಿ ಮಾಡದಿರೆನ್ನ ದೂರ (೪)
ಕಂಡ ಕಂಡವರಿಗಾಲ್ಪರಿದು ಬೇಡಿ
ಬೆಂಡಾದೆ ನಿನ್ನಂಘ್ರಿ ಮರೆದು ದಿಟ
ತೊಂಡವತ್ಸಲನೆಂಬ ಬಿರುದು ಕಾಯೊ
ಪುಂಡರೀಕಾಕ್ಷ ನೀನರಿದು (೫)
ಈ ಸಮಯದೊಳಗೆನ್ನ ತಪ್ಪ ನೋಡಿ
ನೀ ಸಡಿಲ ಬೇಡುವರೇನಪ್ಪ ನಿನ್ನ
ದಾಸರ್ಪೆಸರುಗೊಳಲು ಬಪ್ಪಾ ದೋಷ
ನಾಶವಾಗೋದು ತಿಮ್ಮಪ್ಪ (೬)
ಕಾಮಾದಿಗಳ ಕಾಟದಿಂದ ನಿನ್ನ
ನಾ ಮರೆದೆ ಸಚ್ಚಿದಾನಂದ ಎನ್ನ
ಈ ಮಹಾ ದೋಷಗಳ ವೃಂದ ನೋಡದೆ
ನೀ ಮನ್ನಿಸೆನ್ನ ಮುಕುಂದ (೭)
ನೀ ಪಿಡಿದರೆ ಸಹಸ್ರಾರ ಸುಜನ
ಪಾಪಾಟವಿಗೆ ಸುಕುಠಾರಾ ಜಗ
ದ್ವ್ಯಾಪಕನೆ ಎನ್ನ ಸಂಸಾರ ಘೋರ
ಕೊಪದಿಂದೆತ್ತಯ್ಯ ಧೀರ (೮)
ಸಿಂಧೂರ ರಾಜ ಪರಿಪಾಲ ಕೋಟಿ
ಕಂದರ್ಪ ಲಾವಣ್ಯ ಶೀಲ ಧರ್ಮ
ಮಂದಾರ ಭೂಜಾಲವಾಲ ಯೋಗಿ
ಸಂದೋಹ ಹೃತ್ಕುಮುದ ಶೀಲಾ (೯)
ಶಿವನ ವೈರಿಯ ಕೊಂದ ಶಕ್ತ ಪುಣ್ಯ
ಶ್ರವಣ ಕೀರ್ತನ ನಿನ್ನ ಭಕ್ತಾ ಜನರ
ಭವದೊಳಗೆ ದಣಿಸುವುದು ಯುಕ್ತವೇನೊ
ಭುವನ ಪಾವನ ನಿತ್ಯಮುಕ್ತ (೧೦)
ಶ್ರೀಕರ ಶ್ರೀಮದಾನಂತ ನಿಖಿಳ
ಲೋಕೈಕನಾಥ ನಿನ್ನಂಥ ಸಖರ
ನಾ ಕಾಣೆನೆಲ್ಲೊ ಮಹಂತಾ ಎನ್ನ
ನೀ ಕಾಯೋ ಕಂಡ್ಯ ಭೂಕಾಂತಾ (೧೧)
ಕರ ಕರ್ಮ ಚಿತ್ರತ್ವಗ್ರಸನ ಕಾಯ
ಕರಣ ಮನಹಂಕಾರ ಘ್ರಾಣಾ ಬುದ್ಧಿ
ಚರಣ ಪಾಯೂಪಸ್ಥ ನಯನ ಜಾತ
ಉರುಪಾಪ ಕ್ಷಮಿಸು ಶ್ರೀ ರಮಣಾ (೧೨)
ಅನಿಮಿತ್ತ ಬಂಧು ನೀಯೆನ್ನ ಬಿಡುವು
ದನುಚಿತವೋ ಲೋಕ ಪಾವನ್ನ ಚರಿತ
ಮನ ವಚನ ಕಾಯದಲಿ ನಿನ್ನ ಪಾದ
ವನಜ ನಂಬಿದೆ ಸುಪ್ರಸನ್ನಾ (೧೩)
ನೀನಲ್ಲದೆನಗೆ ಗತಿಯಿಲ್ಲ ಪವ
ಮಾನ ವಂದಿತ ಕೇಳೋ ಸೊಲ್ಲ ಎನ್ನ
ಜ್ಞಾನೇಚ್ಛೆ ಕ್ರಿಯೆಗಳೆಲ್ಲಾ ನಿನ್ನ
ಧೀನವಲ್ಲವೆ ಲಕ್ಷ್ಮೀನಲ್ಲಾ (೧೪)
ಪ್ರಾಚೀನ ಕರ್ಮಾಂಧ ಕೂಪ-ದೊಳಗೆ
ಯೋಚಿಸುವ ನರರ ಸಂತಾಪ ನಿನಗೆ
ಗೋಚರಿಸದೇನೋ ಬಹುರೂಪ ವೆಂಕ
ಟಾಚಲನಿಲಯ ಪಾಹಿ ಶ್ರೀಪಾ (೧೫)
ಯಾಕೆ ದಯ ಬಾರದೆನ್ನಲ್ಲಿ ನರಕ
ನಾಕ ಭೂ ಲೋಕಂಗಳಲ್ಲಿ ಚರಿಸಿ
ನಾ ಕಷ್ಟಪಟ್ಟ ಬಗ್ಗೆ ನೀ ಬಲ್ಲಿ ವೀತ
ಶೋಕ ಕೊಡು ಭಕುತಿ ನಿನ್ನಲ್ಲಿ (೧೬)
ನಿನ್ನಂಘ್ರಿ ದರುಶನವ ಕೊಡದೆ ಹೀಗೆ
ಬನ್ನ ಬಡಿಸುವರೇನೋ ಬಿಡದೆ ನಾನು
ಮುನ್ನ ಮಾಡಿದ ಪಾಪ ಕೆಡದೆ ನೀ ಪ್ರ
ಪನ್ನ ವತ್ಸಲನೆಂದು ನುಡಿದೆ (೧೭)
ತಾಪತ್ರಯಗಳಿಂದ ನೊಂದೆ ಮಹಾ
ಪಾಪಿಷ್ಠರಲ್ಲನ್ನ ತಿಂದೆ ಇನ್ನು
