Composer : Shri Gurujagannatha dasaru
ಯಾತರ ಭಯ ಯತಿನಾಥನ ಪದಯುಗ
ಪ್ರೀತಿಲಿ ಭಜಿಪನಿಗೆ ||ಪ||
ಪೋತರು ಸತಿ ಮಹಭೂತಿಯ ನೃಪತನ
ನಾಥನಿಗರ್ಪಿಸಿ ದೂತ ನಾನೆಂಬುವಗೆ ||ಅ.ಪ||
ವಂದಿಸಿ ಧನವನು ತಂದು ಜನರು ತನ್ನ
ಮುಂದೆ ಸುರಿಯಲೇನೂ
ವಂದನೆ ಮಾಡದೆ ನಿಂದಿಸಲೇನದ
ರಿಂದ ಪೋದದೇನೂ
ಬಂದ ಬಂದ ಜನರಾನಂದದಿಂ ತನ್ನನು
ಪೊಂದಿ ನಡೆಯಲೇನೂ
ಸುಂದರ ಗುರುಪದ ಮಂದಜಯುಗ ಮನೊ
ಮಂದಿರದಲಿ ತಾ ತಂದು ಭಜಿಪನಿಗೆ [೧]
ಉದಯದಲಮರ ನದಿಯಲಿ ಸ್ನಾನಕೆ
ಒದಗದೆ ಮಲಗಿರಲೇನೂ
ಮದನ ಕೇರಿಯೊಳು ಸುದತಿಯ ಸಹಿತದಿ
ಮುದದಲಿ ಕುಳಿತಿರಲೇನೂ
ಕದನದ ವಾರ್ತೆಯ ವದನದಲ್ಯಾಡುತ
ಮದಕವ ಮಾಡಿದರೇನೂ
ಸದಮಲ ಗುರುಪದ ಪದುಮವ ತನ್ನಯ
ಹೃದಯದೊಳಗೆ ಬಲು ಮುದದಿ ಭಜಿಪನಿಗೆ [೨]
ಅನ್ಯರ ಮನೆಯಲಿ ಮನ್ನಣೆ ದಿನ ದಿನ
ಘನ್ನವಾಗಿ ಮಾಡಿದರೇನೂ
ಭಿನ್ನಮನದಿ ಪರರನ್ಯಥ ಕಾರ್ಯವ
ಬೆನ್ನು ಬಿಡದೆ ಮಾಡಿದರೇನು
ತನ್ನಯ ಸತಿಸುತ ಮನ್ನಿಸದನುದಿನ
ಘನ್ನತೆ ಕಳೆದಿರಲೇನು
ಘನ್ನ ಗುರುಜಗನ್ನಾಥವಿಠ್ಠಲನ
ಮನದಿ ಭಜಿಸಿ ಪಾವನ್ನ ನಾನೆನಿಸುವಗೆ [೩]
yAtara Baya yatinAthana padayuga
prItili Bajipanige ||pa||
pOtaru sati mahaBUtiya nRupatana
nAthanigarpisi dUta nAneMbuvage ||a.pa||
vaMdisi dhanavanu taMdu janaru tanna
muMde suriyalEnU
vaMdane mADade niMdisalEnada
riMda pOdadEnU
baMda baMda janarAnaMdadiM tannanu
poMdi naDeyalEnU
suMdara gurupada maMdajayuga mano
maMdiradali tA taMdu Bajipanige [1]
udayadalamara nadiyali snAnake
odagade malagiralEnU
madana kEriyoLu sudatiya sahitadi
mudadali kuLitiralEnU
kadanada vArteya vadanadalyADuta
madakava mADidarEnU
sadamala gurupada padumava tannaya
hRudayadoLage balu mudadi Bajipanige [2]
anyara maneyali mannaNe dina dina
GannavAgi mADidarEnU
Binnamanadi pararanyatha kAryava
bennu biDade mADidarEnu
tannaya satisuta mannisadanudina
ghannate kaLediralEnu
Ganna gurujagannAthaviThThalana
manadi bhajisi pAvanna nAnenisuvage [3]
Leave a Reply