Lakshmi Stavaraja – Dirgha kriti

Composer : Shri Gurujagannatha dasaru

By Smt.Shubhalakshmi Rao
Smt.Lakshmi

ಹರಿಯರಸಿ ಸಿರಿನೀನೆ ಸರ್ವದ
ಹರಿಯ ವಕ್ಷ ಸ್ಥಲ ನಿವಾಸಿನಿ
ಹರಿಯ ದಕ್ಷಿಣ ತೊಡೆಯೊಳೊಪ್ಪುತ ಕಾಲ ದೇಶದಲಿ
ಹರಿಯ ಸಹಿತದಿ ಹರ್ಯನುಜ್ಞದಿ
ಹರಿಯ ಸೇವಾ ನಿರುತಗೈಯುತ
ಹರಿಯ ಪದಕೆ ನೀಡಿ ಸುಖಿಸುವ ಶಿರಿಯೆ ವಂದಿಪೆನು ||೧||

ಹರಿಯ ಕರುಣದಿ ಸರಸಿಜಾಂಡವ
ಹರಿಯ ಸಹಿತದಿ ಹರಿಯ ತೆರದಲಿ
ಹರಿಯ ಮನಕತಿ ಪ್ರೀತಿಗೋಸುಗ ಸೃಷ್ಟಿ ಸ್ಥಿತಿಲಯವ
ಹರಿಯ ಚಿತ್ತನುಕೂಲ ಮಾಡುತ
ಹರಿಯ ಸಂಕಲ್ಪಾನುಸಾರದಿ
ಹರಿಯನುಗ್ರಹ ಪಡೆದ ನಿನ್ನನು ತುತಿಪೆ ನನವರತ ||೨||

ಹರಿಯ ರಮಣಿಯೆ ಹರಿಯ ಜ್ಞಾನವ
ಹರಿಯ ಪದಯುಗ ಭಕ್ತಿ ಪಾಲಿಸಿ
ಹರಿಯ ಸಹಿತದಿ ನಿನ್ನ ರೂಪವ ಎನ್ನ ಮನದಲ್ಲಿ
ಹರಿಯ ವಲ್ಲಭೆ ತೋರೆ ಸಂತತ
ಹರಿಯ ಮನ ಸಂಕಲ್ಪದಂತೇ
ಹರಿಯ ಮೂರುತಿ ನೆನಹನಿತ್ತೂ ಪೊರೆಯೆ ಮಜ್ಜನನೀ ||೩||

ಹರಿಯ ಹೃದಯದಲಿದ್ದ ತೆರದಲಿ
ಶಿರಿಯೆ ಎನ್ನಯ ಸದನ ಮಧ್ಯದಿ
ಹರಿಯ ಸಹಿತದಿ ನೀನೆ ನೆಲಸೀ ಸರ್ವ ಕಾಲದಲಿ
ಹರಿಯ ನಿನ್ನಯ ಸೇವೆ ಗೋಸುಗ
ಪರಮ ನಿನ್ನ ವಿಭೂತಿ ಸಹಿತದಿ
ಹರಿ ವಿಭೂತಿಜ ಸಕಲ ಭಾಗ್ಯವನಿತ್ತು ಪೊರೆಯೆನ್ನ ||೪||

ಹರಿಯ ಮಾನಿನಿ ಸಕಲ ಸಂಪದ
ಹರಿಯ ಪ್ರೇಮದಿಯಿತ್ತು ನೀನೇ
ಹರಿಯ ಸೇವೆಯ ಗೈಸಿ ಎನ್ನನು ಪೊರೆಯೆ ಮಜ್ಜನನೀ
ಹರಿಯ ಸಹಿತದಿ ನೀನೆ ಸಂತತ
ಬೆರೆತು ಮನೆಯಲಿ ಸ್ವರ್ಣ ವೃಷ್ಟಿಯ
ಕರೆದು ಭಾಗ್ಯವನಿತ್ತು ಎನ್ನನು ಪೊರೆಯೆ ಸಿರಿದೇವಿ ||೫||

