Composer : Harapanahalli Bheemavva
ಶ್ರೀ ಹರಪನಹಳ್ಳಿ ಭೀಮವ್ವರ ರಚನೆ
ಸ್ತುತಿಮಣಿ ಮಾಲಿಕೆ
ಕರಿಮುಖದ ಗಣಪತಿಯ ಜರಣಕ್ಕೆಯೆರಗಿ
ಶಾರದೆಗೆ ಸೆರಗೊಡ್ಡಿ ವರವಾನು
ವರವ ಬೇಡಿಕೊಂಬೆ ಸ್ಥಿರವಾದ ಭಕುತಿ ಕೊಡುಯೆಂದು ೧
ವಾಯು ಬ್ರಹ್ಮ ಭಾರತಿಗೆ ಭಾಳ ಬೇಡಿಕೊಂಡ್ವೇ
ದವ್ಯಾಸರಿಗೆ ನಮೋಯೆಂಬೆ
ನಮೋಯೆಂದು ನಾರದರ ಪಾದಪದ್ಮಗಳಿಗೆರಗುವೆ ೨
ಅತ್ರಿ ಅಂಗೀರಸ ವಸಿಷ್ಠ ಗೌತಮ ವಿಶ್ವಾ
ಮಿತ್ರ ಮಾರ್ಕಾಂಡೇಯ ಚ್ಯವನರು ಚ್ಯವನ
ಭಾರದ್ವಾಜ ಶುಕ ಬಕದಾಲ್ಭ್ಯರಿಗೆ ನಮಿಸುವೆ ೩
ಮಾಂಡವ್ಯ ಸೌಭರಿ ಶಾಂಡಿಲ್ಯಗಾಲವರು
ಪಂಡಿತ್ವಾಲ್ಮೀಕಿ ಕೌಂಡಿಣ್ಯಕೌಂಡಿಣ್ಯ ಅಗಸ್ತ್ಯ ,
ಮುನಿ ಮರೀಚರಿಗೆ ನಾನು ನಮೊಯೆಂಬೆ ೪
ಶೇಷಗಿರಿವಾಸ ಆಕಾಶನಳಿಯನೆ ವೆಂಕ
ಟೇಶ ನಮ್ಮ ಮನೆ ದೈವ ಮನೆದೈ-
ವ ಸಲಹೆನ್ನ ಪದ್ಮಾವತೀಶ ಪರಮಾತ್ಮ ೫
ಮಂಗಳಾಂಗನೆ ನೀನು ಮಂಗಳಮಹಿಮನೆ
ಮಂಗಳ ದೇವಿ ರಮಣನೆ ನೀನೆಮಗೆ ಜಯ
ಮಂಗಳವ ಕೊಟ್ಟು ಸಲಹೆನ್ನ ೬
ವಾಸುದೇವನೆ ನೀನು ವಾಸುಕಿಶಯನನೆ
ವಾಸವಿಯ ರಥವ ನಡೆಸಿದೆ ನಡೆಸಿದಂಥ ಶ್ರೀನಿ
ವಾಸ ನೀನೆಮಗೆ ದಯಮಾಡು ೭
ಎನ್ನಲ್ಲೆ ನೀನಿದ್ದು ನಿನ್ನ ಗುಣ ಬಹುರೂಪ
ವನ್ನು ತಿಳಿಸದಲೆ ಇರುವೋರೆ ಇರುವೋರೆ ನೀನು ಪ್ರ
ಸನ್ನನಾಗೆನಗೆ ದಯಮಾಡು ೮
ಕಾಲ ಕಾಲಕೆ ನಿನ್ನ ನಾಮವನು ನಾಲಿಗೆ
ಮ್ಯಾಲಿಟ್ಟು ನಿನ್ನ ನೆನೆವಂತೆ ನೆನೆವಂತೆ
ಮಾಡಯ್ಯ ಆನಂದವರದ ಅನಿರುದ್ಧ ೯
ಕಾಮಕ್ರೋಧವು ಮದ ಮಾತ್ಸರ್ಯ ಲೋಭಗಳು
ಮೋಹ ಮಡುವಿನಲಿ ಮುಣುಗಿದೆ ಮುಣುಗಿದೆನೋ
ಎನ್ನ ಕೈ ನೀನೆ ಪಿಡಿದೆತ್ತಿ ಕರೆದೊಯ್ಯೊ ೧೦
ಐದು ಮಂದ್ಯೆನ್ನಲ್ಲಿ ಐದಾರೆ ಮಾರಾಯ
ಬೈದರು ಬಿಡರೋ ಎನ್ನೀಗ ಎನ್ನೀಗ ಕಟ್ಟಿ
ಕೊಂಡೊಯ್ದು ಹಾಕುವರೊ ಯಮನಲ್ಲಿ ೧೧
ಆರು ಮಂದ್ಯರಿಗಳು ಕ್ರೂರ ಶತ್ರುಗಳುಂಟು
ಘೋರಬಡಿಸುವರೋ ಅನುಗಾಲ
ದುರ್ವಿಷಯ ತಾವೆನಗೆ ಕಲಿಸಿ ದಣಿಸೋರು ೧೨
ಹತ್ತು ಮಂದಿ ಯೆನ್ನ ಸುತ್ತ ಮುತ್ತಿರುವರೂ
ಕತ್ತಲು ಕೂಪ ಭವದೊಳು ಭವದೊಳಗೆ ಬಳಲುವೆನು
ಚಿತ್ತಕ್ಕೆ ತಂದು ದಯಮಾಡು ೧೩
ಸಂಚಿತಾಗಾಮಿಗಳ ಮುಂಚೆ ದಹಿಸಿ ಈ ಪ್ರ
ಪಂಚವನು ಬಿಡಿಸೊ ಪರಮಾತ್ಮ ಪರಮಾತ್ಮ ನೀಯೆಅನ್ನ
ವಂಚನಿಲ್ಲದಲೆ ಸಲಹಯ್ಯ ೧೪
ಜ್ಞಾನ ಭಕ್ತಿ ಗಾನ ವೈರಾಗ್ಯ ಭಾಗ್ಯಗಳು
ಜಾನಕಿರಮಣ ಜಗದೀಶ ಜಗದೀಶ ಜನಕನ
ಜಾಮಾತ ನೀನೆ ತಿಳಿಸಯ್ಯ ೧೫
ದ್ವಾಸುಪರುಣಾನಂತೆ ಈ ಶರೀರದೊಳಿದ್ದು
ಏಸೇಸು ಜನ್ಮಕ್ಕಗಲದೆ ಅಗಲದಂತಿದ್ದು ಉ
ದಾಸೀನವ ಮಾಡೋದೊಳಿತಲ್ಲ ೧೬
ಇಂದುಕುಲಜಾತ ನಿನ್ನ್ಹೊಂದಿಕೊಂಡಿದ್ದು
ಎಂದೆಂದಿಗು ಬಿಡದೆ ಗೆಳೆತನ ಗೆಳೆತನವಿದ್ದಲ್ಲಿ
ಸಂದೇಹವ್ಯಾಕೊ ಸಲಹಲು ೧೭
ಮುಕ್ತಿದಾಯಕ ನಿನ್ನ ಭಕ್ತರೇಸುಮಂದಿ
ಹೆತ್ತಾಯಿಸುತರೇನವರೆಲ್ಲ ನಾ ಹುಟ್ಟಿದೆನೆ
ಮತ್ತೆ ಮಲತಾಯಿ ಉದರದಿ ೧೮
ಶ್ರೀಶನೆ ಕೇಳ್ ನಿನ್ನ ದಾಸರಂಗಳದಲ್ಲಿ
ಬೀಸಿ ಬಿಸಾಕೊ ಎನ್ನನು ಎನ್ನ ಹರಿದಾಸರ
ದಾಸತ್ವಯೆನಗೆ ಕೊಡಿಸಯ್ಯ ೧೯
ಅಂಬರೀಶ್ವರದ ನಿನ್ನ್ಹಂಬಲೆನಗಿರಲಯ್ಯ
ಬಿಂಬ ಮೂರುತಿಯೆ ಬಿಡದೆನ್ನ ನಿನ್ನೂ ರಲ್ಲಿ
ಇಂಬುಕೊಟ್ಟೆನ್ನ ನಿಲಿಸಯ್ಯ ೨೦
ಕಡಿದು ಹೊಡೆಡು ಬಯ್ದು ಬಂದು ಕಾಲಿಂದೊದ್ದ
ರ್ಹಿಡಿಯದೆ ಅವರ ಅಪರಾಧ ಅಪರಾಧವೆಣಿಸದಿರೆ
ನಡೆದರೊ ನಿನ್ನ ಪುರಕಾಗ ೨೧
ಪುಟ್ಟ ಧ್ರುವ ಪ್ರಹ್ಲಾದ ಕೊಟ್ಟರೆಷ್ಟು ಭಾಗ್ಯ
ಕಷ್ಟಕ್ಕೆ ಬಂದು ಒದಗಿದೆ ಒದಗಿ ಬಂದವರ
ಆಪತ್ತು ಬಂಧನ ಬಿಡಿಸಿದೆ ೨೨
ತನ್ನ ಮಗನ ಕರೆಯೆ ಎನ್ನ ಕರೆದನೆಂದು
ನಿನ್ನ ದೂತರನು ಕಳಿಸಿದ ಕಳಿಸಿದ್ಯಜಮಿಳಗೆ
ಮನ್ನಿಸಿ ಕೊಟ್ಟ್ಯೊ ನಿನಲೋಕ ೨೩
ತಿರುಕ ತಂದವಲಕ್ಕಿ ತರತರನೆ ನೀ ಮುಕ್ಕಿ
ದೊರೆತನವ ಕೊಟ್ಟು ದಾರಿದ್ರ್ಯ , ದಾರಿದ್ರ್ಯ ಕಳೆದದ್ದು
ಅರಿಕಿಲ್ಲವೇನೋ ಜಗಕೆಲ್ಲ ೨೪
ನಿಲ್ಲಬೇಕೆಂದಿಟ್ಟಿಕಲ್ಲು ಕೊಟ್ಟವಗೆ ಕೈ
ವಲ್ಯವನು ಕೊಟ್ಟ್ಯೋ ಕರುಣಾಳು ಕರುಣಾಳು
ಬುಕ್ಕ್-ಹಿಟ್ಟು ಮಲ್ಲಿಗೆಯ ಮಾಲೆಗೊಲಿತೀಯೊ ೨೫
ಕರೆದು ಕಂಸಗೆ ಕೊಟ್ಟು ಕೊಲಿಸಬಂದ-
ಕ್ರೂರಗೆ ನದಿಯಲ್ಲೆ ನಿನ್ನ ನಿಜರೂಪ ನಿಜರೂಪ
ತೋರಿದ್ದು ಇದುಯೇನು ನಿನ್ನ ಮಹಿಮೆಯು ೨೬
ಗಂಧಕ್ಕೆ ಒಲಿದು ಕುಬ್ಜೆಯ ಡೊಂಕನೆ ತಿದ್ದಿ
ಸುಂದರಿಯ ಮಾಡಿ ಸುಗುಣನೆ ನೀನಾಕೆ-
ಅಂಗಸಂಗ್ಯಾಕೆ ಬಯಸಿದಿ ೨೭
ಕಲ್ಲಾದಹಲ್ಯೆಯನು ಕಡು ಚೆಲ್ವೆಯನು ಮಾಡಿ
ಎಲ್ಲಿ ಮಲಗಿದ್ದ ಮುಚುಕುಂದ ಮುಚುಕುಂದನ ಗುಹೆ
ಯಲ್ಲೆ ಕೈವಲ್ಯ ಕೊಡಹೋದ್ಯೋ ೨೮
ಮಗ್ಗವನೆ ಹಾಕಿ ಮಾರುಬಟ್ಟೆ ನೇದಿಲ್ಲ
ರೊಕ್ಕವನೆ ಕೊಟ್ಟು ತರಲಿಲ್ಲ ತರಲಿಲ್ಲ ದ್ರೌಪದಿಗೆ
ಲೆಕ್ಕಿಲ್ಲದ್ವಸ್ತ್ರ ಉಡಿಸಿದಿ ೨೯
ಸಂಗ್ರಾಮದಿ ಬಂದಂಥ ಸರ್ಪಬಾಣವ ನೋಡಿ
ಉಂಗುಷ್ಟದಿಂದ ರಥವನು ರಥವ ನೆಲಕೊತ್ತಿ
