Giriraya Giriraya

Composer : Shri Jayesha vittala

By Smt.Shubhalakshmi Rao

ಗಿರಿರಾಯ ಗಿರಿರಾಯ || ಪ ||
ಕರುಣಾರ್ಣವ ತವ ಶರಣನು ಬಾ ಬಾ || ಅ ಪ ||

ಪೂರ್ಣೇಂದುವದನನೇ ಆನಂದಮೂರುತಿ |
ಅನಾಥನೆಂದೆನ್ನ ಧ್ಯಾನಕೆ ಬಾ ಬಾ || ೧ ||

ಬ್ರಹ್ಮೋತ್ಸವದಲಿ ಆ ಮಹಭಕ್ತರ |
ಸಮ್ಮೋಹನಾರ್ಥಿ ಸಂಭ್ರಮಕೇ ಚಂದ್ರ || ೨ ||

ಪದ್ಮಾವತಿ ಪ್ರಿಯ ಜಯೇಶವಿಠ್ಠಲ |
ಪದ್ಮಜನುತ ಹೃತ್ಪದ್ಮಕೆ ಬಾ ಬಾ || ೩ ||


girirAya girirAya || pa ||
karuNArNava tava SaraNanu bA bA || a pa ||

pUrNEMduvadananE AnaMdamUruti |
anAthaneMdenna dhyAnake bA bA || 1 ||

brahmOtsavadali A mahaBaktara |
sammOhanArthi saMBramakE caMdra || 2 ||

padmAvati priya jayESaviThThala |
padmajanuta hRutpadmake bA bA || 3 ||

Leave a Reply

Your email address will not be published. Required fields are marked *

You might also like

error: Content is protected !!