Suvvi Suvvali Raghavendrara

Composer : Shri Pranesha dasaru

By Smt.Shubhalakshmi Rao

ಸುವ್ವಿ ಸುವ್ವಾಲಿ | ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ [ಪ]

ಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |
ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||
ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |
ಚಂದಿರ ವದನೆ ಈತನಮ್ಮ ಗುರುವು | ಸುವ್ವಿ |೧|

ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |
ಕಿವಿಗೊಟ್ಟು ಕೇಳುವದು ಬುಧ ಜನರು | ಸುವ್ವಿ ||
ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |
ಅವನಿಯ ಸುರರಿಂದರ್ಚನೆಗೊಂಗುವರು | ಸುವ್ವಿ |೨|

ಅಷ್ಟಾಕ್ಷರ ಮಂತ್ರವನು ತಪ್ಪದಲೆ ನಿತ್ಯವಾಗಿ |
ನಿಷ್ಠೆಯಿಂದ ಭಜಿಸಲು ಭೂತ ಭಯವು | ಸುವ್ವಿ ||
ಕುಷ್ಠರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ |
ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುದು | ಸುವ್ವಿ |೩|

ಮೃತ್ತಿಕೆ ಮಾಲೆ ಅಂಗಾರ ದಿವ್ಯ ಮಂತ್ರಾಕ್ಷತೆಯು |
ಹತ್ತಿರವಿರಲು ಕ್ಲೇಶವ ಲೇಶ ಕಾಣರು | ಸುವ್ವಿ ||
ಎತ್ತ ಹೋದರು ಜನರಿಗೆ ಜಯಪ್ರದ ತೋರುವದು |
ಕತ್ತಲಿಲ್ಲ ಶತಸಿದ್ಧ ಮತ್ತೇನು ಕೇಳಿ | ಸುವ್ವಿ |೪|

ಪಂಡಿತರು ಮೊದಲಾಗಿ ಹಸ್ತಿ ಉಷ್ಟ್ರ ಕುದುರೆಯ |
ಹಿಂಡುಗಳು ತೃಷೆಯಿಂದ ಬಳಲುತಿರೆ | ಸುವ್ವಿ ||
ದಂಡ ಜಗತಿಗೂರಿ ತೋಯ ತೆಗಿಸಿಯವನೀ |
ಮಂಡಲದೊಳಗೆ ಪೆಸರಾದರಿವರು | ಸುವ್ವಿ |೫|

ಕಟ್ಟಲಿಯ ಭತ್ತದೊಳು ಭೂಪದಳಯುಕ್ತ ಬರ |
ಲಿಟ್ಟುಕೊಂಡು ಉಣಿಸಿ ಉತ್ತಮ ವರವ | ಸುವ್ವಿ ||
ಕೊಟ್ಟು ಕಳಿಸಿದ ಮೇಲೆ ಆವು ಕೊಂಚಿಯಾಗಲಿಲ್ಲ |
ಗಟ್ಟಿ ಸಂಕಲ್ಪರಿವರು ಮುನಿವರರು | ಸುವ್ವಿ |೬|

ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ |
ಥಟ್ಟನೆ ಕೆಡಿಸಿ ಭೂಪ ಮೆಚ್ಚುವಂದದಿ | ಸುವ್ವಿ ||
ನೆಪ್ಪು ಧರೆಗಾಗಲೆಂದು ಗುರು ಸುಧೀಂದ್ರ ಕುಮಾರ |
ಸರ್ಪನ ತೋರಿಸಿ ಸುಪ್ರಖ್ಯಾತರಾದರು | ಸುವ್ವಿ |೭|

ದ್ವಿಜರ ಸ್ತೋಮವು ಬಾಯಿ ಬಿಡುತಿರೆ ದಯದಿಂದ |
ನಿಜಕಾಷ್ಟವಿಳೆಗೆ ನಿಲ್ಲಿಸಿ ಮರವ | ಸುವ್ವಿ ||
ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ |
ಭಜಿಸಿರಿವರನ್ನು ಮಕ್ಕಳು ಬೇಡುವವರು | ಸುವ್ವಿ |೮|