ಧನಂಜಯನ ಪ್ರಾಣ ಉಳುಹಿದಿ ೩೦
ತಂಬೂರಿ ವೀಣೆ ಗಾಯ್ನ ಲಕ್ಷಣ ಬಿಡದೆ
ಸಂಭ್ರಮದಿಂದ ಪಾಡುತ್ತ ಪಾಡಿ ಕೊಂಡಾಡಿ ನಾರಂದ
ರಾನಂದ ಪಡೆವರು ೩೧
ತರಳ ರೂಪದಿ ಕಾಲಿಗ್ವರಳ ಕಟ್ಟಿಸಿಕೊಂಡು
ಎಳೆದುಕೊಂಡ್-ಹೋಗಿ ಯಮಳರ ಯಮಳಾರ್ಜು
ನರ ಕಿತ್ತಿ ಕಳುಹಿದೆಯೊ ನಿನ್ನ ಪುರಕಾಗ ೩೨
ನಾನೇನು ಕೊಡುವೆನೊ ನಾನೇನು ಬೇಡುವೆನೊ
ನೀನೇನು ಕರುಣಾನಿಧಿಯಲ್ಲೆ ನಿಧಿಯಲ್ಲವೆ ಭಕ್ತಾ
ಧೀನನೆಂದು ನಿನ್ನ ಹೊಗಳುವೆ ೩೩
ಅಡಿಗೆ ಮಾಡುವನ ಕೈಹಿಡಿದ ಹುಟ್ಟಿನಂತೆ
ನಡೆಯದೊ ನಮ್ಮ ಸ್ವಾತಂತ್ರ್ಯ ಮೂರ್ಲೋಕ
ದೊಡೆಯ ನೀ ಕರ್ತೃ ಜಗಕೆಲ್ಲ ೩೪
ಆದಿಪುರುಷನೆ ನೀನನಾದಿಕಾಲದಿ ಓರ್ವ
ವೇದವೇದಾಂತ ಯದುನಾಥ ಯದುನಾಥ ಎನ್ನ ಯಮ
ಬಾಧೆ ಬಿಡಿಸೋದಕೆ ನೀ ಬಾಧ್ಯ ೩೫
ಆರ್ಯ ನೀನೊಬ್ಬ ನಿನಗಾರ್ಯರಿನ್ನುಂಟೇನೊ
ಆರಾರು ನಿನ್ನ ಅರಿಯರು ಅರಿಯರೊ ಜಗನ್ನಾಥ
ದಾರ ಸುತ ದಾರ ರೂಪಾದಿ ೩೬
ಅಣುವೊಳಗು ನೀನೆ ಪರಮಾಣುವಿನೊಳಗೂ ನೀನೆ
ಘನವಾದ ರೂಪ ಗಗನಕ್ಕೆ ಗಗನಕ್ಕೆ ಬೆಳೆದದ್ದು
ಬಲಿ ಬಲ್ಲ ನಿನ್ನ ಮಹಿಮೆಯ ೩೭
ಘಟದ ಒಳಗಿದ್ದೆ ವಟಬೀಜದೊಳು ನೀನಿದ್ದು
ಪಟ ತಂತಿಯೊಳಗೆ ನೀ ವ್ಯಾಪ್ತ ನೀ ವ್ಯಾಪ್ತ ಕಂಬದ
ಜಠರದೊಳಗಿದ್ಯೊ ಜಗದೀಶ ೩೮
ಲೋಕಪಾವನ ಗಂಗೆ ನಖದಿಂದ ಉದಿಸಲು
ನಾಲ್ಕು ಮುಖ ಬ್ರಹ್ಮ ನಾಭಿಂದ ನಾಭಿಂದ ಹದಿನಾಲ್ಕು
ಲೋಕ ಸಾಕುವೊ ಸರ್ವೇಶ ೩೯
ಅಂತರಾತ್ಮಕ ನಿನ್ನಂಥ ಗುಣಮಹಿಮೆ
ಎಂಥೆಂಥವರು ನೋಡಿ ತಿಳಿಯರು ತಿಳಿಯರೊ ನಿನ್ನ
ನಮ್ಮಂಥ ಮೂಢರಿಗೆ ವಶವೇನೊ ೪೦
ಮೂರು ಕಣ್ಣಲಿ ರುದ್ರ ನೋಡಿ ನಿನ ತಿಳಿಯದೆ ಹೋಗಿ
ಶರಧಿಯಲಿ ತಪವಿದ್ದು ತಪವಿದ್ದು ಪಡೆದನೊ ತಾನು
ಪರ್ಯಂಕ ಪದವಿಯ ೪೧
ಸಾಸಿರ ಮುಖದಿಂದ ಶೇಷ ತಿಳಿಯದೆ ನೋಡಿ
ಪಾತಾಳಕ್ಕ್-ಹೋಗಿ ನಿನಪಾದ ಪದ್ಮದ
ರೇಕುಗಳ ಎಣಿಸುತ್ತಿರುವೋನು ೪೨
ಒಂದೆರಡು ಕಣ್ಣು ಸಾಲದು ಎಂದು
ಇಂದ್ರ ಮೈತುಂಬ ನೇತ್ರಗಳ ಪಡೆದನು ಪಡೆದು
ಸ್ವರ್ಗದಲ್ಲಿ ಉ- ಪೇಂದ್ರ ನಿನ್ನ ನೋಡುತ್ತಿರುವೋನು ೪೩
ಎಂಟು ಕಣ್ಣಲಿ ಬ್ರಹ್ಮ ನೋಡಿ ನಿನ ತಿಳಿಯದೆ
ಕಂಡ ಎಡೆಯಲ್ಲಿ ಕೌಸ್ತುಭ ಕೌಸ್ತುಭವಾಗಿ ವೈ
ಕುಂಠ ಪತಿ ನಿನ್ನ ಒಲಿಸುವ ೪೪
ಪ್ರಳಯ ಕಾಲದಿ ಜನರ ಸುಳಿವಿಲ್ಲದಲ್ಲಿ ಕಿರು ಬೆ-
ರಳ ನಖ ಗುಣಗಳೆಣಿಸುತ್ತ ಎಣಿಸುತಲಿ ಮಾಲಕ್ಷ್ಮಿ
ತಿಳಿಯದಲೆ ನಿನ್ನ ಗುಣಗಳ ೪೫
ಅನಂತಾಸನ ಶ್ವೇತದ್ವೀಪ ಭೂವೈಕುಂಠ ಮೂರು
ಸ್ಥಾನದಲಿ ಮುರವೈರಿ ಮುರವೈರಿ
ನಿನ ಸೇವೆ ಮಾಡಿ ಮಾಲಕ್ಷ್ಮಿ ದಣಿಯದೆ ೪೬
ಶ್ರೀಭಾಗ ಭೂಭಾಗ ದುರ್ಗಾ ಭಾಗದಲ್ಲಿ
ಶ್ರೀಭೂದೇವಿ ನಿನ್ನ ಸರ್ವಾಂಗ ಸರ್ವಾಂಗದಲ್ಲೆ ಕೊಟ್ಟಾ
ಲಿಂಗನಿಂದ ಒಲಿಸೋಳು ೪೭
ಎಲ್ಲ ಪದಾರ್ಥದೊಳಗಲ್ಲಲ್ಲೆ ತಾನಿದ್ದು
ಮಲ್ಲರಂತಕನ್ನ ಮನೆ ಸೇವೆ ಮನೆಯ ಸೇವಕಳಂತೆ
ಘಲ್ಲು ಘಲ್ಲೆಂದೋಡಾಡುತ್ತ ೪೮
ಸಿರಿದೇವಿ ನಿನ್ನ ಪಟ್ಟಣದಲಿ ಭಕ್ತಿಯಿಂ-
ದ್ವಿರಜನದಿಯಾಗಿ ಹರಿದಳೋ ಹರಿದಳೊ ಛತ್ರ ಚಾ-
ಮರವು ತಾನಾಗಲ್ಲಿರುವೋಳು ೪೯
ಜೋಲಿ ಮಂಚಗಳಾಗಿ ಶಾಲು ಶಕಲಾತ್ಯಾ-
ಗಿ ಲೋಡು ತಲೆಗಿಂಬು ತಾನಾಗಿ ತಾನಾಗಿ ಸಿರಿ ನಿಂತು
ಕಾಲಸೇವೆಯಲಿ ಕಮಲಾಕ್ಷಿ ೫೦
ರತ್ನ ವೈಜಯಂತಿ ಮುತ್ತು ಮಾಣಿಕ್ಯದ್ವಜ್ರ-
ದ್ವಸ್ತ್ರ ಶ್ರೀತುಳಸಿ ಕಮಲವು ಕಮಲಮಾಲ್ಯಾಗಿ ಶ್ರೀ-
ವತ್ಸದಲಿ ನಲಿಯುತ್ತಿರುವೋಳು ೫೧
ದೇಶಕಾಲಕೆ ಸಮಳು ಗುಣಕೆ ಅಸಮಳು ನಿಜ-
ದಾಸಿಯಂತಿದ್ದು ನಿನಸೇವೆ ನಿನಸೇವೆ ಮಾಡಿ ಉ-
ಲ್ಲಾಸದಲಿ ನೋಡುತ್ತಿರುವೊಳು ೫೨
ಲಕ್ಷ್ಮಿಯರಡಕ್ಷ ಸಾಲದಲೆ ಶ್ರೀ ಭೂ ದುರ್ಗೆ
ಸಾಕ್ಷಾತ ಮೂರುರೂಪಾಗಿ ರೂಪಾಗಿ ನಿಂತು ಆ-
ರಕ್ಷದಲಿ ನೋಡುತ್ತಿರುವೋಳು ೫೩
ಎಷ್ಟು ನೋಡಿದರು ಮನ ತೃಪ್ತಿಯಾಗದಲೆ
ನಿನ್ವಕ್ಷಸ್ಥಳದಲ್ಲೆ ತಾ ಹೊಂದಿ ತಾ ಹೊಂದಿಕೊಂಡಿದ್ದು
ನಿತ್ಯ ಸುಖಪೂರ್ಣಳೆನಿಸೋಳು ೫೪
ಸಾಲೋಕ್ಯ ಸಾಮೀಪ್ಯ ನಿನ್ನ ಸಾರೂಪ್ಯದಲಿ
ಸಾಯುಜ್ಯ ಪದವಿ ಪಡೆದಂಥ ಪಡೆದಂಥ ಮುಕ್ತರ
ಸಾಧನೆಗಳೆಷ್ಟೊ ತಿಳಿಯದು ೫೫
ತಲೆಯೂರಿ ತಪವಿದ್ದು ತರಗಿನೆಲೆಗಳ ಮೆದ್ದು
ಹರಿ ನಿನ್ನ ಧ್ಯಾನದೊಳಗಿದ್ದು ಒಳಗಿದ್ದವರ
ಹೃದಯದೊಳು ಮಿಂಚಿನಂತೆ ಹೊಳೆವೆಯೋ ೫೬
ನಿತ್ಯಮುಕ್ತನೆ ನಿನ್ನ ಮುಕ್ತಸ್ಥಾನದಲಿ ಶಮಿ
ಪತ್ರದಂತಿಷ್ಟು ಸ್ಥಳವನು ಸ್ಥಳವ ಕೊಟ್ಟರೆ
ಸಾಕು ಚಿತ್ತಸ್ವಸ್ಥಾಗಲ್ಲಿರುವೆನು ೫೭
ಅಚ್ಯುತನ ಕರುಣೆಂಬೊ ನಿಚ್ಚಣಿಕೆಯನ ಮಾಡಿ
ಹತ್ತೋ ಹರಿದಾಸರವರಂತೆ ಅವರಂತೆ ಜೀರಿಗೆ-
ಯಷ್ಟು ದಯ ನೀಡೊ ಎನ್ನಲಿ ೫೮
ಹೊತ್ತು ಹೋಗುತಲಿದೆ ಮೃತ್ಯು ಕೂಗುತಲಿದೆ
ವ್ಯರ್ಥವಾಗುವುದೊ ಈ ಜನ್ಮ ಈ ಜನ್ಮ ನಿನ ನಾಮ
ಎತ್ತರವು ಎನಗೆ ನಿಲುಕದು ೫೯
ಶೂರಪುತ್ರನ ಸುತಗೆ ಸೂರ್ಯಾಡೊ ನಿನ್ನ ದಯ
