Composer : Shri Harapanahalli Bheemavva
ಹೂವ ಕೊಡೆ ತಾಯಿ ವರವ ಕೊಡೆ
ದೇವಿ ನಿನ್ನಯ ಮುಡಿ ಮ್ಯಾಲಿದ್ದ ಮಲ್ಲಿಗೆ |ಪ|
ಕಟ್ಟ್ಟುವೊ ತೊಟ್ಟ್ಟಿಲ್ ಹುಟ್ಟೊ ಗಂಡು ಮಕ್ಕಳು
ಮುತ್ತೈದೆ ತನವ ಮುದದಿಂದ
ಮುತ್ತೈದೆ ತನವ ಮುದದಿಂದ ಬೇಡುವೆ
ಶ್ರೀ ಮಾಹಲಕುಮಿ ದಯಮಾಡೆ |೧|
ಅಂದಣ ರಥ ಬಂದ್ಹೋಗೋ ಹೆಣ್ಣು ಮಕ್ಕಳು
ಬಂಧುಗಳಿಗೆಲ್ಲ ಬಲು ಕ್ಷೇಮ
ಬಂಧುಗಳಿಗೆಲ್ಲ ಬಲು ಕ್ಷೇಮ ಇರುವಂತೆ
ಇಂದಿರಾದೇವಿ ದಯಮಾಡೆ |೨|
ದಂಪತಿ ನಲಿಸುತ ಸಂಪತ್ತು ಸೌಭಾಗ್ಯ
ಇಂಥ ಮಂದಿರಕೆ ಬಹುಮಾನ
ಇಂಥ ಮಂದಿರಕೆ ಬಹುಮಾನ ಇರುವಂತೆ
ಸಂತೋಷದಿ ವರವ ದಯಮಾಡೆ |೩|
ಅನ್ನ ಗೋಗಳು ದಿವ್ಯ ಕನ್ಯಾ ಭೂದಾನ ಹಿ-
ರಣ್ಯ ದಾನಗಳ ಹಿತದಿಂದ ಹಿ-
ರಣ್ಯ ದಾನಗಳ ಹಿತದಿಂದ ಮಾಡುವಂತೆ ಸಂ-
ಪನ್ನೆ ನೀ ವರವ ದಯಮಾಡೆ |೪|
ಎಂದಿಗೆ ಮನೋಭೀಷ್ಟ ಎಂದಿಗೆ ನಿನಪಾದ
ಪೊಂದಿರಲೆಂದೂ ಮರೆಯದೆ
ಪೊಂದಿರಲೆಂದೂ ಮರೆಯದೆ ಭೀಮೇಶ ಕೃಷ್ಣನ-
ರ್ಧಾಂಗಿ ದಯಮಾಡೆ |೫|
hUva koDe tAyi varava koDe
dEvi ninnaya muDi myAlidda mallige |pa|
kaTTTuvo toTTTil huTTo gaMDu makkaLu
muttaide tanava mudadiMda
muttaide tanava mudadiMda bEDuve
SrI mAhalakumi dayamADe |1|
aMdaNa ratha baMd~hOgO heNNu makkaLu
baMdhugaLigella balu kShEma
baMdhugaLigella balu kShEma iruvaMte
iMdirAdEvi dayamADe |2|
daMpati nalisuta saMpattu sauBAgya
iMtha maMdirake bahumAna
iMtha maMdirake bahumAna iruvaMte
saMtOShadi varava dayamADe |3|
anna gOgaLu divya kanyA BUdAna hi-
raNya dAnagaLa hitadiMda hi-
raNya dAnagaLa hitadiMda mADuvaMte saM-
panne nI varava dayamADe |4|
eMdige manOBIShTa eMdige ninapAda
poMdiraleMdU mareyade
poMdiraleMdU mareyade BImESa kRuShNana-
rdhAMgi dayamADe |5|
Leave a Reply