ಆಪರೇತೇಶ್ವರನ ಮುಂದೆ ಪೋಗಿ
ನಾ ಪೇಳಿಕೊಳಲೇನೊ ತಂದೆ (೧೮)
ದೇಹ ಸಂಬಂಧಿಗಳ ಸಹಿತವಾಗಿ
ನಾ ಹೊಂದಿದೆನು ಲೋಕಮೋಹಿತ ಎನ್ನ
ಮೋಹಿಪುದು ನಿನಗೇನು ವಿಹಿತ ಹೃದಯ
ಬಾಹಿರಂತರದಿ ಸನ್ನಿಹಿತ (೧೯)
ಪೋಗುತಿದೆ ದಿವಸ ಕಮಲಾಕ್ಷ ಪರಮ
ಯೋಗೇಶ ನಿನ್ನ ಅಪರೋಕ್ಷ ಎನಗೆ
ಹ್ಯಾಗಾಗುವುದೊ ಸುರಾಧ್ಯಕ್ಷ ದುರಿತ
ನೀನು ಕಾಮಿತ ಕಲ್ಪವೃಕ್ಷ (೨೦)
ಗತಿಯಾರೊ ನಿನ್ನುಳಿದು ದೇವ ರಮಾ
ಪತಿ ನೀನೆ ಭಕ್ತ ಸಂಜೀವ ಎನ್ನ
ಸತಿಸುತರ ಅನುದಿನದಿ ಕಾವ ಭಾರ
ಸತತ ನಿನ್ನದು ಮಹಾನುಭಾವ (೨೧)
ದೊಡ್ಡವರ ಕಾಯ್ವುದೇನರಿದು ಪರಮ
ದಡ್ಡರನೆ ಕಾಯುವುದೇ ಬಿರುದು ಎನ್ನ
ಗುಡ್ಡದಂತಹ ಪಾಪ ತರಿದು ಕಾಯೋ
ವಡ್ಡಿ ನಾಯಕ ಸಾರೆಗರದೊ (೨೨)
ಜ್ಞಾನಿಗಳು ನೀಚರಲಿ ಕರುಣಾ ಮಾಡ
ರೇನೋ ಬಿಡುವರೇ ರಥಚರಣ ಪಾಣಿ
ಭಾನು ಚಂಡ ರವಿಕಿರಣ ಬಿಡದೆ
ತಾನಿಪ್ಪನೆ ರಮಾರಮಣ (೨೩)
ಆಡಲ್ಯಾತಕೆ ಬಹಳ ಮಾತಾ ಪರರ
ಬೇಡಲಾರೆನೋ ಜಗತ್ರಾತಾ ಹೀಗೆ
ಮಾಡುವರೇ ಕೆಳೆನ್ನ ಮಾತ ನೀನೆ
ನೀಡೆನಗೆ ಪುರುಷಾರ್ಥ ದಾತಾ (೨೪)
ಬೇಡಲ್ಯಾತಕೆ ಬಹಳ ಮಾತಾ ಎನ್ನ
ಕೇಡು ನಿನ್ನದಲ್ಲೇ ಬಲಿದೌತ ಪಾದ
ಬೇಡಿಕೊಂಬುವೆ ನಾನನಾಥ ದೂರ
ನೋಡಲಾಗದು ಪಾರ್ಥಸೂತ (೨೫)
ಸಾರಸದ್ ಭಕ್ತಿಯಲಿ ನಿತ್ಯ ಬಿಡದೆ
ಶಾರದೇಶನ ತುತಿಪ ಭಕ್ತ ಜನರ
ಪಾರ ಸಂತೈಸುವುದು ಮಿಥ್ಯವಲ್ಲ
ಶ್ರೀರಮಣ ಸಾಕ್ಷಿದಕೆ ಸತ್ಯಾ (೨೬)
ಫಣಿರಾಜ ಭೋಗ ಪರಿಯಂಕ ಶಯನ
ಪ್ರಣತಾರ್ತಿ ಹರನೆಂಬೊ ಅಂಕಾ ಕೇಳಿ
ಮಣಿದೆ ನಿನ್ನಂಘ್ರಿಗೆ ಶಶಾಂಕಾ ಭಾಸ
ದಣಿಸಲಾಗದು ನಿಷ್ಕಳಂಕಾ (೨೭)
ಕಾರ್ತವೀರ್ಯಾಜುನನ ಕೊಂದ ಭವ್ಯ
ಕೀರ್ತಿ ನಿನ್ನಾನಂದ ವೃಂದ ಸತತ
ಕೀರ್ತಿಸುವ ನರರ ಬಹುಕುಂದ ನೋಡ
ದಾರ್ತನ್ನ ಪೊರೆಯೊ ಗೋವಿಂದ (೨೮)
ದಯದಿಂದ ನೋಡೆನ್ನ ಹರಿಯೆ ಜಗ
ನ್ಮಯನೆ ಜ್ಞಾನಾನಂದ ಸಿರಿಯೆ ಮನೊ
ಭಯವ ಪರಿಹರಿಸಿನ್ನು ದೊರೆಯೆ ಸರ್ವ
ಭಯದೂರರಿನ್ನೊಬ್ಬರರಿಯೇ (೨೯)
ನರಸಿಂಹ ನಿನ್ನುಳಿದು ಜಗವ ಕಾಯ್ವ
ಪರದೈವರುಂಟೆಂದು ಬಗೆವ ನರರ
ಪರಮೇಷ್ಠಿ ರಾಯನು ನಗುವ ನಿತ್ಯ
ನಿರಯಾಂಧ ಕೂಪದೊಳು ಹುಗಿವಾ (೩೦)
ದಾಸ ದಾಸರ ದಾಸನೆಂದು ಬಿಡದೆ
ನೀ ಸಲಹೋ ಎನ್ನನೆಂದೆಂದು ನಿನ್ನ
ನಾ ಸೇವಿಸುವೆ ಕೃಪಾಸಿಂಧು ಎಮ್ಮನು
ದಾಸಿಸದನಿಮಿತ್ತ ಬಂಧೂ (೩೧)
ಎಂದೆಂದು ನೀ ಬಡವನಲ್ಲ ನಿನ್ನ