ಸಾರ್ಯವಾಗುವುದೊ ನಿನಲೋಕ ನಿನಲೋಕ ಸಾಮ್ರಾಜ್ಯ
ದಾರಿನ್ನು ಬಯಸದಿರುವೋರು ೬೦
ವಸುದೇವಸುತ ಭಕ್ತರೊಶವಲ್ಲ ನಿನ್ನ ಮುತ್ಯ-
ನ್ಹೆಸರುಮಾತ್ರಕ್ಕು ಎನ್ನಲ್ಲಿ ಎನ್ನಲ್ಲಿ ಮಾಡದಿರು
ಹಸುಗೂಸಿನಂತೆ ನೋಡೆನ್ನ ೬೧
ಶಂಬರಾರಿಯ ಜನಕ ನಂಬಿದ್ದೆ ನಾ ನಿನ್ನ
ಡೊಂಬ ತನಸುತನ ಭರದಿಂದ ಭರದಿಂದ ತೂಗುವನು
ಕುಂಭಿಣಿಗೆ ಬೀಳೋತೆರನಂತೆ ೬೨
ಕುತ್ತಿಗೆಯ ಕೊಯ್ದಲಗು ಹೊಟ್ಟೆಯೊಳಗ್-ಹಾಕಿ
ನೆತ್ತರವ ನೆರೆದಿದ್ದ ಜನರಿಗೆ ಜನರಿಗೆ ತೋರುವನು
ಅತ್ಯಂತ ಕರುಣ ಅವಗಿಲ್ಲೆ ೬೩
ಮಾಯಾವಿದ್ಯವ ಮಾಡಿ ತೋರುವನು ಉ-
ದರಕ್ಕೆ ನೀನಲ್ಲೊ ಸ್ವಾಮಿ ಅವನಂತೆ ಅವನಂತೆ ಅಲ್ಲೆನ್ನ
ಕಾಯ್ವಾಭಿಮಾನ ನಿನದಲ್ಲೆ ೬೪
ಹುಟ್ಟಿಸ್ಸುಟ್ಟಿಸಿ ತಾಯಿ ಹೊಟ್ಟೆಯೊಳೆಗ್-ಹಾಕೆನ್ನ
ಕಷ್ಟ ಬಡಿಸುವೋರೆ ಕರುಣಾಳು ಕರುಣಾಳು ನಿನಗೆ
ಪು- ರುಷಾರ್ಥವೇನ್ಹೇಳೊ ಇದರಿಂದ ೬೫
ತಂದೆ ತಾಯಿ ಬಂಧು ಬಳಗ ಬಾಂಧವರೆಲ್ಲ
ಹಿಂದೆಷ್ಟೋ ಮುಂದೆ ಎಣಿಕಿಲ್ಲ ಎಣಿಕಿಲ್ಲದವರ ನನ್ನವ-
ರೆಂದು ತಿಳಿದು ಫಲವಿಲ್ಲ ೬೬
ಜೀವ ಜೀವಕು ಭೇದ ಜೀವ ಜಡಕೂ ಭೇದ
ಜಡಜಡಕೆ ಭೇದ ನಿನಗಿನ್ನು ನಿನಗೆ ಭೇದಾದರೆನ್ಯನ್ನೊಳು
ಭೇದಬುದ್ಧಿ ಬ್ಯಾಡಿನ್ನು ೬೭
ಅನ್ನಮಯ ಪ್ರಾಣಮಯ ಆನಂದಮಯ ನೀನೆ
ನಾನೆಂದ ಮಾತು ನಿಜವೆಂದು ನಿಜವೆಂದು ತಿಳಿದು
ಜ್ಞಾನಾನಂದ ಕೊಟ್ಟು ಸಲಹಯ್ಯ ೬೮
ಎಂಬತ್ತು ಕೋಟಿ ನಾಲ್ಕು ಲಕ್ಷ ಜೀವಿಗ-
ಳಿಂಬ್-ಹ್ಯಾಗೆ ನಿನಗೆ ದೊರಕಿತೊ ದೊರಕಿತೊ
ಸ್ಥಾವರ ಜಂಗಮದಲ್ಹ್ಯಾಗಿರುವೆಯೊ ೬೯
ಜನನ ಮರಣವು ಶುಕ್ಲಶೋಣಿ ಸಂಬಂಧ ಜರೆ
ಜನ್ಮಕರ್ಮಗಳು ನಿನಗಿಲ್ಲ ನಿನಗಿಲ್ಲ ಸಂಸಾರ ಬವಣೆ
ನಿನಗುಂಟೆ ಬಹು ದೂರ ೭೦
ವಿಷಾದ್-ಹಾಲು ಕುಡಿದು ನೀ ವಿಷದ ಮಡುವನು ಕಲಕಿ
ವಿಷದನುಜೆಕೂಡ ವಿನಯದಿ ವಿನಯ ಸಂಭ್ರಮದಿಂದ
ವಿಷಮಂಚದಲ್ಲೆ ಮಲಗುವಿ ೭೧
ಸತ್ಯ ಸಂಕಲ್ಪನೆ ಸತ್ಯ ಪ್ರತಿಜ್ಞನೆ
ಸತ್ಯಭಾಮೆಯರ ಅರಸನೆ ಅರಸು ನಿನ್ನಲಿ ಜ್ಞಾನ
ಸತ್ಯವಾಗೆನಗೆ ಕೊಡುಕಂಡ್ಯ ೭೨
ನಾರಾಯಣನೆಂಬೊ ನಾಲ್ಕು ಅಕ್ಷರಗಳು
ನಾಲಿಗೆಯಲ್ಲೆನಗೆ ಬರೆದರೆ ಬರೆದರೋದಿಕೊಂಬೆ
ಬಾರೊ ಬಾಯಲ್ಲಿ ಭಗವಂತ ೭೩
ಹರದಾರಿ ನಡೆವುದಕೆ ಎನಗೆ ಸಾಮರ್ಥಿಲ್ಲ
ಹರಿದಾರಿ ಹ್ಯಾಗೆ ಹಿಡಿಯಲಿ ಹಿಡಿಯಲಿ ನೀ ಮುಂದೆ
ನಡೆಯೆನ್ನ ಸಂಗ ಬಿಡದಂತೆ ೭೪
ಕಾಲಿದ್ದು ನಿನಯಾತ್ರೆ ಕರವಿದ್ದು ನಿನಸೇವೆ
ಬಾಯಿದ್ದು ನಿನ್ನ ಭಜನೆಯು ಭಜನೆ ಮಾಡದಲಿದ್ದ-
ರ್ಹಾಳುಬಾವಿಗೆ ಸರಿಯಲ್ಲೆ ೭೫
ಕಣ್ಣು ಕಿವಿಯು ನಾಲಿಗ್ಯಿನ್ನಿದ್ದರೇನು ಫಲ
ನಿನ್ನ ಮಹಿಮೆಗಳ ತಿಳಿಯದೆ ತಿಳಿದು ನೋಡದಲಿದ್ದು
ಮಣ್ಣು ಗೊಂಬ್ಯಂತೆ ನಾನಲ್ಲೆ ೭೬
ಮಣ್ಣುಗೊಂಬ್ಯಾದರು ಪುಣ್ಯ ಪಾಪಗಳಿಲ್ಲ
ಎನ್ನ ಯಮದೂತರೆಳೆವೋರು ಎಳೆವೋರೂ ನಿನ್ನೆರಡು
ಕಣ್ಣಿಂದ ನೋಡೊ ಕಮಲಾಕ್ಷ ೭೭
ಕಂಗಳಿಂದಲಿ ನೋಡು ಕರುಣದಲಿ ಮಾತಾಡು
ಲಿಂಗವನೆ ಒಡೆದು ಸೂರ್ಯಾಡು ಸೂರ್ಯಾಡು ನಿನ್ನವರ
ಸಂಗವನೆ ಕೊಟ್ಟು ಸುಖ ನೀಡು ೭೮
ಭಾಗೀರಥೀಜನಕ ಭಯನಿವಾರಣ ನಿನ್ನ
ಭಾಗಕ್ಕೆ ಬಂದು ನಾ ಬಿದ್ದೆ ನಾ ಬಿದ್ದೆ ನಿನ್ನ ಚಿತ್ತ
ಕ್-ಹ್ಯಾಗೆ ಬಂದಂತೆ ಮಾಡಿನ್ನು ೭೯
ಫಾಲಲೋಚನಪ್ರಿಯನೆ ಪಾಲಾಬ್ಧಿ ಶಯನ ನಿನ್ನ
ಪಾಲಿಗೆ ಬಂದು ಪೊರೆಯೆಂದು ಪೊರೆಯೆಂದು ನಿನ ಕಮಲ
ಕಾಲಿಗೆ ಫಾಲ ಇಡುವೆನು ೮೦
ಸ್ವರ್ಗ ಬೇಡುವುದಿಲ್ಲನುಗ್ರಹದಾಪೇಕ್ಷ್ಯುಂಟು
ಸುಜ್ಞಾನಿಗೊಡೆಯ ಸುರರ್ವಂದ್ಯ ಸುರರ್ವಂದ್ಯಯೆನ್ನ ಶಿರವ
ಬಗ್ಗಿ ಸುವೆ ನಿನ್ನ ಚರಣಕ್ಕೆ ೮೧
ಭೂರಮಣ ನಿನ್ನ ಭೂದೇವಿ ಕದ್ದೊಯ್ದ ಬಂ
ಗಾರಲೋಚನನ ಮಡುಹಿದೆ ಮಡುಹಿ ನೀ ಅವನಲ್ಲಿ
ಮಾಡಿದಿನ್ಹ್ಯಾಗೆ ಕರುಣವ ೮೨
ಶ್ರೀರಮಣ ನಿನ್ನ ಸೀತೆಯ ಕದ್ದ ಚೋರನ್ನ
ಮೂರು ಮ್ಯಾಲೇಳು ಶಿರವನು ಶಿರವ ಚೆಂಡಾಡಿ ದಯ
ಸೂರೆ ಬಿಟ್ಟ್-ಹ್ಯಾಗೆ ಹೇಳವನಲ್ಲಿ ೮೩
ದುರ್ಗರಮಣನೆ ನಿನ್ನ ರುಕ್ಷ್ಮಿಣಿಗೆ ಗಂಡನೆಂ-
ದ್-ಹಿಗ್ಗಿಲೆ ಕುಳಿತ ಶಿಶುಪಾಲ ಶಿಶುಪಾಲನಹಂಕಾರ ಮರ್ದಿ
ಸಿದೆ ಒಂದು ಕ್ಷಣದಾಗೆ ೮೪
ಮೂರು ಜನ್ಮದಿ ನಿನ್ನ ಮುದ್ದು ಸತಿಯಳ
ದ್ರೋಹ ಮಾಡಿದ್ದ ಮೂಢ ಅಸುರರ ಅಸುರರನೆ
ಕರೆದು ಮಹದ್ವಾರದಲ್ಲ್-ಹ್ಯಾಗೆ ನಿಲಿಸಿದೆ ೮೫
ಕನಕಕಶ್ಯಪ ಕುಂಭಕರ್ಣ ದಂತವಕ್ರ
ಎಣಿಕ್ಕಿಲ್ಲದಂಥ ಅಪರಾಧ ಅಪರಾಧ ಅವರಲ್ಲಿ
ಎಣಿಸದಲೆ ತಪ್ಪು ಕ್ಷಮಿಸಿದೆ ೮೬
ಗೋಪಸುತನಾಗಿ ಸಾಂದೀಪನ್ವಲ್ಲಬೆಗೆ ಸಂ-
ತಾಪವನು ಕಳೆದು ಸುತರನು ಸುತರ ತಂದಿಟ್ಟೆ ನಿ-
ನ್ನ ಪಾದಮಹಿಮೆಗೆಣೆಯಿಲ್ಲ ೮೭
ಮಡಿದ್-ಹೋದ ಮಕ್ಕಳನೆ ಕೊಡುವೆನೆಂದಾ
ಪಾರ್ಥರೊಡಗೂಡಿ ನಿನ್ನ ಪುರದಿಂದ ತಂದು ದ್ವಿಜಗೆ
ಸಡಗರದಿ ಕೊಟ್ಟ್ಯೋ ಸುತರನು ೮೮
ಆರು ಮಂದಿ ಸುತರ ತೋರಿ ದೇವಕಿಗೆ
ನೀನುಂಡ ಮೊಲೆಯನುಣಿಸಿದೆ ಉಣಿಸಿ ಅವರಿಗೆ
