Appa Venkobana – Dirgha kriti

Composer : Shri Harapanahalli Bheemavva

By Smt.Shubhalakshmi Rao

ಅಪ್ಪ ವೆಂಕೋಬನ ನೇತ್ರದಲಿ ನೋಡಿ |
ಪವಿತ್ರಳಾದೆನೋ ಇಂದಿಗೆ |
ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ |
ಒಪ್ಪಿಕೊಬೇಕೋ ತಿಮ್ಮಪ್ಪ ಕರುಣಾನಿಧಿಯೇ || ಪ ||

ಹೆದರದೆ ಭೃಗು ಋಷಿಯು |
ಒದೆಯೆ ಪಾದಗಳಿಂದ | ಯೆದೆಯ ಮೇಲಿರುವ ಲಕ್ಷ್ಮೀ
ಕದನ ಮಾಡುತಲೆ ಕೊಲ್ಹಾಪುರಕ್ಕೆ ನಡೆತರಲು ||
ಒದಗಿ ವೈಕುಂಠ ಬಿಟ್ಟು |
ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರೆ |
ಇದು ನಿನಗೆ ಸದನಾಯಿತೋ ದೇವಾ || ೧ ||

ಹುತ್ತಿನೊಳಡಗಿ ನೀ ಗುಪ್ತದಿಂದಿರುತಿರಲು |
ಉತ್ತಮ ಗೋವು ಬಂದು |
ನಿತ್ಯದಲ್ಲಿ ಕ್ಷೀರವನು ಕರೆಯೆ ಗೋವಳನಿಂದ ||
ನೆತ್ತಿಯ ನೊಡೆದುಕೊಂಡು |
ಸಿಟ್ಟಿನಿಂದಲಿ ಚೋಲರಾಯಗೆ ಶಾಪವನು |
ಕೊಟ್ಟು ಕಿರೀಟವನು ಇಟ್ಟು ಮೆರೆಯುವ ದೇವಾ || ೨ ||

ಮಾಯಾ ರಮಣನೆ ನಿನ್ನ |
ಗಾಯದೌಷಧಕ್-ಹೋಗಿ |
ಭೂರಮಣನ್ ವರಾಹನಿಂದ |
ನೂರು ಪಾದ ಭೂಮಿ ಕೊಟ್ಟರೆ ||
ಸಾಕೆಂದುಪಾಯದಿಂದದಂ-ವ್ಯಾಪಿಸಿ |
ತಾಯಿ ಬಕುಳಾದೇವಿಯಿಂದ | ಪೂ |
ಜೆಯಗೊಂಬೋ ಶ್ರೀಯರಸು ನಿನಗೆ ಸರಿಯೇ ದೇವಾ || ೩ ||

ನಾಟಕಧಾರಿ ಕಿರಾತ ರೂಪವ ಧರಿಸಿ |
ಬೇಟೆಗೆನುತಲಿ ಪೋಗಲು |
ತೋಟದಲಿ ಚೆಲ್ವೆ ಪದ್ಮಾವತಿಯ ಕಡೆಗಣ್ಣ |
ನೋಟದಲಿ ಮನಸೋಲಿಸಿ ||
ಬೂಟಕತನದಿ ಜಗಳಾಟವನ್ನೇ ಮಾಡಿ |
ಪಾಟುಬಟ್ಟು | ಕಲ್ಲ |
ಲೇಟು ತಿಂದೆಯೋ ದೇವಾ || ೪ ||

ಗದಗದನೆ ನಡುಗುತಲಿ |
ಕುದುರೆಯನು ಕಳಕೊಂಡು |
ಪದ್ಮಾವತೀ ವಾರ್ತೆಯನ್ನು | ಬಳಿಯ |
ಲಿದ್ದ ಬಕುಳ ಮಾಲಿಕೆಗೆ ಬೋಧೀಸಿ | ಕಳಿ ||
ಸಿದಾಕಾಶನಲ್ಲಿ , ಚದುರ |
ಮಾತಿನ ಚಪಲ ಕೊರವಂಜಿ |
ನೀನಾಗಿ ಕಣಿಯ ಹೇಳಲು |
ಎಲ್ಲಿ ಕಲಿತಿಯೋ ಮಹದೇವಾ || ೫ ||