ಪೊಂದಿದವರ ಬಿಡುವನಲ್ಲ ಹೃದಯ
ಮಂದಿರದೊಳಗೆ ಬಲ್ಯಲ್ಲಾ ಚಿದಾ
ನಂದ ನೀ ಭಕ್ತ ವತ್ಸಲ್ಲಾ (೩೨)
ಕಾಮಿತಪ್ರದನೆಂಬ ಬಿರುದು ಕೇಳಿ
ನಾ ಮುದದಿ ಬಂದೆನೋ ಅರಿದು ಎನ್ನ
ತಾಮಸ ಮತಿಗಳನು ತರಿದು ಮಮ
ಸ್ವಾಮಿ ನೋಡೆನ್ನ ಕಣ್ದೆರದು (೩೩)
ಹಿತವರೊಳು ನಿನಗಧಿಕರಾದವರ ತ್ರಿದಶ
ತತಿಗಳೊಳು ಕಾಣೆನೋ ಪ್ರಮೋದ ನೀನೆ
ಗತಿಯೆಂದು ನಂಬಿದೆ ವಿವಾದವ್ಯಾಕೊ
ಪತಿತಪಾವನ ತೀರ್ಥಪಾದ (೩೪)
ಮಡದಿ ಮಕ್ಕಳ ತಂದೆ ತಾಯಿ ಎನ್ನ
ಒಡಹುಟ್ಟಿದವರ ನೀ ಕಾಯಿ ಲೋಕ
ದೊಡೆಯ ನೀನಲ್ಲದಿನ್ಯಾರೈ ಎನ್ನ
ನುಡಿಯ ಲಾಲಿಸೋ ಶೇಷಶಾಯಿ (೩೫)
ಅನುಬಂಧ ಜನರಿಂದ ಬಪ್ಪ ಕ್ಲೇಶ
ವನುಭವಿಸಲಾರೆ ಎನ್ನಪ್ಪ ಉದಾ
ಸೀನ ಮಾಡಿ ದಯಮಾಡದಿಪ್ಪರೇನೋ
ಘನ ಮಹಿಮ ಫಣಿರಾಜತಲ್ಪ (೩೬)
ಹದಿನಾಲ್ಕು ಲೋಕಂಗಳನಾಳ್ವ ಬ್ರಹ್ಮ
ಮೊದಲಾದವರು ನಿನ್ನ ಚೆಲ್ವ ನಖದ
ತುದಿ ಬಣ್ಣ ಕಂಡು ಕಡೆ ಬೀಳ್ವದಿಲ್ಲಾ
ವಿಧಿಸಲಾಪೆನೆ ನಿನ್ನ ಸಲ್ಲ (೩೭)
ಧನ ಧಾನ್ಯ ಪಶು ಪತ್ನಿ ಗೇಹ ಜನನೀ
ಜನಕ ಜಾಮಾತ ಸಖ ನೇಹ ಅನುಜ
ತನುಜಾಪ್ತವರ್ಗದಿಂದೀಹ ಸೌಖ್ಯ
ನಿನಗರ್ಪಿಸಿದೆ ಎನ್ನ ದೇಹಾ (೩೮)
ನೀನಿತ್ತ ಸಂಸಾರದೊಳಗೆ ಸಿಲುಕಿ
ನಾನೊಂದೆ ಕರೆ ನಿನ್ನ ಬಳಿಗೆ ಚರಣ
ಧ್ಯಾನ ದೊರಕಲು ಭವದಿ ಮುಳುಗೆ ನಿನ್ನ
ಕಾಣದಿರಲಾರೆನರ ಘಳಿಗೆ (೩೯)
ಸಲುಗೆ ಬಿನ್ನಪವ ನೀ ಕೇಳೋ ಎನ್ನ
ಬಲು ದುರುಳತನವ ನೀ ತಾಳೋ ನೀನೆ
ನೆಲೆಯಲ್ಲದೆನಗ್ಯಾರು ಪೇಳೋ ಎನ್ನ
ಕುಲದೈವ ಬಹುಕಾಲ ಬಾಳೋ (೪೦)
ಸಾಂದೀಪ ನಂದನನ ತಂದ ನಂದ
ನಂದನನೆ ಎನ್ನ ಭಯ ವೃಂದ ಕಳೆದು
ಎಂದೆಂದು ಕುಂದದಾನಂದವೀಯೋ
ಇಂದಿರಾರಮಣ ಗೋವಿಂದ (೪೧)
ವಿಶ್ವ ತೈಜಸ ಪ್ರಾಜ್ಞ ತುರಿಯಾ ಎನ್ನ
ದುಸ್ವಭಾವವ ನೋಡಿ ಪೊರೆಯದಿಹರೆ
ನಿಸ್ಪೃಹ ನಾನಿನ್ನಂಘ್ರಿ ಮೊರೆಯ ಪೊಕ್ಕೆ
ಅಸ್ವತಂತ್ರನ ಕಾಯೋ ಪಿರಿಯಾ (೪೨)
ಇಹಪರದಿ ಸೌಖ್ಯ ಪ್ರದಾತ ನೀನೆ
ಅಹುದೋ ಲೋಕೈಕ ವಿಖ್ಯಾತ ಮಹಾ
ಮಹಿಮ ಗುಣಕರ್ಮ ಸಂಜಾತ ದೋಷ
ದಹಿಸು ಸಂಸಾರಾಬ್ಧಿ ಪೋತಾ (೪೩)
ಲೋಕಬಾಂಧವನೆಂಬ ಖ್ಯಾತಿಯನ್ನು
ನಾ ಕೇಳಿದೆನು ಖಳಾರಾತಿ ಮನೋ
ಶೋಕ ಮೋಹಾಜ್ಞಾನ ಭೀತಿ ಬಿಡಿಸು
ಶ್ರೀ ಕರಾರ್ಚಿತ ಸ್ವಯಂ ಜ್ಯೋತಿ (೪೪)
ಒಂದು ಗೇಣೊಡಲನ್ನಕಾಗಿ ಅಲ್ಪ
ಮಂದಭಾಗ್ಯರ ಮನೆಗೆ ಪೋಗಿ ದೈನ್ಯ
ದಿಂದ ಸತ್ಕರ್ಮಗಳ ನೀಗಿ ಕಂದಿ