ಹರಿಯ ಸಹ ವೈಕುಂಠ ಲೋಕದಿ
ಇರುವೊ ತೆರದಲಿ ಎನ್ನ ಸದನದಿ
ಹರಿಯ ಸಹಿತದಲಿದ್ದು ಮಂಗಳ ಕಾರ್ಯ ದಿನದಿನದಿ
ಹರಿಯ ತತ್ತ್ವ ವಿಚಾರ ನಿನ್ನಯ
ಹರಿಯ ಮಹಿಮೆಯನರುಹಿ ಸಂತತ
ಹರಿಯ ಭಕ್ತರ ಸಂಗದಲಿ ಹರಿದಾಸನೆನಿಸೆನ್ನ ||೬|

ಹರಿಯು ಜನಕನು ಜನನಿ ನೀನೇ
ಶಿರಿಯನಿತ್ತೂ ಪಾಲಿಸೆಂದೆನು
ಹರಿಯ ಮಂದಿರವೆನಿಪ ಎನ್ನಯ ಹೃದಯ ಮಧ್ಯದಲಿ
ಹರಿಯ ಗೂಡ್ಯನುದಿನದಿ ನಿನ್ನಯ
ಹರಿಯ ರೂಪವ ತೋರಿ ಭಾಗ್ಯವ
ಕರದಿ ನೀಡಿಪರಿಯಲೆನ್ನನು ಪೊರೆಯೆ ಶಿರಿದೇವಿ ||೭||

ಹರಿಯ ಪದ ಸಂಜಾತವಾದಾ
ಧರಣಿ ಮಂಡಲ ಶಿರಿಯೆ ನಿನಗೇ
ಅರಸನಾಗಿಹ ಹರಿಯ ಗೂಡಿ ನಿಧಿಯ ನೀಡಮ್ಮ
ಹರಿಯ ಕರುಣದಿ ಭಾಗ್ಯ ನೀಡುವ
ಪರಮ ಶಕುತಿಯು ನಿನಗೆ ಇರುವುದು
ಕರುಣದಿಂದಲಿ ನೋಡಿ ಭಾಗ್ಯವನಿತ್ತು ಪೊರೆಯಮ್ಮ ||೮||

ಹರಿಗೆ ಅರಸೀ ಎನಿಪ ನಿನ್ನನು
ಸರಸಿಜಾಸನ ರುದ್ರ ಶಕ್ರರು
ಪರಮ ಭಕುತಿ ಜ್ಞಾನ ಪೂರ್ವಕ ಭಜಿಸಿ ನಿಜ ಗತಿಯ
ತ್ವರದಿ ಸೇರಿದ ಶ್ರುತಿಯ ವಾರ್ತೆಯ
ಕರಣದಿಂದರಿತೀಗ ನಿನ್ನಯ
ಚರಣ ಕಮಲವ ಮನದಿ ಸಂತತ ಭಜಿಪೆ ಕಲ್ಯಾಣಿ ||೯||

ಮಾಧವನ ಮನ ಪ್ರೇಮ ಮಾನಿನಿ
ಸಾದರದಿ ಸೌಭಾಗ್ಯ ಧನಗಳ
ಯಾದವೇಶ ಸುಧಾಮ ದ್ವಿಜವರಗಿತ್ತ ತೆರದಂತೆ
ಮೋದ ಮನದಲಿ ಸಾಂದ್ರ ಸುಖಮಯ
ಬೋಧ ಭಕುತಿ ವಿರಕುತಿ ಪಾಲಿಸಿ
ವೇದಗಮ್ಯನ ಭಜನೆ ಮಾಡಿಸು ವೇದಕಭಿಮಾನಿ ||೧೦||

ಉದಿತ ಭಾಸ್ಕರ ಕೋಟಿ ಭಾಸಳೆ
ಬಿದುರ ಮಂಡಲ ಜೈಪ ವದನೆಯೆ
ಮದನ ಮೂರುತಿ ಕೋಟಿ ನಿಭ ಲಾವಣ್ಯ ಪೂರಿತಳೇ
ಪದುಮ ನಯನಳೆ ನಾಸ ಚಂಪಕ
ಭಿದುರ ಫಲಕ ಸುಫಾಲ ಕುಂತಳೆ
ಮದನ ಕಾರ್ಮುಕ ಪುಬ್ಬು ಯುಗಳವು ಕರಣಯುಗ ಶೋಭೆ ||೧೧||