ಮುತ್ತಿನ ಮಾಲಿಕೆ ನೃಪ ಭಕ್ತಿಯಿಂದ ಕೊಡಲಾಗಿ |
ಸಪ್ತಜಿಹ್ವಗುಣಿಸಿದ ಸರ್ವರು ನೋಡಿ | ಸುವ್ವಿ ||
ಮತ್ತೆ ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ |
ಮತ್ರ್ಯಪಗೆ ಇತ್ತರು ಮೊದಲಂತೆಯೆ ತಂದು | ಸುವ್ವಿ |೯|

ಹಿಂದೆ ಮಾಡಿದ ದುಷ್ಕರ್ಮ ತೀರ ಬಂದದನು ನೋಡಿ |
ಬಂದಾಕ್ಷಣದಲ್ಲಿ ಅವನ ವಿಚಾರಿಸಿ | ಸುವ್ವಿ ||
ಇಂದಿರೇಶನ ಕಾರುಣ್ಯ ಬಲದಿಂದ ಜನನೋಡೆ |
ಸಂದೇಹವಿಲ್ಲದೆ ಸುಲೋಕವನಿತ್ತರು | ಸುವ್ವಿ |೧೦|

ತುಂಗಾತೀರ ಮಂತ್ರಾಲಯದಲ್ಲಿ ಶ್ರಾವಣ ಬಹುಳ |
ಮಂಗಳ ಬಿದಿಗಿಯಲ್ಲಿ ನಿವಾಸವಾದರು | ಸುವ್ವಿ ||
ಶೃಂಗಾರ ವೃಂದಾವನ ದ್ವಾದಶನಾಮ ಶ್ರೀ ಮುದ್ರೆಯು |
ಕಂಗಳು ಸಾಲವು ನೋಡ ಹೊದ್ದ ಶಾಠಿಯ | ಸುವ್ವಿ |೧೧|

ಅಂಧಕ ಬಧಿರ ಕುಂಟ ನಾನಾ ರೋಗಿಗಳು ಮತ್ತೆ |
ಕಂದ ವಜ್ರ್ಯ ಮೊದಲಾದವರಿಗೆ ಕಾಮ್ಯ | ಸುವ್ವಿ ||
ತಂದುಕೊಡುವರು ಬೇಗ ಇತರ ಸಂಶಯವಿಲ್ಲ |
ಮಂದಭಾಗ್ಯರಿಗೆ ಇವರ ಸೇವೆ ದೊರೆಯದೇ || ಸುವ್ವಿ |೧೨|

ಕೌತುಕವೇನೆನ್ನಲಿ ಮುಂಜಿ ವಿವಾಹ ಮಾಡಿಸುವರು |
ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ | ಸುವ್ವಿ ||
ಧಾತಾ ಪಿತ ನಿಲಯವಿದೇನೋಯೆಂದು ತೋರುವದು |
ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ | ಸುವ್ವಿ |೧೩|

ಪಾಡ್ಯ ಪೂರ್ವಾರಾಧನೆ ಉತ್ತರಾರಾಧನೆಗೆ |
ಒಡ್ಡಿ ಬರುವುದು ಎಂಟು ದಿಕ್ಕುಗಳಿಂದ ಜನವು | ಸುವ್ವಿ ||
ಕಡ್ಡಿ ಹಿಡಿಯದಂಥ ಸಂದಣಿಯೊಳು ಸನ್ಮುಹೂರ್ತದಿ |
ದೊಡ್ಡ ರಥವೇರಿ ಮಠವ ಸುತ್ತುವರು | ಸುವ್ವಿ |೧೪|

ಇಷ್ಟೇಯೆನ್ನಲು ವಶವಲ್ಲ ಮಹಿಮೆಗಳಿನ್ನೂ ಉಂಟು |
ನಷ್ಟ ಮಾಡುವರು ದುರ್ಮತ ದಾರಿದ್ರ್ಯವ | ಸುವ್ವಿ ||
ಸೃಷ್ಟಿಗೊಡೆಯ ಪ್ರಾಣೇಶ ವಿಠ್ಠಲನೆಂದು ಪೇಳ್ವರು |
ಎಷ್ಟು ಪೇಳಿದರೂ ಎನ್ನಿಂದಲಿ ತೀರದು | ಸುವ್ವಿ |೧೫|