ಬಂಧು ಬಳಗವ ಕೂಡಿ |
ಭಾರಿ ಸಾಲವ ಮಾಡಿ |
ಕೊಂಡು ಕರವೀರದಿಂದೆ |
ಅಂಡಲೆದು ಕರೆಸಿ ಕಾಣುತಲಿ ||
ಲಕ್ಷ್ಮೀಯನಪ್ಪಿಕೊಂಡು ಪರಮ ಹರುಷದಿಂದ |
ಮಂದ ಗಮನೆಯೆ ನಿನ್ನ ಮಾತು ಲಾಲಿಸಿ |
ಮಾಡಿಕೊಂಡೆ ಪದ್ಮಾವತಿಯ ಅಂದೆಯೋ ಯೆಲೆ ದೇವಾ || ೬ ||

ಆಕಾಶರಾಜ ಅನೇಕ ಹರುಷದಿ ಮಾಡೆ |
ತಾ ಕನ್ಯಾದಾನವನ್ನು |
ಹಾಕಿದ ರತ್ನ ಮಾಣಿಕ್ಯದ ಕಿರೀಟವನು |
ಬೇಕಾದಾಭರಣ ಭಾಗ್ಯ ||
ಸಾಕಾಕಾಗದೇನೋ ಬಡವರ ಕಾಡಿ ಬೇಡುವುದು |
ಶ್ರೀಕಾಂತ ನಿನಗೆ ಸರಿಯೇ ದೇವಾ || ೭ ||

ಹೇಮ ಗೋಪುರದಿ ವಿಮಾನ ಶ್ರೀನಿವಾಸ |
ದೇವರನು ನೋಡಿ ನಮಿಸಿ |
ಕಾಮಿಸಿ ಕೊಂಡೆ ಹೊನ್ನ್ಹೊಸ್ತಿಲು ಗರುಡ |
ಗಂಬದ ಸುತ್ತ ಪ್ರಾಕಾರವೋ ||
ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ |
ಪಾನವ ಮಾಡಿ ನೋಡಿದೆನೋ |
ನಿನ್ನ ಭಕುತರ ದೇವಾ || ೮ ||

ಪನ್ನಗಾದ್ರಿ ವೆಂಕಟನ್ನ ರಥ ಶೃಂಗಾರ |
ವರ್ಣಿಸಲಳವೇ ನಮಗೆ |
ಕಣ್ಣಾರೆ ಕಂಡೆ ಗರುಡೋತ್ಸವದಲಂಕಾರ |
ಇನ್ನೆಲ್ಲೂ ಕಾಣೆ ಜಗದಿ ||
ಅನ್ನಪೂರ್ಣೆಯ ನೋಡೆ |
ಅಧಿಕ ಘಂಟೆಯ ನಾದ |
ಎನ್ನ ಕಿವಿಗಾನಂದವೋ ದೇವಾ || ೯ ||

ಪಾದದಲೊಪ್ಪೋ ಪಾಗಡಾರುಳಿ ಕಿರುಗೆಜ್ಜೆ |
ಮೇಲಲೆವೋ ಪೀತಾಂಬರ |
ನೀಲ ಮಾಣಿಕದ ಉಡಿದಾರವೋ |
ವೈಜಯಂತೀ ಮಾಲೆ ಶ್ರೀವತ್ಸದ್ ಹಾರ ||
ಮೇಲಾದ ಸರಿಗೆ ಸರ |
ಪದಕವೋ ಕಮಲ |
ದಳಾಯತಾಕ್ಷನ ನೋಡಿದೆ ದೇವಾ || ೧೦ ||

ಕರಗಳಲ್ಲಿಟ್ಟು ಕಂಕಣ ಕಡಗ ಭುಜ ಕೀರ್ತಿ |
ವರ ಶಂಖ ಚಕ್ರಧಾರಿ |
ಗಿರಿಯ ಭೂ ವೈಕುಂಠವೆಂದು ತೋರುತ ನಿಂತ ||
ಶಿರದಿ ಕಿರೀಟ ಧರಿಸಿ |
ಬಿಳಿಯ ತ್ರಿನಾಮ ಭೀಮೇಶಕೃಷ್ಣನ ಮುಖದಿ |
ಹೊಳೆವ ಮೂರ್ತಿಯ ನೋಡಿ ಹೇ ದೇವಾ || ೧೧ ||


