Jo Jo indire lakumi

Composer : Shri Pranesha dasaru

ಜೋ ಜೋ ಇಂದಿರೆ ಲಕುಮಿ ಜಯಂತೆ |
ಜೋ ಜೋ ದಿನಮಣಿ ವಿಧುಕೋಟಿ ಕಾಂತೆ |
ಜೋ ಜೋ ಅಕ್ಷರೆ ಅಸುರಕೃತಾಂತೆ |
ಜೋ ಜೋ ಕರುಣಾವಾರಿಧಿ ಜಯವಂತೆ || ಜೋ ಜೋ || ಪ ||

ಧಾಮತ್ರಯಾಂಬರಾ ಲಂಕಾರಯುಧಳಾಗಿ
ಸ್ವಾಮಿಸೇವೆಯ ಮಾಡಿ ಸಾಲದೆ ನೀ ಪೂರ್ಣ ||
ಕಾಮಳಾದರೂಯಿನ್ನು ಆತನಲ್ಲಿಹ ಗುಣ |
ಸೀಮೆಯಿಲ್ಲದವನ ನೋಡುತಲಿ ಹಿಗ್ಗುವಳೆ || ಜೋ ಜೋ || ೧ ||

ಪ್ರಳಯಕಾಲದೊಳಾರಾರಿಲ್ಲದಾಗಲು ಆಲ |
ದೆಲೆಯಾಗಿ ಸಂತೋಷದಿಂದ ಗಂಡನ ಮೇಲೆ |
ಮಲಗಿಸಿಕೊಂಡು ಕೃತಾರ್ಥಳಾದೆಲೆ ತಾಯಿ |
ಭಳಿರೆ ನಿನ್ನೆಷ್ಟು ಬಣ್ಣಿಪೆ ಜಗನ್ಮಾತೆ || ಜೋ ಜೋ || ೨ ||

ಎಲ್ಲರ ಗುಣ ವಿಚಾರಿಸಿ, ಮಾಲಿಕೆಯ ಖಳ |
ದಲ್ಲಣನಿಗೆ ಹಾಕಿ ಸತಿಯೆನಿಸಿದೆ ದೇವಿ ||
ಎಲ್ಲೆಲ್ಲಿ ಪತಿಯ ಅಪ್ರತಿರೂವವಿಹುದೋ
ನೀನಲ್ಲೆಲ್ಲ ವಕ್ಷದೊಳಿಹ ಭಾಗ್ಯವಂತೆ || ಜೋ ಜೋ || ೩ ||

ಧನುಕೊಂದು ಶಕ್ರ, ನರಕರೊಳು ಕಾದಿದೆ |
ದನುಜನ ವಂಚಿಸಿ ನಿಜರಮಣನೈದಿದೆ ||
ವನಜಜಾಂಡವ ಬಸುರೊಳಗಿಟ್ಟು ಪಡೆದೆ
ಪವನಮಾತೆ ವಿಖ್ಯಾತೆ ಶರನಿಧಿಜಾತೆ || ಜೋ ಜೋ || ೪ ||

ಮಾನಿನಿ ಜಯಾ ಮಾಯಾಕೃತಿ ಶಾಂತೆ ಶ್ರೀಸೀತೆ |
ಜ್ಞಾನಿ ಅಂಭ್ರುಣಿ ದುರ್ಗೆ ದಕ್ಷಿಣೆ, ನೀ ಯೆನ್ನ ||
ಹೀನತೆಯೆಣಿಸದೆ ಪೋಷಿಸಿ ಸನ್ಮತಿ,
ಪ್ರಾಣೇಶವಿಠಲನ ಧ್ಯಾನದೊಳಿರಿಸೆ || ಜೋ ಜೋ || ೫ ||


jO jO iMdire lakumi jayaMte |
jO jO dinamaNi vidhukOTi kAMte |
jO jO akShare asurakRutAMte |
jO jO karuNAvAridhi jayavaMte || jO jO || pa ||

dhAmatrayAMbarA laMkArayudhaLAgi
svAmisEveya mADi sAlade nI pUrNa ||
kAmaLAdarUyinnu Atanalliha guNa |
sImeyilladavana nODutali higguvaLe || jO jO || 1 ||

praLayakAladoLArArilladAgalu Ala |
deleyAgi saMtOShadiMda gaMDana mEle |
malagisikoMDu kRutArthaLAdele tAyi |
BaLire ninneShTu baNNipe jaganmAte || jO jO || 2 ||

ellara guNa vicArisi, mAlikeya khaLa |
dallaNanige hAki satiyeniside dEvi ||
ellelli patiya apratirUvavihudO
nInallella vakShadoLiha BAgyavaMte || jO jO || 3 ||

dhanukoMdu Sakra, narakaroLu kAdide |
danujana vaMcisi nijaramaNanaidide ||
vanajajAMDava basuroLagiTTu paDede
pavanamAte viKyAte SaranidhijAte || jO jO || 4 ||

mAnini jayA mAyAkRuti SAMte SrIsIte |
j~jAni aMBruNi durge dakShiNe, nI yenna ||
hInateyeNisade pOShisi sanmati,
prANESaviThalana dhyAnadoLirise || jO jO || 5 ||

Leave a Reply

Your email address will not be published. Required fields are marked *

You might also like

error: Content is protected !!