ಮುಕ್ತಿ ಆನಂದ ಕೊಟ್ಟು ಕಳಿಸಿದೆ ೮೯
ಗೋಕುಲದೊಳಗ್-ಹುಟ್ಟಿ ಆಕಳ್ಹಿಂಡನು ಕಾಯ್ದು
ಗೋಪಾಲರೊಡನೆ ಕೊಳಲೂದಿ ಕೊಳಲೂದಿ
ಬೆಣ್ಣೆ ಮೊಸರ ಕಳ್ಳನೆಂದು ಹೆಸರಾದೆ ೯೦
ಬಂಡಿ ಚೂರ್ಣವ ಮಾಡಿ ಪುಂಡ ಶಕಟನ
ಕೊಂದು ಹಿಂಡುದೈತ್ಯರ ಶಿರವನು ಶಿರವ ಚೆಂಡಾಡಿ ಭೂ-
ಮಂಡಲದ ಭಾರನಿಳೇಹಿದ್ಯೊ ೯೧
ಬೆಟ್ಟದನ್ನವನುಂಡು ಬೆಟ್ಟಲಿ ಗಿರಿನೆತ್ತಿ
ಶಕ್ರನ್ನ ಮದವ ಮುರಿದೆಯೊ ಮುರಿದು ಋಷಿಪತ್ನಿಯರು
ಕೊಟ್ಟನ್ನ ಉಂಡು ಬಲಿತೆಯೊ ೯೨
ಬಾಲೇಯರಿಟ್ಟಂಥ ಸೀರೆ ಕುಪ್ಪಸ ಕದ್ದು
ಲೀಲಿಂದ ನೀನು ಮರನೇರಿ ಮರನೇರಿ ಅವರ ಮಾನವ
ಕಾಯ್ದು ಕೊಟ್ಟ್ಯೋ ಉಡುಗೊರೆ ೯೩
ಕಂಜಾಕ್ಷಿಯ ಮನೆಯಲ್ಲಿ ಕೊಳಲೂದಿ ಮೋಹಿಸುತ
ಸಂಜೆಲಿ ಬಂದ ಸತಿಯರ ಸತಿಯರನೆ ನೋಡುತ್ತಲಿ
ಅಂಜ್ಯೋಡಿಹೋದ್ಯೊ ಅಸುರಾರಿ ೯೪
ವ್ಯತ್ಯಾಸದಿಂದ್ವಸ್ತ್ರ ಇಟ್ಟು ಶೃಂಗಾರವಾಗಿ
ಚಿತ್ತ ಚಂಚಲವಾಗಿ ಅವರೆಲ್ಲ ಅವರು ಬರುತಿರೆ ನೋಡಿ
ಬಿಟ್ಟೋಡಿಹೋದ ಬಗೆಯೇನು ೯೫
ಅಡವ್ಯಡವಿ ತಿರುವುತಲಿ ಗಿಡಗಿಡನೆ ಕೇಳುತಲಿ
ನಡೆದು ಬಾಯಾರಿ ಬಳಲುತ ಬಳಲುತಲಿ ಬಂದವರ
ದೃಢಭಕ್ತಿ ನೋಡಿ ಬಲಿತೆಯೊ ೯೬
ಅಕ್ಕರದಿ ಅವರ ನಿನ್ನ ತೆಕ್ಕೆಯೊಳ್ ಬಿಗಿದಪ್ಪಿ ಬಾ
ಲಕ್ರೀಡೆನಾಡಿ ಜಲಜಾಕ್ಷ ಜಲಜಾಕ್ಷ ನೀನು ರಾ-
ಸಕ್ರೀಡೆನಾಡಿ ಸುಖನೀಡಿ ೯೭
ಇಬ್ಬರಿಬ್ಬರ ನಡುವೆ ಒಬ್ಬ ಕೃಷ್ಣನು ಆಗಿ
ನಿರ್ಭಯದಿ ಕುಣಿದ್ಯೊ ನೀಲಾಂಗ ನೀಲಾಂಗ ನಿನನೋಡಿ ಕ-
ಣ್ಗ್ ಹಬ್ಬವಾಯಿತೊ ಸುರರಿಗೆ ೯೮
ಗಂಧ ಪರಿಮಳವು ಕೇಸರಿ ಕುಂಕುಮರಿಷಿಣವು
ಕುಂದ ಕೇತಕಿಯು ಕಮಲವು ಕಮಲ ಮಲ್ಲಿಗೆ ತೆಪ್ಪ-
ದಂದದಲಿ ತೇಲುತ್ತಿರಲಾಗ ೯೯
ಅಮರಾದಿ ಸುರರು ನಿನ್ನಾಟ ನೋಡ್ಯನಕ
ಭೇರಿ ದುಂದುಮಿ ಬಡಿಸುತ ಬಡಿಸಿ ಮಂದಾರ
ಮಲ್ಲಿಗೆ ಕುಸುಮವೃಷ್ಟಿ ಕರೆದರು ೧೦೦
ಗೋಪೇರಲ್ಲಿದ್ದ್ವಿರಹತಾಪವನು ಬಿಡಿಸಿ ನಿ-
ನ್ನ ಪುರಕ್ಕವರ ಕರೆದೊಯ್ದೆ ಕೃಷ್ಣ ನಿ-
ನ್ನಾವ್ಯಾಪಾರ ನನಗೆ ತಿಳಿಯದು ೧೦೧
ಸಾಧ್ಯವಲ್ಲವೊ ಭಾಳಸಾಧ್ಯ ನಿನ್ನುಪದೇಶ
ಉದ್ಧವಗೆ ಹ್ಯಾಗೆ ದೊರಕಿತೊ ದೊರಕಿತೊ ಆತನ-
ಲ್ಲಿದ್ಧಂಥ ಪುಣ್ಯ ಫಲವೆಷ್ಟೊ ೧೦೨
ಅಹಿಶಾಯಿ ನಿನ್ನ ಅಂತ ಕರಣ ಪ್ರೇಮಗಳು
ಸಕಲರಲ್ಲಿದ್ದು ಸಮನಾಗಿ ಸಮನಾಗಿ ಇರಲು
ವೈಷಮ್ಯ ನೈರ್ಗುಣ್ಯ ನಿನಗುಂಟೆ ೧೦೩
ತಮತಮ್ಮ ಯೋಗ್ಯತೆಯ ಮೀರದಲೆ ತಾಮಸರು
ತಮಸಿಗ್-ಹೋಗುವರೊ ಈ ನಿತ್ಯ ಈ ನಿತ್ಯ
ಸಂಸಾರಿಗುಣಿಸುವಿಯೊ ಮಿಶ್ರಫಲವನು ೧೦೪
ಸತ್ವಾದಿ ಜೀವರನೆ ಹಸ್ತವಿಡಿದು ನೀನು
ಹತ್ತಿಸುವೆ ನಿನ್ನ ಸೌಪಾನ ಸೌಪಾನವೇರಿಸಿ
ಮುಕ್ತಿಮಂಟಪಕೆ ಕರೆದೊಯ್ವೆ ೧೦೫
ಪಕ್ಷಪಾತಗಳಿಲ್ಲ ಪಕ್ಷೀಂದ್ರವಾಹನನೆ ನಿನ
ಕುಕ್ಷಿಲೀರೇಳು ಜಗವನು ಜಗವ ರಕ್ಷಿಸುವಂಥ
ಸಾಕ್ಷಾತ ವಿಷ್ಣು ಸಲಹೆನ್ನ ೧೦೬
ಸನಕಾದಿವಂದ್ಯ ನಿನ್ನ ಮನಕೆ ಬಂದುದು ಮಾಡು
ದಿನಕರಕೋಟಿಪ್ರಕಾಶ ಪ್ರಕಾಶ ಎನ್ನ ಕತ್ತಲ
ಜ್ಞಾನಾಂಧಕಾರ ಬಿಡಿಸಿನ್ನು ೧೦೭
ಎಷ್ಟೆಷ್ಟು ನಿನಗೆ ಬಾಯ್ಬಿಟ್ಟ್-ಹೇಳಿಕೊಂಬೆ ಒಂ
ದಿಷ್ಟು ಬ್ಯಾಸರದೆ ಕೇಳಿನ್ನು ಕೇಳುತಲಿ ನಾ ಬೇಡಿ
ದಿಷ್ಟ ಫಲ ನೀಡಿಂದಿರೆಕಾಂತ ೧೦೮
ನಾವು ನವವಿಧ ಭಕ್ತಿಯಿಂದ ನಿನ್ನ ನಾಮ
ದಾವಾಗ ಬಿಡದೆ ಸ್ತುತಿಸುತ ಸ್ತುತಿಸಿ ಕೊಂಡಾಡುತಿರೆ
ದೇವಕೀ ಸುತ ತಾನೊಲಿವೋನು ೧೦೯
ಭಕ್ತರೋದ್ಧಾರನೆಂಬಂಥ ಧಾರವ ಮಾಡಿ
ಮುಕ್ತಿದಾಯಕನ ಗುಣಗಳ ಗುಣಮಣಿಯ ಪೋಣಿಸಿ
ಲಕ್ಷ್ಮೆಂಬ ಪದಕ ನಡುವಿಟ್ಟು ೧೧೦
ಸ್ತುತಿಮಣಿಮಾಲಿಕೆ ಕಟ್ಟಿ ಕೊರಳಿಗೆ ಹಾಕೆ ಶ್ರೀ-
ಪತಿಯು ಭೀಮೇಶಕೃಷ್ಣನು ಕೃಷ್ಣ ತಾ ಒಲಿದು ಕಾ-
ಮಿತಫಲವ ಕೊಡುವ ಕರುಣದಿ ೧೧೧
ಶ್ರೀ ಕೃಷ್ಣಾರ್ಪಣಮಸ್ತು ||
karimuKada gaNapatiya jaraNakkeyeragi
SAradege seragoDDi varavAnu
varava bEDikoMbe sthiravAda Bakuti koDuyeMdu 1
vAyu brahma BAratige BALa bEDikoMDvE
davyAsarige namOyeMbe
namOyeMdu nAradara pAdapadmagaLigeraguve 2
atri aMgIrasa vasiShTha gautama viSvA
mitra mArkAMDEya cyavanaru cyavana
BAradvAja Suka bakadAlbhyarige namisuve 3
mAMDavya sauBari SAMDilyagAlavaru
paMDitvAlmIki kauMDiNya
kauMDiNya agastya , muni marIcarige nAnu namoyeMbe 4
SEShagirivAsa AkASanaLiyane veMka
TESa namma mane daiva manedai-
va salahenna padmAvatISa paramAtma 5
maMgaLAMgane nInu maMgaLamahimane
maMgaLa dEvi ramaNane nInemage jaya
maMgaLava koTTu salahenna 6