suvvi suvvAli | suvvi sAdhviyaru rAGavEMdrara pADi [pa]

aMdina kAlada madhvaSAstrava manake taMdu |
aMdadi TippaNi mADida dEvarAru | suvvi ||
aMdu vAdisuva janarannu bAyi muccisida |
caMdira vadane Itanamma guruvu | suvvi |1|

ivara cariteyannu tOridaShTu tutisuve |
kivigoTTu kELuvadu budha janaru | suvvi ||
pavanAMSarivaru kavalilla KyAtarAgi |
avaniya surariMdarcanegoMguvaru | suvvi |2|

aShTAkShara maMtravanu tappadale nityavAgi |
niShTheyiMda Bajisalu BUta Bayavu | suvvi ||
kuShTharOga kShaya pAMDu jvara sanni modalAda |
aShTupadravAkShaNa biTTu ODuvudu | suvvi |3|

mRuttike mAle aMgAra divya maMtrAkShateyu |
hattiraviralu klESava lESa kANaru | suvvi ||
etta hOdaru janarige jayaprada tOruvadu |
kattalilla Satasiddha mattEnu kELi | suvvi |4|

paMDitaru modalAgi hasti uShTra kudureya |
hiMDugaLu tRuSheyiMda baLalutire | suvvi ||
daMDa jagatigUri tOya tegisiyavanI |
maMDaladoLage pesarAdarivaru | suvvi |5|

kaTTaliya BattadoLu BUpadaLayukta bara |
liTTukoMDu uNisi uttama varava | suvvi ||
koTTu kaLisida mEle Avu koMciyAgalilla |
gaTTi saMkalparivaru munivararu | suvvi |6|

viprarellaru hELisi kaTTisida sadanava |
thaTTane keDisi BUpa meccuvaMdadi | suvvi ||
neppu dharegAgaleMdu guru sudhIMdra kumAra |
sarpana tOrisi supraKyAtarAdaru | suvvi |7|

dvijara stOmavu bAyi biDutire dayadiMda |
nijakAShTaviLege nillisi marava | suvvi ||
sRujisi pallava PalayuktavAgi tOrisida |
Bajisirivarannu makkaLu bEDuvavaru | suvvi |8|

muttina mAlike nRupa BaktiyiMda koDalAgi |
saptajihvaguNisida sarvaru nODi | suvvi ||
matte bEDalu pAvakanige prArthaneya mADi |
matryapage ittaru modalaMteye taMdu | suvvi |9|

hiMde mADida duShkarma tIra baMdadanu nODi |
baMdAkShaNadalli avana vicArisi | suvvi ||
iMdirESana kAruNya baladiMda jananODe |
saMdEhavillade sulOkavanittaru | suvvi |10|

tuMgAtIra maMtrAlayadalli SrAvaNa bahuLa |
maMgaLa bidigiyalli nivAsavAdaru | suvvi ||
SRuMgAra vRuMdAvana dvAdaSanAma SrI mudreyu |
kaMgaLu sAlavu nODa hodda SAThiya | suvvi |11|

aMdhaka badhira kuMTa nAnA rOgigaLu matte |
kaMda vajrya modalAdavarige kAmya | suvvi ||
taMdukoDuvaru bEga itara saMSayavilla |
maMdaBAgyarige ivara sEve doreyadE || suvvi |12|

kautukavEnennali muMji vivAha mADisuvaru |
cAturmAsadoLage grahagaLastavAge | suvvi ||
dhAtA pita nilayavidEnOyeMdu tOruvadu |
prItiyuLLa Baktarige adhamarigalla | suvvi |13|

pADya pUrvArAdhane uttarArAdhanege |
oDDi baruvudu eMTu dikkugaLiMda janavu | suvvi ||
kaDDi hiDiyadaMtha saMdaNiyoLu sanmuhUrtadi |
doDDa rathavEri maThava suttuvaru | suvvi |14|

iShTEyennalu vaSavalla mahimegaLinnU uMTu |
naShTa mADuvaru durmata dAridryava | suvvi ||
sRuShTigoDeya prANESa viThThalaneMdu pELvaru |
eShTu pELidarU enniMdali tIradu | suvvi |15|

Leave a Reply

Your email address will not be published. Required fields are marked *

You might also like

error: Content is protected !!