ಕುಂದಿದೆನೋ ಸಲಹೋ ಲೇಸಾಗಿ (೪೫)
ಪಾತಕರೊಳಗಧಿಕ ನಾನಯ್ಯ ಜಗ
ತ್ಪಾತಕವ ಕಳೆವ ಮಹಾರಾಯ ನಿನ್ನ
ದೂತನಲ್ಲವೆ ಜೀಯ ಜಗ
ನ್ನಾಥ ವಿಠಲ ಪಿಡಿಯೋ ಕೈಯಾ (೪೬)
SrI veMkaTAcala nivAsa ninna
sEvAnusEvakara dAsA enisi
jIvisuva narage AyAsA yAke
SrIvarane koDu enage lEsA (1)
svAmi kaMsAri praBu ninna divya
nAma odagalu jihvegennA dOSha
sImegANadiddarenna svAmi
nI mareyalAgadu suprasanna (2)
nIca yOnigaLalli baMde innu
nAcikillavo enage taMde nIne
mOcakanu binnapa videMde savya
sAcisaKa kaipiDiyO muMde (3)
nAnobbanE ninage BAravAde
nEno saMtata nirvikAra enna
hInatva nODalkapAra cakra
pANi mADadirenna dUra (4)
kaMDa kaMDavarigAlparidu bEDi
beMDAde ninnaMGri maredu diTa
toMDavatsalaneMba birudu kAyo
puMDarIkAkSha nInaridu (5)
I samayadoLagenna tappa nODi
nI saDila bEDuvarEnappa ninna
dAsarpesarugoLalu bappA dOSha
nASavAgOdu timmappa (6)
kAmAdigaLa kATadiMda ninna
nA marede saccidAnaMda enna
I mahA dOShagaLa vRuMda nODade
nI mannisenna mukuMda (7)
nI piDidare sahasrAra sujana
pApATavige sukuThArA jaga
dvyApakane enna saMsAra GOra
kopadiMdettayya dhIra (8)
siMdhUra rAja paripAla kOTi
kaMdarpa lAvaNya SIla dharma
maMdAra BUjAlavAla yOgi
saMdOha hRutkumuda SIlA (9)
Sivana vairiya koMda Sakta puNya
SravaNa kIrtana ninna BaktA janara
BavadoLage daNisuvudu yuktavEno
Buvana pAvana nityamukta (10)
SrIkara SrImadAnaMta niKiLa
lOkaikanAtha ninnaMtha saKara
nA kANenello mahaMtA enna
nI kAyO kaMDya BUkAMtA (11)
kara karma citratvagrasana kAya
