Composer : Shri Gurushrisha Vittala
ಭಾನುಕೋಟಿತೇಜ ಲಾವಣ್ಯಮೂರುತಿ
ಶ್ರೀವೇಂಕಟೇಶನೆ ನಮೋ ನಮೋ, ಶ್ರೀನಿವಾಸದಯಾನಿಧೇ || ಪ ||
ಶೇಷಾಚಲವಾಸ ದೋಷದೂರನೆ ಭಕ್ತಪೋಷಕ
ಶ್ರೀಕಾಂತ ನಮೋ ನಮೋ , ಶ್ರೀನಿವಾಸದಯಾನಿಧೇ || ೧ ||
ಖಗರಾಜನವಾಹನ ಜಗದೊಡೆಯನೆ ನಿನ್ನ
ಅಗಣಿತ ಮಹಿಮೆಗೆ ನಮೋ ನಮೋ , ಶ್ರೀನಿವಾಸದಯಾನಿಧೇ || ೨ ||
ನೀಲಮೇಘಶ್ಯಾಮ ಪಾಲಸಾಗರಶಯನ
ಶ್ರೀಲಕುಮೀಶನೆ ನಮೋ ನಮೋ, ಶ್ರೀನಿವಾಸದಯಾನಿಧೇ || ೩ ||
ಶಂಖಚಕ್ರಧರ ವೇಂಕಟರಮಣ ಅಕಳಂಕ
ಮೂರುತಿದೇವ ನಮೋ ನಮೋ, ಶ್ರೀನಿವಾಸದಯಾನಿಧೇ || ೪ ||
ಪನ್ನಂಗಶಯನನೆ ನಿನ್ನಂಥ ದೇವರು ಇನ್ನುಂಟೆ
ಅಜಭವಸುರವಂದ್ಯಾ | ಶ್ರೀನಿವಾಸದಯಾನಿಧೇ || ೫ ||
ಸೃಷ್ಟಿ ಇಲ್ಲದಲೆ ಒತ್ತಟ್ಟಿಗಿದ್ದವರನ್ನು ಸೃಷ್ಟಿಸಿದ
ಜೀವರ ಸಲಹುವಿ | ಶ್ರೀನಿವಾಸದಯಾನಿಧೇ || ೬ ||
ತನುಮನಕರಣಗಳನು ಕೊಟ್ಟು ಅನಿಮಿಷರನು
ಅಭಿಮಾನಿಗಳೆನಿಸಿದೆ | ಶ್ರೀನಿವಾಸದಯಾನಿಧೇ || ೭ ||
ದೀನವತ್ಸಲ ನಿನ್ನಾಧೀನದೊಳಗಿಟ್ಟು –
ಜ್ಞಾನಕರ್ಮಗಳ ಮಾಡಿಸುವಿಯೋ ಶ್ರೀನಿವಾಸದಯಾನಿಧೇ || ೮ ||
ಕ್ಷಣಬಿಡದಲೆ ಭಕುತಜನರ ರಕ್ಷಿಸುವಿ ದುರ್ಜನರಿಗೆ
ದುರ್ಲಭನೆನಿಸುವಿ | ಶ್ರೀನಿವಾಸದಯಾನಿಧೇ || ೯ ||
ವೈಷಮ್ಯ ನೈರ್ಘೃಣ್ಯ ಲೇಶವಿಲ್ಲದವರು ಉಪಾಸನದಂತೆ
ಫಲಗಳೀವಿ | ಶ್ರೀನಿವಾಸದಯಾನಿಧೇ || ೧೦ ||
ಒಂದೇ ರೂಪದಿ ಬಹು ಮಂದಿಗಳೊಳಗಿದ್ದು
ಬಂಧ ಮೋಕ್ಷಪ್ರದನೆನಿಸುವಿ | ಶ್ರೀನಿವಾಸದಯಾನಿಧೇ || ೧೧ ||
ಜ್ಞಾನಿಗಳರಸ, ಅಜ್ಞಾನಿಗಳೊಳು ನಾ ಅಜ್ಞಾನಿ ,
ಸುಜ್ಞಾನವ ಪಾಲಿಸೋ | ಶ್ರೀನಿವಾಸದಯಾನಿಧೇ || ೧೨ ||
ನಂಬಿದೆ ನಾ ನಿನ್ನ ಬಿಂಬಮೂರುತಿ ಎನ್ನ
ಡಿಂಭದೊಳಗೆ ಪೊಳೆ ಅನುದಿನ | ಶ್ರೀನಿವಾಸದಯಾನಿಧೇ || ೧೩ ||
ಘನ್ನಮಹಿಮ ಎನಗಿನ್ನೊಂದು ಬಯಕಿಲ್ಲ
ನಿನ್ನ ಧ್ಯಾನದೊಳಿಡು ಮರೆಯದೆ | ಶ್ರೀನಿವಾಸದಯಾನಿಧೇ || ೧೪ ||
ನಿನ್ನ ಹೊರತು ಎನಗನ್ಯರಿಂದೇನಯ್ಯ
ನಿನ್ನ ಸ್ತುತಿಪ ಸುಖಕ್ಕೆಣೆಗಾಣೆ | ಶ್ರೀನಿವಾಸದಯಾನಿಧೇ || ೧೫ ||
ದುರ್ಜನರಸಂಗ ವಿವರ್ಜನ ಮಾಡಿಸಿ ಸಾಧು ಸಜ್ಜನರ
ಸೇವೆಯೊಳಗಿಡೋ | ಶ್ರೀನಿವಾಸದಯಾನಿಧೇ || ೧೬ ||
ಏಸು ಜನ್ಮಗಳೀಯೆ ಲೇಸುಚಿಂತೆಯು ಇಲ್ಲ
ದಾಸನೆಂದೆನಿಸು ದಾಸ್ಯವನಿತ್ತು | ಶ್ರೀನಿವಾಸದಯಾನಿಧೇ || ೧೭ ||
ಎನ್ನಪ್ಪ ಎನ್ನಣ್ಣ ಎನ್ನ ಕಾಯುವ ದೇವ
ನಿನ್ನ ವಿಸ್ಮರಣೆಯ ಕೊಡದಿರೋ | ಶ್ರೀನಿವಾಸದಯಾನಿಧೇ || ೧೮ ||
ಮನಸಿನ ಚಂಚಲವನು ತೊಲಗಿಸಿ ಪಾದ –
ವನಜದಲ್ಲಿರಿಸಯ್ಯಾ ಜಿತವಾಗಿ | ಶ್ರೀನಿವಾಸದಯಾನಿಧೇ || ೧೯ ||
