Composer : Shri Gopala dasaru
ಪಾಲಿಸಯ್ಯ ಪವನನಯ್ಯ ಪಾಲವಾರಿಧಿ ಶಯ್ಯ,
ವೇಂಕಟರೇಯಾ || ಪ||
ಕಾಲಕಾಲಕೆ ಹೃದಯಾಲಯದೊಳು ನಿನ್ನ
ಶೀಲಮೂರುತಿ ತೋರೋ ಮೇಲು ಕರುಣದಿ || ಅ. ಪ||
ಶ್ರೀಶ ಸಂಸಾರವೆಂಬ ಸೂಸುವ ಶರಧಿಯೊಳು
ಈಸಲಾರೆನೊ ಹರಿಯೇ ಎನ್ನಯ ಧೊರೆಯೇ
ದಾಸನೆಂತೆಂದಮ್ಯಾಲೆ ಘಾಸಿಗೊಳಿಸುವುದು
ಲೇಸು ನಿನಗಲ್ಲವಯ್ಯ, ಹೇ ಜೀಯ್ಯ
ದೋಷರಾಶಿಗಳೆಲ್ಲ ನಾಶಮಾಡಿ ವಿ –
ಶೇಷವಾದ ಜ್ಞಾನ ಭಕ್ತಿ ವೈರಾಗ್ಯವನಿತ್ತು
ಆಶೆಯ ಬಿಡಿಸೆನ್ನ ಮೀಸಲ ಮನಮಾಡಿ
ನೀ ಸುಳಿವುದು ಶ್ರೀನಿವಾಸ ಕೃಪಾಳೋ|| ೧||
ಮೂರು ಗುಣಗಳಿಂದ ಮೂರು ತಾಪಗಳಿಂದ
ಮೂರು ಅವಸ್ಥೆಯಿಂದ, ಮುಕುಂದ
ಮೂರು ಐದರಿಂದ ಮೂರು ಏಳರಿಂದ
ಮೂರಾರ ದಾರಿಕಾಣದೆ, ಮೂರಾದೆ
ಮೂರು ಹಿಡಿಸಿ ಮ್ಯಾಲೆ ಮೂರೆರಡೋಡಿಸಿ
ಮೂರು ಮೂರು ಭಕ್ತಿ ಮೂರು ಕಾಲಕೆ ಇತ್ತು
ಮೂರು ರೂಪನಾಗಿ ಮೂರು ಲೋಕವನೆಲ್ಲ
ಮೂರು ಮಾಡುವ ಬಿಂಬಮೂರುತಿ ವಿಶ್ವ|| ೨||
ಕರುಣಾಸಾಗರ ನಿನ್ನ ಸ್ಮರಣೆಮಾತ್ರದಿ ಸಕಲ –
ದುರಿತ ಪರಿಹಾರವೆಂದು ನಾ ಬಂದು
ಮೊರೆ ಹೊಕ್ಕಮ್ಯಾಲಿನ್ನು ಪೊರೆಯಬೇಕಲ್ಲದೆ
ಜರಿದು ದೂರ ನೂಕುವರೆ, ಮುರಾರೇ
ಮರುತಾಂತರ್ಗತ ಗೋಪಾಲವಿಠಲ ಈ
ಶರೀರ ನಿನ್ನ ಚರಣಕೊಪ್ಪಿಸಿದೆನೊ
ಸರಿಬಂದದ್ದು ಮಾಡೋ ಬಿರುದು ನಿನ್ನದು ದೇವ
ಪರಮ ದಯಾನಿಧೆ ಉರಗಾದ್ರಿವಾಸ|| ೩||
pAlisayya pavananayya pAlavAridhi Sayya,
vEMkaTarEyA || pa||
kAlakAlake hRudayAlayadoLu ninna
SIlamUruti tOrO mElu karuNadi || a. pa ||
SrISa saMsAraveMba sUsuva SaradhiyoLu
IsalAreno hariyE ennaya dhoreyE
dAsaneMteMdamyAle GAsigoLisuvudu
lEsu ninagallavayya, hE jIyya
dOSharASigaLella nASamADi vi –
SEShavAda j~jAna Bakti vairAgyavanittu
ASeya biDisenna mIsala manamADi
nI suLivudu SrInivAsa kRupALO || 1 ||
mUru guNagaLiMda mUru tApagaLiMda
mUru avastheyiMda, mukuMda
mUru aidariMda mUru ELariMda
mUrAra dArikANade, mUrAde
mUru hiDisi myAle mUreraDODisi
mUru mUru Bakti mUru kAlake ittu
mUru rUpanAgi mUru lOkavanella
mUru mADuva biMbamUruti viSva || 2 ||
karuNAsAgara ninna smaraNemAtradi sakala –
durita parihAraveMdu nA baMdu
more hokkamyAlinnu poreyabEkallade
jaridu dUra nUkuvare, murArE
marutAMtargata gOpAlaviThala I
SarIra ninna caraNakoppisideno
saribaMdaddu mADO birudu ninnadu dEva
parama dayAnidhe uragAdrivAsa || 3 ||
Leave a Reply