karaNa manahaMkAra GrANA buddhi
caraNa pAyUpastha nayana jAta
urupApa kShamisu SrI ramaNA (12)
animitta baMdhu nIyenna biDuvu
danucitavO lOka pAvanna carita
mana vacana kAyadali ninna pAda
vanaja naMbide suprasannA (13)
nInalladenage gatiyilla pava
mAna vaMdita kELO solla enna
j~jAnEcCe kriyegaLellA ninna
dhInavallave lakShmInallA (14)
prAcIna karmAMdha kUpa-doLage
yOcisuva narara saMtApa ninage
gOcarisadEnO bahurUpa veMka
TAcalanilaya pAhi SrIpA (15)
yAke daya bAradennalli naraka
nAka BU lOkaMgaLalli carisi
nA kaShTapaTTa bagge nI balli vIta
SOka koDu Bakuti ninnalli (16)
ninnaMGri daruSanava koDade hIge
banna baDisuvarEnO biDade nAnu
munna mADida pApa keDade nI pra
panna vatsalaneMdu nuDide (17)
tApatrayagaLiMda noMde mahA
pApiShTharallanna tiMde innu
AparEtESvarana muMde pOgi
nA pELikoLalEno taMde (18)
dEha saMbaMdhigaLa sahitavAgi
nA hoMdidenu lOkamOhita enna
mOhipudu ninagEnu vihita hRudaya
bAhiraMtaradi sannihita (19)
pOgutide divasa kamalAkSha parama
yOgESa ninna aparOkSha enage
hyAgAguvudo surAdhyakSha durita
nInu kAmita kalpavRukSha (20)
gatiyAro ninnuLidu dEva ramA
pati nIne Bakta saMjIva enna
satisutara anudinadi kAva BAra
satata ninnadu mahAnuBAva (21)
doDDavara kAyvudEnaridu parama
daDDarane kAyuvudE birudu enna
guDDadaMtaha pApa taridu kAyO
vaDDi nAyaka sAregarado (22)
j~jAnigaLu nIcarali karuNA mADa
rEnO biDuvarE rathacaraNa pANi
BAnu caMDa ravikiraNa biDade
