Bandu nintiha nodi

Composer : Shri Purandara dasaru

By Smt.Shubhalakshmi Rao

ಬಂದು ನಿಂತಿಹ ನೋಡಿ ಭೂತಳದಿ ವೆಂಕಟ
ಇಂದಿರೆಯನೊಡಗೂಡಿ ಒಪ್ಪುವ ನಿರಂತರ
ಪೊಂದಿ ಭಜನೆಯ ಮಾಡಿ ಆನಂದಬೇಡಿ || ಪ ||
ವಂದಿಸುತ ಮನದೊಳಗೆ ಇವನಡಿ –
ದ್ವಂದ್ವ ಭಜಿಸಲು ಬಂದ ಭಯಹರ
ಇಂದುಧರ ಸುರವೃಂದನುತ ಗೋ –
ವಿಂದ ಘನದಯಸಿಂಧು ಶ್ರೀಹರಿ || ಅ.ಪ ||

ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು
ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ –
ಗಾರನಿಧಿ ಅಂಗದಲ್ಲಿ ಮುತ್ತಿನಲಿ ಶೋಭಿಪ
ಹಾರ ಹೊಂದಿಹುದಲ್ಲಿ ವಿಸ್ತಾರದಲ್ಲಿ ||
ವಾರವಾರಕೆ ಪೂಜೆಗೊಂಬುವ
ಹಾರ ಮುಕುಟಾಭರಣ ಕುಂಡಲ –
ಧಾರಿ ಭುಜಕೇಯೂರ ಭೂಷಿತ
ಮಾರಪಿತ ಗುಣಮೋಹನಾಂಗ ||
ಚಾರುಪೀತಾಂಬರಕಟಿಯ ಕರ –
ವೀರ ಕಲ್ಹಾರಾದಿ ಹೂವಿನ
ಹಾರ ಕೊರಳೊಳು ಎಸೆಯುತಿರೆ ವದ –
ನಾರವಿಂದನು ನಗುತ ನಲಿಯುತ || ೧ ||

ಎಲ್ಲ ಭಕುತರಭೀಷ್ಟ ಕೊಡುವುದಕೆ ತಾ ಕೈ –
ವಲ್ಯ ಸ್ಥಾನವ ಬಿಟ್ಟ ಶೇಷಾದ್ರಿ ಮಂದಿರ –
ದಲ್ಲಿ ಲೋಲುಪದಿಟ್ಟ ಸೌಭಾಗ್ಯನಿಧಿಗೆದು –
ರಿಲ್ಲ ಭುಜಬಲಪುಷ್ಟ ಕಸ್ತೂರಿಯಿಟ್ಟ ||
ಚೆಲ್ವ ಫಣೆಯಲಿ ಶೋಭಿಸುವ ಸಿರಿ –
ವಲ್ಲಭನ ಗುಣ ಪೊಗಳದಿಹ ಜಗ –
ಖುಲ್ಲರೆದೆದಲ್ಲಣ ಪರಾಕ್ರಮ
ಮಲ್ಲಮರ್ದನ ಮಾತುಳಾಂತಕ ||
ಫಲ್ಗುಣನ ಸಖ ಪ್ರಕಟನಾಗಿಹ
ದುರ್ಲಭನು ಅಘದೂರ ಬಹುಮಾಂ –
ಗಲ್ಯ ಹೃದಯನು ಸೃಷ್ಟಿಗೆ
ಉಲ್ಲಾಸಕೊಡುತಲಿ ಚಂದದಿಂದಲಿ || ೨ ||

ಪದಕ ಕೌಸ್ತುಭಹಾರ ಸರಿಗೆಯ ಕಂಧರ
ಸುದರ್ಶನದರಧಾರ ಸುಂದರ ಮನೋಹರ
ಪದಯುಗದಿ ನೂಪುರ ಇಟ್ಟಿಹನು ಸನ್ಮುನಿ –
ಹೃದಯಸ್ಥಿತ ಗಂಭೀರ ಬಲುದಾನಶೂರ ||
ವಿಧಿಭವಾದ್ಯರ ಪೊರೆವ ದಾತನು
ತುದಿಮೊದಲು ಮಧ್ಯಾಂತರಹಿತನು
ಉದುಭವಾದಿಗಳೀವ ಕರ್ತನು
ತ್ರಿದಶಪೂಜಿತ ತ್ರಿಭುವನೇಶ||
ಸದುವಿಲಾಸದಿ ಸ್ವಾಮಿತೀರ್ಥದಿ
ಉದಿಸುತಿರೆ ಸಿರಿಮಹಿಳೆ ಸಹಿತದಿ
ಪದುಮನಾಭ ಪುರಂದರವಿಠಲನು
ಮುದದಿ ಬ್ರಹ್ಮೋತ್ಸವದಿ ಮೆರೆಯುತ || ೩ ||


baMdu niMtiha nODi BUtaLadi veMkaTa
iMdireyanoDagUDi oppuva niraMtara
poMdi Bajaneya mADi AnaMdabEDi || pa ||
vaMdisuta manadoLage ivanaDi –
dvaMdva Bajisalu baMda Bayahara
iMdudhara suravRuMdanuta gO –
viMda GanadayasiMdhu SrIhari || a.pa ||

dvAradeDabaladalli jayavijayaribbaru
sEri sEviparalli sanakAdinuta SRuM –
gAranidhi aMgadalli muttinali SOBipa
hAra hoMdihudalli vistAradalli ||
vAravArake pUjegoMbuva
hAra mukuTABaraNa kuMDala –
dhAri BujakEyUra BUShita
mArapita guNamOhanAMga ||
cArupItAMbarakaTiya kara –
vIra kalhArAdi hUvina
hAra koraLoLu eseyutire vada –
nAraviMdanu naguta naliyuta || 1 ||

ella BakutaraBIShTa koDuvudake tA kai –
valya sthAnava biTTa SEShAdri maMdira –
dalli lOlupadiTTa sauBAgyanidhigedu –
rilla BujabalapuShTa kastUriyiTTa ||
celva PaNeyali SOBisuva siri –
vallaBana guNa pogaLadiha jaga –
KullarededallaNa parAkrama
mallamardana mAtuLAMtaka ||
PalguNana saKa prakaTanAgiha
durlaBanu aGadUra bahumAM –
galya hRudayanu sRuShTige
ullAsakoDutali caMdadiMdali || 2 ||

padaka kaustuBahAra sarigeya kaMdhara
sudarSanadaradhAra suMdara manOhara
padayugadi nUpura iTTihanu sanmuni –
hRudayasthita gaMBIra baludAnaSUra ||
vidhiBavAdyara poreva dAtanu
tudimodalu madhyAMtarahitanu
uduBavAdigaLIva kartanu
tridaSapUjita triBuvanESa||
saduvilAsadi svAmitIrthadi
udisutire sirimahiLe sahitadi
padumanABa puraMdaraviThalanu
mudadi brahmOtsavadi mereyuta || 3 ||

Leave a Reply

Your email address will not be published. Required fields are marked *

You might also like

error: Content is protected !!