Composer : Shri Shyamasundara dasaru
ಸತತ ಪಾಲಿಸೋ ಎನ್ನ | ಯತಿ ರಾಘವೇಂದ್ರ |
ಪತಿತ ಪಾವನ ಪವನ | ಸುತಮತಾಂಬುಧಿ ಚಂದ್ರ [ಪ]
ಕ್ಷೋಣಿಯೊಳು ನೀ ಕುಂಭಕೋಣ ಕ್ಷೇತ್ರದಿ ಜನಿಸಿ
ವೀಣ ವೆಂಕಟ ಅಭಿದಾನದಿಂದ
ಸಾನುರಾಗದಿ ದ್ವಿಜನ ಪ್ರಾಣ ಉಳುಹಿದ ಮಹಿಮೆ |
ಏನೆಂದು ಬಣ್ಣಿಸಲಿ ಜ್ಞಾನಿ ಕುಲತಿಲಕ [೧]
ನಂಬಿದೆನು ನಿನ್ನ ಚರಣಾಂಬುಜವ ಮನ್ಮನದ
ಹಂಬಲ ಪೂರೈಸೊ ಬೆಂಬಿಡದಲೆ
ಕುಂಭಿಣೀಸುರ ನಿಕುರುಂಭ ವಂದಿತ ಜಿತ
ಶಂಬರಾಂತಕ ಶಾತಕುಂಭ ಕಶ್ಯಪ ತನಯ [೨]
ಮಂದಮತಿಗಳ ಸಂಗದಿಂದ ನಿನ್ನಯ ಚರಣ
ಇಂದಿನ ತನಕ ನಾ ಪೊಂದಲಿಲ್ಲ
ಕುಂದು ಎಣಿಸದೆ ಕಾಯೊ ಕಂದರ್ಪಪಿತ ಶಾಮ
ಸುಂದರನ ದಾಸ ಕರ್ಮಂದಿಗಳ ಕುಲವರ್ಯ [೩]
satata pAlisO enna | yati rAGavEMdra |
patita pAvana pavana | sutamatAMbudhi caMdra ||pa||
kShONiyoLu nI kuMbhakONa kShEtradi janisi
vINa veMkaTa abhidAnadiMda
sAnurAgadi dvijana prANa uLuhida mahime |
EneMdu baNNisali j~jAni kulatilaka [1]
naMbidenu ninna caraNAMbujava manmanada
haMbala pUraiso beMbiDadale ||
kuMbhiNIsura nikuruMbha vaMdita jita
SaMbarAMtaka shAtakuMbha kaSyapa tanaya [2]
maMdamatigaLa saMgadiMda ninnaya caraNa
iMdina tanaka nA poMdalilla
kuMdu eNisade kAyo kaMdarpapita shAma
suMdarana dAsa karmaMdigaLa kulavarya [3]
Leave a Reply