tAnippane ramAramaNa (23)
ADalyAtake bahaLa mAtA parara
bEDalArenO jagatrAtA hIge
mADuvarE keLenna mAta nIne
nIDenage puruShArtha dAtA (24)
bEDalyAtake bahaLa mAtA enna
kEDu ninnadallE balidauta pAda
bEDikoMbuve nAnanAtha dUra
nODalAgadu pArthasUta (25)
sArasad Baktiyali nitya biDade
SAradESana tutipa Bakta janara
pAra saMtaisuvudu mithyavalla
SrIramaNa sAkShidake satyA (26)
PaNirAja BOga pariyaMka Sayana
praNatArti haraneMbo aMkA kELi
maNide ninnaMGrige SaSAMkA BAsa
daNisalAgadu niShkaLaMkA (27)
kArtavIryAjunana koMda Bavya
kIrti ninnAnaMda vRuMda satata
kIrtisuva narara bahukuMda nODa
dArtanna poreyo gOviMda (28)
dayadiMda nODenna hariye jaga
nmayane j~jAnAnaMda siriye mano
bhayava pariharisinnu doreye sarva
BayadUrarinnobbarariyE (29)
narasiMha ninnuLidu jagava kAyva
paradaivaruMTeMdu bageva narara
paramEShThi rAyanu naguva nitya
nirayAMdha kUpadoLu hugivA (30)
dAsa dAsara dAsaneMdu biDade
nI salahO ennaneMdeMdu ninna
nA sEvisuve kRupAsiMdhu emmanu
dAsisadanimitta baMdhU (31)
eMdeMdu nI baDavanalla ninna
poMdidavara biDuvanalla hRudaya
maMdiradoLage balyallA cidA
naMda nI Bakta vatsallA (32)
kAmitapradaneMba birudu kELi
nA mudadi baMdenO aridu enna
tAmasa matigaLanu taridu mama
svAmi nODenna kaNderadu (33)
hitavaroLu ninagadhikarAdavara tridaSa
tatigaLoLu kANenO pramOda nIne
gatiyeMdu naMbide vivAdavyAko
patitapAvana tIrthapAda (34)
maDadi makkaLa taMde tAyi enna
oDahuTTidavara nI kAyi lOka