ಕರಣಗಳಿಂದ ಆಚರಿಸುವ ವಿಷಯ ಶ್ರೀಹರಿ
ನಿನ್ನ ಸೇವೆಯಾಗಲಿ ಸ್ವಾಮಿ | ಶ್ರೀನಿವಾಸದಯಾನಿಧೇ || ೨೦ ||
ಹರಿಯೇ ಸರ್ವೋತ್ತಮ ಸುರರೆಲ್ಲ ದಾಸರು
ತರತಮ ಭೇದಜ್ಞಾನವನೀಯೋ | ಶ್ರೀನಿವಾಸದಯಾನಿಧೇ || ೨೧ ||
ಬುದ್ಧಿಪೂರ್ವಕ ಗುರುಮಧ್ವ ಮತವ ತಿಳಿದಿದ್ದವನೆ
ಜ್ಞಾನವೃದ್ಧನೋ ಶ್ರೀನಿವಾಸದಯಾನಿಧೇ || ೨೨ ||
ಗುರುಗಳ ಕರುಣ ಸುಸ್ಥಿರವಾಗಿದ್ದವರಿಗೆ
ಹರಿ ನಿನ್ನನುಗ್ರಹ ಆಗುವುದೋ | ಶ್ರೀನಿವಾಸದಯಾನಿಧೇ || ೨೩ ||
ನಿನ್ನ ಚಿತ್ತಕ್ಕೆ ಬಂದದ್ದೆನ್ನ ಚಿತ್ತಕೆ ಬರಲಿ ಅನ್ಯಥಾ
ಬಯಕೆಯ ಕೊಡದಿರೋ | ಶ್ರೀನಿವಾಸದಯಾನಿಧೇ || ೨೪ ||
ನಿನ್ನವರಲ್ಲದೇ ಅನ್ಯರು ಬಲ್ಲರೆ ಘನ್ನಮಾತಿನ
ಸುಖಸವಿಯನ್ನು | ಶ್ರೀನಿವಾಸದಯಾನಿಧೇ || ೨೫ ||
ಸ್ತುತಿರತ್ನಮಾಲಾ ಸಂಸ್ತುತಿಸಿ ಹಿಗ್ಗುವರಿಗೆ ಪ್ರತಿದಿನ
ಸುಖ ಅಭಿವೃದ್ಧಿಯೋ | ಶ್ರೀನಿವಾಸದಯಾನಿಧೇ || ೨೬ ||
ಗುರುಗಳು ಮಧ್ವರಾಯರು ಮೂರುಲೋಕಕ್ಕೆ
ದೊರೆ ಗುರುಶ್ರೀಶವಿಠ್ಠಲ ನಮೋ | ಶ್ರೀನಿವಾಸದಯಾನಿಧೇ || ೨೭ ||
BAnukOTitEja lAvaNyamUruti
SrIvEMkaTESane namO namO, SrInivAsadayAnidhE || pa ||
SEShAcalavAsa dOShadUrane BaktapOShaka
SrIkAMta namO namO , SrInivAsadayAnidhE || 1 ||
KagarAjanavAhana jagadoDeyane ninna
agaNita mahimege namO namO , SrInivAsadayAnidhE || 2 ||
nIlamEGaSyAma pAlasAgaraSayana
SrIlakumISane namO namO, SrInivAsadayAnidhE || 3 ||
SaMKacakradhara vEMkaTaramaNa akaLaMka
mUrutidEva namO namO, SrInivAsadayAnidhE || 4 ||
pannaMgaSayanane ninnaMtha dEvaru innuMTe
ajaBavasuravaMdyA | SrInivAsadayAnidhE || 5 ||
sRuShTi illadale ottaTTigiddavarannu sRuShTisida
jIvara salahuvi | SrInivAsadayAnidhE || 6 ||
tanumanakaraNagaLanu koTTu animiSharanu
aBimAnigaLeniside | SrInivAsadayAnidhE || 7 ||
dInavatsala ninnAdhInadoLagiTTu –
j~jAnakarmagaLa mADisuviyO SrInivAsadayAnidhE || 8 ||
kShaNabiDadale Bakutajanara rakShisuvi durjanarige
durlaBanenisuvi | SrInivAsadayAnidhE || 9 ||
vaiShamya nairGRuNya lESavilladavaru upAsanadaMte