vAsudEvane nInu vAsukiSayanane
vAsaviya rathava naDeside naDesidaMtha SrIni
vAsa nInemage dayamADu 7
ennalle nIniddu ninna guNa bahurUpa
vannu tiLisadale iruvOre iruvOre nInu pra
sannanAgenage dayamADu 8
kAla kAlake ninna nAmavanu nAlige
myAliTTu ninna nenevaMte nenevaMte
mADayya AnaMdavarada aniruddha 9
kAmakrOdhavu mada mAtsarya lOBagaLu
mOha maDuvinali muNugide muNugidenO
enna kai nIne piDidetti karedoyyo 10
aidu maMdyennalli aidAre mArAya
baidaru biDarO ennIga ennIga kaTTi
koMDoydu hAkuvaro yamanalli 11
Aru maMdyarigaLu krUra SatrugaLuMTu
GOrabaDisuvarO anugAla
durviShaya tAvenage kalisi daNisOru 12
hattu maMdi yenna sutta muttiruvarU
kattalu kUpa BavadoLu BavadoLage baLaluvenu
cittakke taMdu dayamADu 13
saMcitAgAmigaLa muMce dahisi I pra
paMcavanu biDiso paramAtma paramAtma nIyeanna
vaMcanilladale salahayya 14
j~jAna Bakti gAna vairAgya BAgyagaLu
jAnakiramaNa jagadISa jagadISa janakana
jAmAta nIne tiLisayya 15
dvAsuparuNAnaMte I SarIradoLiddu
EsEsu janmakkagalade agaladaMtiddu u
dAsInava mADOdoLitalla 16
iMdukulajAta ninnhoMdikoMDiddu
eMdeMdigu biDade geLetana geLetanaviddalli
saMdEhavyAko salahalu 17
muktidAyaka ninna BaktarEsumaMdi
hettAyisutarEnavarella nA huTTidene
matte malatAyi udaradi 18
SrISane kEL ninna dAsaraMgaLadalli
bIsi bisAko ennanu enna haridAsara
dAsatvayenage koDisayya 19
aMbarISvarada ninnhaMbalenagiralayya
biMba mUrutiye biDadenna ninnU ralli
iMbukoTTenna nilisayya 20
kaDidu hoDeDu baydu baMdu kAliMdodda
rhiDiyade avara aparAdha aparAdhaveNisadire
naDedaro ninna purakAga 21
puTTa dhruva prahlAda koTTareShTu BAgya
kaShTakke baMdu odagide odagi baMdavara
Apattu baMdhana biDiside 22
tanna magana kareye enna karedaneMdu
ninna dUtaranu kaLisida kaLisidyajamiLage
mannisi koTTyo ninalOka 23
tiruka taMdavalakki taratarane nI mukki
doretanava koTTu dAridrya , dAridrya kaLedaddu
arikillavEnO jagakella 24
nillabEkeMdiTTikallu koTTavage kai
valyavanu koTTyO karuNALu karuNALu
bukk-hiTTu malligeya mAlegolitIyo 25
karedu kaMsage koTTu kolisabaMda-
krUrage nadiyalle ninna nijarUpa nijarUpa
tOriddu iduyEnu ninna mahimeyu 26
gaMdhakke olidu kubjeya DoMkane tiddi
suMdariya mADi suguNane nInAke-
aMgasaMgyAke bayasidi 27
kallAdahalyeyanu kaDu celveyanu mADi
elli malagidda mucukuMda mucukuMdana guhe
yalle kaivalya koDahOdyO 28
maggavane hAki mArubaTTe nEdilla
rokkavane koTTu taralilla taralilla draupadige
lekkilladvastra uDisidi 29
saMgrAmadi baMdaMtha sarpabANava nODi
uMguShTadiMda rathavanu rathava nelakotti
dhanaMjayana prANa uLuhidi 30
taMbUri vINe gAyna lakShaNa biDade
saMBramadiMda pADutta pADi koMDADi nAraMda
rAnaMda paDevaru 31
taraLa rUpadi kAligvaraLa kaTTisikoMDu
eLedukoMD-hOgi yamaLara yamaLArju
nara kitti kaLuhideyo ninna purakAga 32
nAnEnu koDuveno nAnEnu bEDuveno
nInEnu karuNAnidhiyalle nidhiyallave BaktA
dhInaneMdu ninna hogaLuve 33
