Composer : Shri Vijayadasaru
ಭಕ್ತಜನ ಪಾಲಕಾ, ಭಕ್ತಿ ಸುಖ ದಾಯಕಾ,
ಮುಕ್ತೇಶ ದೀನಬಂಧೋ, ಕೃಷ್ಣಾ |
ಯುಕ್ತಿಯಲಿ ನಿನ್ನಂಥ ದೇವರನು ನಾ ಕಾಣೇ,
ಸತ್ಯವತೀ ಸುತನೇ ಕಾಯೋ, ಕೃಷ್ಣಾ ||
ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ,
ಭ್ರಷ್ಟನಾಗಿ ಪೋದೇನೋ, ಕೃಷ್ಣಾ |
ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ,
ಇಷ್ಟಗಳ ಎಮಗೆ ಕೊಡಿಸೋ, ಕೃಷ್ಣಾ [೧]
ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ,
ಆನಂದದಲಿ ನಿಲ್ಲಿಸೋ, ಕೃಷ್ಣಾ|
ದೀನಜನ ಮಂದಾರ ನೀನೆಂದು ನಂಬಿದೆನೋ,
ಸಾನುರಾಗದಲಿ ಕಾಯೋ, ಕೃಷ್ಣಾ [೨]
ಅಜ ಜನಕ ಗಜ ವರದಾ, ಭುಜಗಶಯನನೇ ನಿನ್ನ,
ಭಜಿಪ ಭಾಗ್ಯವನೆ ಕೊಡಿಸೋ, ಕೃಷ್ಣಾ |
ನಿಜವಾಗಿ ನಿನ್-ಹೊರೆತು ಸಲಹುವರ ನಾ ಕಾಣೆ,
ವಿಜಯವಿಠ್ಠಲರೇಯನೇ, ಕೃಷ್ಣಾ [೩]
bhaktajana pAlakA, bhakti sukha dAyakA,
muktEsha dInabaMdhO, kRuShNA |
yuktiyali ninnaMtha dEvaranu nA kANE,
satyavatI sutanE kAyO, kRuShNA ||
keTTa janara saMga iShTu dinavU mADi,
bhraShTanAgi pOdEnO, kRuShNA |
beTTadoDeyane ninna muTTi bhajisuva bhAgya,
iShTagaLa emage koDisO, kRuShNA [1]
AnaMdatIrtha muniya dhyAnipara saMga,
AnaMdadali nillisO, kRuShNA|
dInajana maMdAra nIneMdu naMbidenO,
sAnurAgadali kAyO, kRuShNA [2]
aja janaka gaja varadA, bhujagashayananE ninna,
bhajipa bhAgyavane koDisO, kRuShNA |
nijavAgi nin-horetu salahuvara nA kANe,
vijayaviThThalarEyanE, kRuShNA [3]

Leave a Reply
You must be logged in to post a comment.