PalagaLIvi | SrInivAsadayAnidhE || 10 ||
oMdE rUpadi bahu maMdigaLoLagiddu
baMdha mOkShapradanenisuvi | SrInivAsadayAnidhE || 11 ||
j~jAnigaLarasa, aj~jAnigaLoLu nA aj~jAni ,
suj~jAnava pAlisO | SrInivAsadayAnidhE || 12 ||
naMbide nA ninna biMbamUruti enna
DiMBadoLage poLe anudina | SrInivAsadayAnidhE || 13 ||
Gannamahima enaginnoMdu bayakilla
ninna dhyAnadoLiDu mareyade | SrInivAsadayAnidhE || 14 ||
ninna horatu enaganyariMdEnayya
ninna stutipa suKakkeNegANe | SrInivAsadayAnidhE || 15 ||
durjanarasaMga vivarjana mADisi sAdhu sajjanara
sEveyoLagiDO | SrInivAsadayAnidhE || 16 ||
Esu janmagaLIye lEsuciMteyu illa
dAsaneMdenisu dAsyavanittu | SrInivAsadayAnidhE || 17 ||
ennappa ennaNNa enna kAyuva dEva
ninna vismaraNeya koDadirO | SrInivAsadayAnidhE || 18 ||
manasina caMcalavanu tolagisi pAda –
vanajadallirisayyA jitavAgi | SrInivAsadayAnidhE || 19 ||
karaNagaLiMda Acarisuva viShaya SrIhari
ninna sEveyAgali svAmi | SrInivAsadayAnidhE || 20 ||
hariyE sarvOttama surarella dAsaru
taratama BEdaj~jAnavanIyO | SrInivAsadayAnidhE || 21 ||
buddhipUrvaka gurumadhva matava tiLididdavane
j~jAnavRuddhanO SrInivAsadayAnidhE || 22 ||
gurugaLa karuNa susthiravAgiddavarige
hari ninnanugraha AguvudO | SrInivAsadayAnidhE || 23 ||
ninna cittakke baMdaddenna cittake barali anyathA
bayakeya koDadirO | SrInivAsadayAnidhE || 24 ||
ninnavaralladE anyaru ballare Gannamaatina
suKasaviyannu | SrInivAsadayAnidhE || 25 ||
stutiratnamAlA saMstutisi higguvarige pratidina
suKa aBivRuddhiyO | SrInivAsadayAnidhE || 26 ||
gurugaLu madhvarAyaru mUrulOkakke
dore guruSrISaviThThala namO | SrInivAsadayAnidhE || 27 ||
Leave a Reply