Composer : Shri Venugopala dasaru
ನಮೋ ನಮೋ ಹರಿಪ್ರೀಯ ನಮೋ ನಮೋ ಸುರಗೇಯ
ನಮೋ ನಮೋ ಗುರುರಾಯ ಮಧ್ವ ಮುನಿ ಜೀಯಾ [ಪ]
ಧರೆಗೆ ಭಾರವಾಗಿ ಚರಿಸುತಿರೆ ಮಾಯಿಗಳು
ಧರಿಸಲಾರದೆ ಧರಣಿ ಸರಸಿಜೋದ್ಭವಗೆ
ಮೊರೆಯಿಡಲು ಅಜನಾಗ ಹರಸುರರ ಸಹವಾಗಿ
ಹರಿಯ ಸದನವ ಸಾರಿ ಅರುಹಿದನು ಇದನೆಲ್ಲ [೧]
ಕಾವನಯ್ಯನು ವಸುಧೆ ಭಾವವನು ತಿಳಿದನಿಲ
ದೇವನೇ ನಿನಗೆ ಆಜ್ಞೆಯನೀಯಲು
ದೇವ ನೀನವತರಿಸಿ ಪಾವನವ ಮಾಡಿ
ಸ-ಜ್ಜೀವಿಗಳ ಪೊರೆದೆ ದುರ್ಜೀವಿಗಳ ನೀ ಮುರಿದೆ [೨]
ಕಾಮವನು ಕಡಿದು ಸನ್ನೇಮವನು ಹಿಡಿದು
ಬಹು ಸೀಮೆಯೊಳು ವಾದಿಗಳ ಸ್ತೋಮ ತರಿದು
ಹೇಮಕಚ್ಚುಲ ವೇಣುಗೋಪಾಲ ವಿಠಲನ
ನಾಮಸುಧೆ ಸುಜನರಿಗೆ ಪ್ರೇಮದಲಿ ಸವಿಯಿತ್ತೆ [೩]
namO namO hariprIya namO namO suragEya
namO namO gururAya madhva muni jIyA [pa]
dharege BAravAgi carisutire mAyigaLu
dharisalArade dharaNi sarasijOdBavage
moreyiDalu ajanAga harasurara sahavAgi
hariya sadanava sAri aruhidanu idanella [1]
kAvanayyanu vasudhe BAvavanu tiLidanila
dEvanE ninage Aj~jeyanIyalu
dEva nInavatarisi pAvanava mADi
sa-jjIvigaLa porede durjIvigaLa nI muride [2]
kAmavanu kaDidu sannEmavanu hiDidu
bahu sImeyoLu vAdigaLa stOma taridu
hEmakaccula vENugOpAla viThalana
nAmasudhe sujanarige prEmadali saviyitte [3]
Leave a Reply