aDige mADuvana kaihiDida huTTinaMte
naDeyado namma svAtaMtrya mUrlOka
doDeya nI kartRu jagakella 34
AdipuruShane nInanAdikAladi Orva
vEdavEdAMta yadunAtha yadunAtha enna yama
bAdhe biDisOdake nI bAdhya 35
Arya nInobba ninagAryarinnuMTEno
ArAru ninna ariyaru ariyaro jagannAtha
dAra suta dAra rUpAdi 36
aNuvoLagu nIne paramANuvinoLagU nIne
GanavAda rUpa gaganakke gaganakke
beLedaddu bali balla ninna mahimeya 37
GaTada oLagidde vaTabIjadoLu nIniddu
paTa taMtiyoLage nI vyApta nI vyApta kaMbada
jaTharadoLagidyo jagadISa 38
lOkapAvana gaMge naKadiMda udisalu
nAlku muKa brahma nABiMda nABiMda hadinAlku
lOka sAkuvo sarvESa 39
aMtarAtmaka ninnaMtha guNamahime
eMtheMthavaru nODi tiLiyaru tiLiyaro ninna na
mmaMtha mUDharige vaSavEno 40
mUru kaNNali rudra nODi nina tiLiyade hOgi
Saradhiyali tapaviddu tapaviddu paDedano tAnu
paryaMka padaviya 41
sAsira muKadiMda SESha tiLiyade nODi
pAtALakk-hOgi ninapAda padmada
rEkugaLa eNisuttiruvOnu 42
oMderaDu kaNNu sAladu eMdu
iMdra maituMba nEtragaLa paDedanu paDedu
svargadalli u- pEMdra ninna nODuttiruvOnu 43
eMTu kaNNali brahma nODi nina tiLiyade
kaMDa eDeyalli kaustuBa kaustuBavAgi vai
kuMTha pati ninna olisuva 44
praLaya kAladi janara suLivilladalli kiru be-
raLa naKa guNagaLeNisutta eNisutali mAlakShmi
tiLiyadale ninna guNagaLa 45
anaMtAsana SvEtadvIpa BUvaikuMTha mUru
sthAnadali muravairi muravairi
nina sEve mADi mAlakShmi daNiyade 46
SrIBAga BUBAga durgA BAgadalli
SrIBUdEvi ninna sarvAMga sarvAMgadalle koTTA
liMganiMda olisOLu 47
ella padArthadoLagallalle tAniddu
mallaraMtakanna mane sEve maneya sEvakaLaMte
Gallu GalleMdODADutta 48
siridEvi ninna paTTaNadali BaktiyiM-
dvirajanadiyAgi haridaLO haridaLo Catra cA-
maravu tAnAgalliruvOLu 49
jOli maMcagaLAgi SAlu SakalAtyA-
gi lODu talegiMbu tAnAgi tAnAgi siri niMtu
kAlasEveyali kamalAkShi 50
ratna vaijayaMti muttu mANikyadvajra-
dvastra SrItuLasi kamalavu kamalamAlyAgi SrI-
vatsadali naliyuttiruvOLu 51
dESakAlake samaLu guNake asamaLu nija-
dAsiyaMtiddu ninasEve ninasEve mADi u-
llAsadali nODuttiruvoLu 52
lakShmiyaraDakSha sAladale SrI BU durge
sAkShAta mUrurUpAgi rUpAgi niMtu A-
rakShadali nODuttiruvOLu 53
eShTu nODidaru mana tRuptiyAgadale
ninvakShasthaLadalle tA hoMdi tA hoMdikoMDiddu
nitya suKapUrNaLenisOLu 54
sAlOkya sAmIpya ninna sArUpyadali
sAyujya padavi paDedaMtha paDedaMtha muktara
sAdhanegaLeShTo tiLiyadu 55
taleyUri tapaviddu taraginelegaLa meddu
hari ninna dhyAnadoLagiddu oLagiddavara
hRudayadoLu miMcinaMte hoLeveyO 56
nityamuktane ninna muktasthAnadali Sami
patradaMtiShTu sthaLavanu sthaLava
koTTare sAku cittasvasthAgalliruvenu 57
acyutana karuNeMbo niccaNikeyana mADi
hattO haridAsaravaraMte avaraMte jIrige-
yaShTu daya nIDo ennali 58
hottu hOgutalide mRutyu kUgutalide
vyarthavAguvudo I janma I janma nina nAma
ettaravu enage nilukadu 59
SUraputrana sutage sUryADo ninna daya
