Composer : Shri Purandara dasaru
ಎನ್ನ ಮನದ ಡೊಂಕ ತಿದ್ದಿಸೋ, ಹೇ ಶ್ರೀನಿವಾಸ
ಎನ್ನ ಮನದ ಡೊಂಕ ತಿದ್ದಿಸೋ ||ಪ||
ಎನ್ನ ಮನದ ಡೊಂಕ ತಿದ್ದಿಸಿ
ನಿನ್ನ ಸೇವಕನಾದ ಮೇಲೆ
ಇನ್ನು ಸಂಶಯವೇಕೊ ಕೃಷ್ಣ
ನಿನ್ನ ಚರಣದಲ್ಲಿ ಸೇರಿಸೋ ||ಅ.ಪ||
ಉದಯವಾದರೆ ಊಟದ ಚಿಂತೆ
ಅದರ ಮೇಲೆ ಭೋಗದ ಚಿಂತೆ
ಹದಿನಾಲ್ಕು ಲೋಕವ ನಾಳಬೇಕೆಂಬ ಚಿಂತೆ
ಇದು ಪುಣ್ಯ ಇದು ಪಾಪವೆಂದು
ಹೃದಯದೊಳಗೆ ಭಯವು ಇಲ್ಲದೆ
ಮದನೋಹನನಾದೆ ನಿನ್ನ
ಪದವ ನಂಬದೆ ದೀನದಯಾಳೋ |1|
ನೆರೆಮನೆಯ ಭಾಗ್ಯ ನೋಡಿ
ಸೈರಿಸಲಾರದ ಅಸೂಯನಾದೆ
ಹರಿ ಸ್ಮರಣೆಗೆ ವಿಮುಖನಾದೆ
ನರರ ಸ್ತುತಿಯ ಮಾಡಿದೆ
ಪರರ ಸತಿಗೆ ಪರರ ಅನ್ನಕೆ
ತಿರುಗಿ ತಿರುಗಿ ಚಪಲನಾದೆ
ಗುರು ಹಿರಿಯರ ದೂಷಿಸಿ
ಮರುಳಾದೆ ದೀನಶರಣ್ಯ |2|
ಅಗಣಿತ ಸುಖ ಬಂದರೆ ನಾ
ದುಃಖ ಬಂದರೆ ಹರೀಯೆಂಬುವೆ
ಜಗದೊಳು ಲಾಭವು ಬಂದರೆ ಧನಿಕ ನಾನೆಂಬೆ
ಮಿಗೆ ಹಾನಿಗೆ ಹರಿ ದೂಷಿಸಿ
ನಗೆದು ಪತಂಗ ತಿಚ್ಚಿಲಿ ಬೀಳ್ವ
ಬಗೆಯಾದೆನೊ ಪುರಂದರ ವಿಠಲ
ಖಗರಾಜ ಸುವಾಹನ |3|
enna manada DoMka tiddisO, hE SrInivAsa
enna manada DoMka tiddisO ||pa||
enna manada DoMka tiddisi
ninna sEvakanAda mEle
innu saMSayavEko kRuShNa
ninna caraNadalli sErisO ||a.pa||
udayavAdare UTada ciMte
adara mEle BOgada ciMte
hadinAlku lOkava nALabEkeMba ciMte
idu puNya idu pApaveMdu
hRudayadoLage Bayavu illade
madanOhananAde ninna
padava naMbade dInadayALO |1|
neremaneya BAgya nODi
sairisalArada asUyanAde
hari smaraNege vimuKanAde
narara stutiya mADide
parara satige parara annake
tirugi tirugi capalanAde
guru hiriyara dUShisi
maruLAde dInaSaraNya |2|
agaNita suKa baMdare nA
duHKa baMdare harIyeMbuve
jagadoLu lABavu baMdare dhanika nAneMbe
mige hAnige hari dUShisi
nagedu pataMga ticcili bILva
bageyAdeno puraMdara viThala
KagarAja suvAhana |3|
Leave a Reply