ಕದಪು ಕನ್ನಡಿ ಕುಮುದ ಕುಟ್ಮಲ
ರದನ ಪಂಕ್ತಿಯು ರಕ್ತ ಓಷ್ಟವು
ಚದುರೆಯಾನನ ಮಂದಹಾಸವು ಚಂದ್ರ ಚಂದ್ರಿಕೆಯು
ಉದಯ ತಾಮ್ರ ಲಲಾಟ ಶೊಭಿತೆ
ಒದಗಿ ರಾಜಿಪ ಭೃಂಗ ಕುಂತಳೆ
ಉದಕ ಬಿಂದುಗಳೆಂಬೊ ಬೈತಲೆ ಮುತ್ತು ರಾಜಿತಳೆ ||೧೨||

ಮುದ್ದು ಚುಬಕವು ಕಂಬು ಕಂಧರ
ಪೊದ್ದಿ ಕೊಂಡಿಹ ಬಾಹು ದ್ವಂದ್ವವು
ಎದ್ದು ತೋರುತ ಕರಿಯ ಕರತೆರ ತಾವೆ ಶೋಭಿಪವೊ
ಮುದ್ರೆ ರತ್ನಾಂಗುಳಿಯ ಸಂಘದಿ
ಪೊದಿದ ಹಸ್ತ ದ್ವಯವು ಶೋಭಿಪ
ಪದ್ಮ ಕಟ್ಮಗಳೆನಿಸಿ ಸೇವಕಗಭಯ ನೀಡುವವು ||೧೩||

ಭಕ್ತ ಜನತತಿ ಪ್ರೇಮವಾರಿಧೆ
ಭಕ್ತ ಜನ ಹೃತ್ ಪದ್ಮವಾಸಿನಿ
ಭಕ್ತ ಜನ ದಾರಿದ್ರ್ಯ ಹಾರಿಯೆ ನಮಿಪೆ ನನವರತ
ಲಕುಮಿ ಕ್ರಮುಕ ಸುಕಂಠದಲಿ
ತ್ರಿರೇಖ ಶೋಭಿತೆ ನಿತ್ಯ ನಿತ್ಯದಿ
ಮುಕುತ ಹಾರಾವಳಿ ಸುಶೋಭಿತೆ ಪರಮ ಮಂಗಳಳೆ ||೧೪||

ನಿನ್ನದಾಸನ ಮಾಡೆ ಲಕುಮಿಯೆ
ಘನ್ನತರ ಸೌಭಾಗ್ಯ ಸಂಪದ
ಚೆನ್ನವಾಗೀ ನೀಡಿ ಎನ್ನಯ ಸದನದೊಳಗಿದ್ದೂ
ನಿನ್ನ ಪತಿಯೊಡಗೊಡಿ ದಿನದಿನ
ಎನ್ನ ಕೈಯಲಿ ಪೂಜೆ ಗೊಳ್ಳುತ
ನಿನ್ನ ರೂಪವ ತೋರಿ ಪಾಲಿಸು ಪಾಲಸಾಗರಜೆ ||೧೫||

ಮಾತೆ ನಿನ್ನಯ ಜಠರ ಕಮಲ ಸು
ಜಾತನಾಗಿಹ ಸುತನ ತೆರದಲಿ
ಪ್ರೀತಿ ಪೂರ್ವಕ ಭಾಗ್ಯ ನಿಧಿಗಳನಿತ್ತು ನಿತ್ಯದಲಿ
ನೀತ ಭಕುತಿ ಜ್ಞಾನ ಪೂರ್ವಕ
ದಾತ ಗುರು ಜಗನ್ನಾಥ ವಿಠಲನ
ಪ್ರೀತಿ ಗೊಳಿಸುವ ಭಾಗ್ಯ ಪಾಲಿಸಿ ಪೊರೆಯೆ ನೀಯೆನ್ನ ||೧೬||


hariyarasi sirinIne sarvada
hariya vakSha sthala nivAsini
hariya dakShiNa toDeyoLopputa kAla dESadali
hariya sahitadi haryanuj~jadi
hariya sEvA nirutagaiyuta
hariya padake nIDi suKisuva Siriye vaMdipenu ||1||

hariya karuNadi sarasijAMDava
hariya sahitadi hariya teradali
hariya manakati prItigOsuga sRuShTi sthitilayava
hariya cittanukUla mADuta
hariya saMkalpAnusAradi
hariyanugraha paDeda ninnanu tutipe nanavarata ||2||