SrInivAsa kalyANa

appa veMkObana nEtradali nODi |
pavitraLAdenO iMdige |
tappugaLella ninagarpisuve nAnIga |
oppikobEkO timmappa karuNAnidhiyE || pa ||

hedarade BRugu RuShiyu |
odeye pAdagaLiMda | yedeya mEliruva lakShmI
kadana mADutale kolhApurakke naDetaralu ||
odagi vaikuMTha biTTu |
yadunAtha yArilladaMte guDDava sEre |
idu ninage sadanAyitO dEvA || 1 ||

huttinoLaDagi nI guptadiMdirutiralu |
uttama gOvu baMdu |
nityadalli kShIravanu kareye gOvaLaniMda ||
nettiya noDedukoMDu |
siTTiniMdali cOlarAyage SApavanu |
koTTu kirITavanu iTTu mereyuva dEvA || 2 ||

mAyA ramaNane ninna |
gAyadauShadhak-hOgi |
BUramaNan varAhaniMda |
nUru pAda BUmi koTTare ||
sAkeMdupAyadiMdadaM-vyApisi |
tAyi bakuLAdEviyiMda | pU |
jeyagoMbO SrIyarasu ninage sariyE dEvA || 3 ||

nATakadhAri kirAta rUpava dharisi |
bETegenutali pOgalu |
tOTadali celve padmAvatiya kaDegaNNa |
nOTadali manasOlisi ||
bUTakatanadi jagaLATavannE mADi |
pATubaTTu | kalla |
lETu tiMdeyO dEvA || 4 ||

gadagadane naDugutali |
kudureyanu kaLakoMDu |
padmAvatI vArteyannu | baLiya |
lidda bakuLa mAlikege bOdhIsi | kaLi ||
sidAkASanalli , cadura |
mAtina capala koravaMji |
nInAgi kaNiya hELalu |
elli kalitiyO mahadEvA || 5 ||

baMdhu baLagava kUDi |
BAri sAlava mADi |
koMDu karavIradiMde |
aMDaledu karesi kANutali ||
lakShmIyanappikoMDu parama haruShadiMda |
maMda gamaneye ninna mAtu lAlisi |
mADikoMDe padmAvatiya aMdeyO yele dEvA || 6 ||

AkASarAja anEka haruShadi mADe |
tA kanyAdAnavannu |
hAkida ratna mANikyada kirITavanu |
bEkAdABaraNa BAgya ||
sAkAkAgadEnO baDavara kADi bEDuvudu |
SrIkAMta ninage sariyE dEvA || 7 ||

hEma gOpuradi vimAna SrInivAsa |
dEvaranu nODi namisi |
kAmisi koMDe honnhostilu garuDa |
gaMbada sutta prAkAravO ||
svAmi puShkaraNiyalli snAna |
pAnava mADi nODidenO |
ninna Bakutara dEvA || 8 ||

pannagAdri veMkaTanna ratha SRuMgAra |
varNisalaLavE namage |
kaNNAre kaMDe garuDOtsavadalaMkAra |
innellU kANe jagadi ||
annapUrNeya nODe |
adhika GaMTeya nAda |
enna kivigAnaMdavO dEvA || 9 ||

pAdadaloppO pAgaDAruLi kirugejje |
mElalevO pItAMbara |
nIla mANikada uDidAravO |
vaijayaMtI mAle SrIvatsad hAra ||
mElAda sarige sara |
padakavO kamala |
daLAyatAkShana nODide dEvA || 10 ||

karagaLalliTTu kaMkaNa kaDaga Buja kIrti |
vara SaMKa cakradhAri |
giriya BU vaikuMThaveMdu tOruta niMta ||
Siradi kirITa dharisi |
biLiya trinAma BImESakRuShNana muKadi |
hoLeva mUrtiya nODi hE dEvA || 11 ||

Leave a Reply

Your email address will not be published. Required fields are marked *

You might also like

error: Content is protected !!