sAryavAguvudo ninalOka ninalOka sAmrAjya
dArinnu bayasadiruvOru 60
vasudEvasuta BaktaroSavalla ninna mutya-
nhesarumAtrakku ennalli ennalli mADadiru
hasugUsinaMte nODenna 61
SaMbarAriya janaka naMbidde nA ninna
DoMba tanasutana BaradiMda BaradiMda tUguvanu
kuMBiNige bILOteranaMte 62
kuttigeya koydalagu hoTTeyoLag-hAki
nettarava neredidda janarige janarige tOruvanu
atyaMta karuNa avagille 63
mAyAvidyava mADi tOruvanu u-
darakke nInallo svAmi avanaMte avanaMte allenna
kAyvABimAna ninadalle 64
huTTissuTTisi tAyi hoTTeyoLeg-hAkenna
kaShTa baDisuvOre karuNALu karuNALu
ninage pu- ruShArthavEnhELo idariMda 65
taMde tAyi baMdhu baLaga bAMdhavarella
hiMdeShTO muMde eNikilla eNikilladavara nannava-
reMdu tiLidu Palavilla 66
jIva jIvaku BEda jIva jaDakU bhEda
jaDajaDake BEda ninaginnu ninage BEdAdarenyannoLu
BEdabuddhi byADinnu 67
annamaya prANamaya AnaMdamaya nIne
nAneMda mAtu nijaveMdu nijaveMdu tiLidu
j~jAnAnaMda koTTu salahayya 68
eMbattu kOTi nAlku lakSha jIviga-
LiMb-hyAge ninage dorakito dorakito
sthAvara jaMgamadalhyAgiruveyo 69
janana maraNavu SuklaSONi saMbaMdha jare
janmakarmagaLu ninagilla ninagilla saMsAra bavaNe
ninaguMTe bahu dUra 70
viShAd-hAlu kuDidu nI viShada maDuvanu kalaki
viShadanujekUDa vinayadi vinaya saMBramadiMda
viShamaMcadalle malaguvi 71
satya saMkalpane satya pratij~jane
satyaBAmeyara arasane arasu ninnali j~jAna
satyavAgenage koDukaMDya 72
nArAyaNaneMbo nAlku akSharagaLu
nAligeyallenage baredare baredarOdikoMbe
bAro bAyalli BagavaMta 73
haradAri naDevudake enage sAmarthilla
haridAri hyAge hiDiyali hiDiyali nI muMde
naDeyenna saMga biDadaMte 74
kAliddu ninayAtre karaviddu ninasEve
bAyiddu ninna Bajaneyu Bajane mADadalidda-
rhALubAvige sariyalle 75
kaNNu kiviyu nAligyinniddarEnu Pala
ninna mahimegaLa tiLiyade tiLidu nODadaliddu
maNNu goMbyaMte nAnalle 76
maNNugoMbyAdaru puNya pApagaLilla
enna yamadUtareLevOru eLevOrU ninneraDu
kaNNiMda nODo kamalAkSha 77
kaMgaLiMdali nODu karuNadali mAtADu
liMgavane oDedu sUryADu sUryADu ninnavara
saMgavane koTTu suKa nIDu 78
BAgIrathIjanaka BayanivAraNa ninna
BAgakke baMdu nA bidde nA bidde ninna citta
k-hyAge baMdaMte mADinnu 79
PAlalOcanapriyane pAlAbdhi Sayana ninna
pAlige baMdu poreyeMdu poreyeMdu nina kamala
kAlige PAla iDuvenu 80
svarga bEDuvudillanugrahadApEkShyuMTu
suj~jAnigoDeya surarvaMdya surarvaMdyayenna Sirava
baggi suve ninna caraNakke 81
BUramaNa ninna BUdEvi kaddoyda baM
gAralOcanana maDuhide maDuhi nI avanalli
mADidinhyAge karuNava 82
SrIramaNa ninna sIteya kadda cOranna
mUru myAlELu Siravanu Sirava ceMDADi daya
sUre biTT-hyAge hELavanalli 83
durgaramaNane ninna rukShmiNige gaMDaneM-
d-higgile kuLita SiSupAla SiSupAlanahaMkAra mardi
side oMdu kShaNadAge 84
mUru janmadi ninna muddu satiyaLa
drOha mADidda mUDha asurara asurarane
karedu mahadvAradall-hyAge niliside 85
kanakakaSyapa kuMBakarNa daMtavakra
