Endu kambeno ninna

Composer : Shri Shrida Vittala dasaru

By Smt.Shubhalakshmi Rao

ಎಂದು ಕಾಂಬೆನೊ ನಿನ್ನ, ಹೇ ಶ್ರೀನಿವಾಸ || ಪ ||

ನಗೆಮೊಗದ ನತಜನ ಬಂಧು ನೀ ಬಾರೆನ್ನ
ಸದಾ ಸುಪ್ರಸನ್ನ | ಮುಂದೆ ಗತಿ ಏನಯ್ಯ ಭಕುತರ ಹಿಂದುಳಿದುದಲ್ಲದಲೆ,
ತನು ಸಂಬಂಧಿಗಳ ವಶನಾಗಿ
ದುರ್ವಿಷಯಾಂಧ ಕೂಪದಿ ಮುಳುಗಿದವನಾ || ಅ.ಪ ||

ಹಲವು ಜನ್ಮದ ನೋವ
ನಾ ಪೇಳಿ ಕೊಳಲೆನ್ನಳವೆ ದೇವರದೇವಾ
ಭೂವಲಯದೊಳು ನಂಬಿದ ಭಕ್ತರ ಕಾವ
ಮಹಾನುಭಾವ |
ಸುಲಭರಲಿ ಅತಿ ಸುಲಭನೆಂದು
ಅಲವಬೋಧ ಮತಾನುಗರು
ಎನಗೊಲಿದು ಪೇಳಿದ್ದದನು ಮನದಲಿ
ತಿಳಿದು ಧೇನಿಸುವೆನೆನಲು,
ಕಲುಷ ಸಂಸ್ಕಾರಗಳ ವಶದಿಂ
ಹೊಲಬು ಗಾಣದೆ ಹಲುಬುತಿರುವೆನು
ಹೊಲಯ ಮನದ್ಹರಿದಾಟ ತಪ್ಪಿಸಿ
ನೆಲೆಗ ನಿಲ್ಲಿಸದಿರ್ದ ಬಳಿಕಿನ್ || ೧ ||

ಭಾರತೀಪತಿಪ್ರೀಯ ಎಂದೆಂದೂ
ಭಕುತರ ಭಾರ ನಿನ್ನದು ಜೀಯ,
ಜಗವರಿಯೆ ಕರುಣಾ ವಾರಿನಿಧಿ ಪಿಡಿ ಕೈಯ್ಯಾ,
ಫಣಿರಾಜ ಶಯ್ಯ |
ತಾರಕನು ನೀನೆಂದು ತಿಳಿಯದ ಕಾರಣದಿ,
ಸುಖದುಃಖಮಯ ಸಂಸಾರ ದುಸ್ತರ
ವಾರಿಧಿಯೊಳು ಪಾರುಗಾಣದೆ ಪರಿದು ಪೋಪೆನೊ
ದೂರ ನೋಳ್ಪುದು ಧರ್ಮವಲ್ಲವೊ ಸ್ವಮೀ,
ದ್ವಾರಕಾಪುರ ನಿಲಯ ಪರಮೋದಾರ
ಕರುಣದಿ ರಕ್ಷಿಸುವ ಭಾರ ನಿನ್ನದೊ
ಭವ ವಿಮೋಚಕ || ೨ ||

ವಿಖನ ಸಾರ್ಚಿತ ಪಾದ
ವಿಶ್ವೇಶ ಜನ್ಮಾದ್ಯಖಿಳ ಕಾರಣನಾದ
ನಿರ್ದೋಷ ಚಿತ್ತನೆ ಸುಖ ಗುಣಾರ್ಣವ
ಶ್ರೀದ ವಿಠ್ಠಲ ಪ್ರಸೀದ |
ಸಕಲ ಸತ್ಕತು ಯಾಗಗಳು
ಬಂಧಕವು ತೋತ್ಪರ ವಿಲ್ಲದಿರಲೆನೆ
ನಿಖಿಲ ಜೀವರು ಭಿನ್ನ ನಿನ್ನಯ,
ಶಕುತಿಗೆ ನಮೋ ಎಂಬೆನಲ್ಲದೆ,
ಯುಕುತ ಯುಕ್ತಿಗಳೊಂದನರಿಯೆ
ಅರ್ಭಕನ ಭಿನ್ನಪ ವಹಿಸಿ ನವವಿಧ
ಭಕುತಿ ಭಾಗ್ಯವ ಕೊಟ್ಟು ತವ
ಸೇವಕರ ಸೇವಕನೆನಿಸದಿರ್ದೊಡೆ || ೩ ||


eMdu kAMbeno ninna, hE SrInivAsa || pa ||

nagemogada natajana baMdhu nI bArenna
sadA suprasanna | muMde gati Enayya Bakutara hiMduLidudalladale,
tanu saMbaMdhigaLa vaSanAgi
durviShayAMdha kUpadi muLugidavanA || a.pa ||

halavu janmada nOva
nA pELi koLalennaLave dEvaradEvA
BUvalayadoLu naMbida Baktara kAva
mahAnuBAva |
sulaBarali ati sulaBaneMdu
alavabOdha matAnugaru
enagolidu pELiddadanu manadali
tiLidu dhEnisuvenenalu,
kaluSha saMskAragaLa vaSadiM
holabu gANade halubutiruvenu
holaya manad~haridATa tappisi
nelega nillisadirda baLikin || 1 ||

BAratIpatiprIya eMdeMdU
Bakutara BAra ninnadu jIya,
jagavariye karuNA vArinidhi piDi kaiyyA,
PaNirAja Sayya |
tArakanu nIneMdu tiLiyada kAraNadi,
suKaduHKamaya saMsAra dustara
vAridhiyoLu pArugANade paridu pOpeno
dUra nOLpudu dharmavallavo swamI,
dvArakApura nilaya paramOdAra
karuNadi rakShisuva BAra ninnado
Bava vimOcaka || 2 ||

viKana sArcita pAda
viSvESa janmAdyaKiLa kAraNanAda
nirdOSha cittane suKa guNArNava
SrIda viThThala prasIda |
sakala satkRatu yAgagaLu
baMdhakavu tOtpara villadiralene
niKila jIvaru Binna ninnaya,
Sakutige namO eMbenallade,
yukuta yuktigaLoMdanariye
arBakana Binnapa vahisi navavidha
Bakuti BAgyava koTTu tava
sEvakara sEvakanenisadirdoDe || 3 ||

Leave a Reply

Your email address will not be published. Required fields are marked *

You might also like

error: Content is protected !!