doDeya nInalladinyArai enna
nuDiya lAlisO SEShaSAyi (35)
anubaMdha janariMda bappa klESa
vanuBavisalAre ennappa udA
sIna mADi dayamADadipparEnO
Gana mahima PaNirAjatalpa (36)
hadinAlku lOkaMgaLanALva brahma
modalAdavaru ninna celva naKada
tudi baNNa kaMDu kaDe bILvadillA
vidhisalApene ninna salla (37)
dhana dhAnya paSu patni gEha jananI
janaka jAmAta saKa nEha anuja
tanujAptavargadiMdIha sauKya
ninagarpiside enna dEhA (38)
nInitta saMsAradoLage siluki
nAnoMde kare ninna baLige caraNa
dhyAna dorakalu Bavadi muLuge ninna
kANadiralArenara GaLige (39)
saluge binnapava nI kELO enna
balu duruLatanava nI tALO nIne
neleyalladenagyAru pELO enna
kuladaiva bahukAla bALO (40)
sAMdIpa naMdanana taMda naMda
naMdanane enna Baya vRuMda kaLedu
eMdeMdu kuMdadAnaMdavIyO
iMdirAramaNa gOviMda (41)
viSva taijasa prAj~ja turiyA enna
dusvaBAvava nODi poreyadihare
nispRuha nAninnaMGri moreya pokke
asvataMtrana kAyO piriyA (42)
ihaparadi sauKya pradAta nIne
ahudO lOkaika viKyAta mahA
mahima guNakarma saMjAta dOSha
dahisu saMsArAbdhi pOtA (43)
lOkabAMdhavaneMba KyAtiyannu
nA kELidenu KaLArAti manO
SOka mOhAj~jAna BIti biDisu
SrI karArcita svayaM jyOti (44)
oMdu gENoDalannakAgi alpa
maMdaBAgyara manege pOgi dainya
diMda satkarmagaLa nIgi kaMdi
kuMdidenO salahO lEsAgi (45)
pAtakaroLagadhika nAnayya jaga
tpAtakava kaLeva mahArAya ninna
dUtanallave jIya jaga
nnAtha viThala piDiyO kaiyA (46)
Leave a Reply