eNikkilladaMtha aparAdha aparAdha avaralli
eNisadale tappu kShamiside 86
gOpasutanAgi sAMdIpanvallabege saM-
tApavanu kaLedu sutaranu sutara taMdiTTe ni-
nna pAdamahimegeNeyilla 87
maDid-hOda makkaLane koDuveneMdA
pArtharoDagUDi ninna puradiMda taMdu dvijage
saDagaradi koTTyO sutaranu 88
Aru maMdi sutara tOri dEvakige
nInuMDa moleyanuNiside uNisi avarige
mukti AnaMda koTTu kaLiside 89
gOkuladoLag-huTTi AkaLhiMDanu kAydu
gOpAlaroDane koLalUdi koLalUdi
beNNe mosara kaLLaneMdu hesarAde 90
baMDi cUrNava mADi puMDa SakaTana
koMdu hiMDudaityara Siravanu Sirava ceMDADi bhU-
maMDalada BAraniLEhidyo 91
beTTadannavanuMDu beTTali girinetti
Sakranna madava murideyo muridu RuShipatniyaru
koTTanna uMDu baliteyo 92
bAlEyariTTaMtha sIre kuppasa kaddu
lIliMda nInu maranEri maranEri avara mAnava
kAydu koTTyO uDugore 93
kaMjAkShiya maneyalli koLalUdi mOhisuta
saMjeli baMda satiyara satiyarane nODuttali
aMjyODihOdyo asurAri 94
vyatyAsadiMdvastra iTTu SRuMgAravAgi
citta caMcalavAgi avarella avaru barutire nODi
biTTODihOda bageyEnu 95
aDavyaDavi tiruvutali giDagiDane kELutali
naDedu bAyAri baLaluta baLalutali baMdavara
dRuDhaBakti nODi baliteyo 96
akkaradi avara ninna tekkeyoL bigidappi bA
lakrIDenADi jalajAkSha jalajAkSha nInu rA-
sakrIDenADi suKanIDi 97
ibbaribbara naDuve obba kRuShNanu Agi
nirBayadi kuNidyo nIlAMga nIlAMga ninanODi ka-
Ng habbavAyito surarige 98
gaMdha parimaLavu kEsari kuMkumariShiNavu
kuMda kEtakiyu kamalavu kamala mallige teppa-
daMdadali tEluttiralAga 99
amarAdi suraru ninnATa nODyanaka
BEri duMdumi baDisuta baDisi maMdAra
mallige kusumavRuShTi karedaru 100
gOpEralliddvirahatApavanu biDisi ni-
nna purakkavara karedoyde kRuShNa ni-
nnAvyApAra nanage tiLiyadu 101
sAdhyavallavo BALasAdhya ninnupadESa
uddhavage hyAge dorakito dorakito Atana-
lliddhaMtha puNya PalaveShTo 102
ahiSAyi ninna aMta karaNa prEmagaLu
sakalaralliddu samanAgi samanAgi iralu
vaiShamya nairguNya ninaguMTe 103
tamatamma yOgyateya mIradale tAmasaru
tamasig-hOguvaro I nitya I nitya
saMsAriguNisuviyo miSraPalavanu 104
satvAdi jIvarane hastaviDidu nInu
hattisuve ninna saupAna saupAnavErisi
muktimaMTapake karedoyve 105
pakShapAtagaLilla pakShIMdravAhanane nina
kukShilIrELu jagavanu jagava rakShisuvaMtha
sAkShAta viShNu salahenna 106
sanakAdivaMdya ninna manake baMdudu mADu
dinakarakOTiprakASa prakASa enna kattala
j~jAnAMdhakAra biDisinnu 107
eShTeShTu ninage bAybiTT-hELikoMbe oM
diShTu byAsarade kELinnu kELutali nA bEDi
diShTa Pala nIDiMdirekAMta 108
nAvu navavidha BaktiyiMda ninna nAma
dAvAga biDade stutisuta stutisi koMDADutire
dEvakI suta tAnolivOnu 109
BaktarOddhAraneMbaMtha dhArava mADi
muktidAyakana guNagaLa guNamaNiya pONisi
lakShmeMba padaka naDuviTTu 110
stutimaNimAlike kaTTi koraLige hAke SrI-
patiyu BImESakRuShNanu kRuShNa tA olidu kA-
mitaPalava koDuva karuNadi 111
shrI kRuShNArpaNamastu ||
Leave a Reply