hariya ramaNiye hariya j~jAnava
hariya padayuga bhakti pAlisi
hariya sahitadi ninna rUpava enna manadalli
hariya vallabhe tOre saMtata
hariya mana saMkalpadaMtE
hariya mUruti nenahanittU poreye majjananI ||3||

hariya hRudayadalidda teradali
Siriye ennaya sadana madhyadi
hariya sahitadi nIne nelasI sarva kAladali
hariya ninnaya sEve gOsuga
parama ninna vibhUti sahitadi
hari vibhUtija sakala bhAgyavanittu poreyenna ||4||

hariya mAnini sakala saMpada
hariya prEmadiyittu nInE
hariya sEveya gaisi ennanu poreye majjananI
hariya sahitadi nIne saMtata
beretu maneyali svarNa vRuShTiya
karedu bhAgyavanittu ennanu poreye siridEvi ||5||

hariya saha vaikuMTha lOkadi
iruvo teradali enna sadanadi
hariya sahitadaliddu maMgaLa kArya dinadinadi
hariya tattva vicAra ninnaya
hariya mahimeyanaruhi saMtata
hariya bhaktara saMgadali haridAsanenisenna ||6|

hariyu janakanu janani nInE
SiriyanittU pAliseMdenu
hariya maMdiravenipa ennaya hRudaya madhyadali
hariya gUDyanudinadi ninnaya
hariya rUpava tOri bhAgyava
karadi nIDipariyalennanu poreye SiridEvi ||7||

hariya pada saMjAtavAdA
dharaNi maMDala Siriye ninagE
arasanAgiha hariya gUDi nidhiya nIDamma
hariya karuNadi bhAgya nIDuva
parama Sakutiyu ninage iruvudu
karuNadiMdali nODi bhAgyavanittu poreyamma ||8||

harige arasI enipa ninnanu
sarasijAsana rudra Sakraru
parama bhakuti j~jAna pUrvaka bhajisi nija gatiya
tvaradi sErida Srutiya vArteya
karaNadiMdaritIga ninnaya
caraNa kamalava manadi saMtata bhajipe kalyANi ||9||

mAdhavana mana prEma mAnini
sAdaradi saubhAgya dhanagaLa
yAdavESa sudhAma dvijavaragitta teradaMte
mOda manadali sAMdra suKamaya
bOdha bhakuti virakuti pAlisi
vEdagamyana bhajane mADisu vEdakabhimAni ||10||

udita bhAskara kOTi bhAsaLe
bidura maMDala jaipa vadaneye
madana mUruti kOTi nibha lAvaNya pUritaLE
paduma nayanaLe nAsa caMpaka
bhidura phalaka suphAla kuMtaLe
madana kArmuka pubbu yugaLavu karaNayuga SObhe ||11||

kadapu kannaDi kumuda kuTmala
radana paMktiyu rakta OShTavu
cadureyAnana maMdahAsavu caMdra caMdrikeyu
udaya tAmra lalATa Sobhite
odagi rAjipa bhRuMga kuMtaLe
udaka biMdugaLeMbo baitale muttu rAjitaLe ||12||

muddu cubakavu kaMbu kaMdhara
poddi koMDiha bAhu dvaMdvavu
eddu tOruta kariya karatera tAve SObhipavo
mudre ratnAMguLiya saMGadi
podida hasta dvayavu SObhipa
padma kaTmagaLenisi sEvakagabhaya nIDuvavu ||13||

bhakta janatati prEmavAridhe
bhakta jana hRut padmavAsini
bhakta jana dAridrya hAriye namipe nanavarata
lakumi kramuka sukaMThadali
trirEKa SObhite nitya nityadi
mukuta hArAvaLi suSObhite parama maMgaLaLe ||14||

ninnadAsana mADe lakumiye
Gannatara saubhAgya saMpada
cennavAgI nIDi ennaya sadanadoLagiddU
ninna patiyoDagoDi dinadina
enna kaiyali pUje goLLuta
ninna rUpava tOri pAlisu pAlasAgaraje ||15||

mAte ninnaya jaThara kamala su –
jAtanAgiha sutana teradali
prIti pUrvaka bhAgya nidhigaLanittu nityadali
nIta bhakuti j~jAna pUrvaka
dAta guru jagannAtha viThalana
prIti goLisuva bhAgya pAlisi poreye nIyenna ||16||

Leave a Reply

You might also like

error: Content is protected !!