Composer : Shri Pranesha dasaru
ಜಯಮಂಗಳಂ ನಿತ್ಯ ಶುಭಮಂಗಳಂ || ಪ ||
ಯೋಗೇಂದ್ರತೀರ್ಥ ಕರ ರಾಜೀವ ಪೂಜಿತಗೆ |
ಭಾಗವತ ಜನ ಪ್ರೀಯರೆನಿಸುವರಿಗೆ |
ಯೋಗಿ ಗಳಿಗಧಿಪತಿ ಸುಧೀಂದ್ರ ಕರಜಾತರಿಗೆ |
ಬಾಗಿವಂದಿಪರ ಸಲಹುವ ಸ್ವಾಮಿಗೆ |
ಜಯಮಂಗಳಂ || ೧ ||
ವರಹಜಾತೀರ ಮಂತ್ರಾಲಯನಿಕೇತನಗೆ |
ಧರಣಿ ಯೊಳಗಪ್ರತಿಮ ಚರಿತೆ ತೋರ್ವವಗೆ |
ಕುರುಡು ಕಿವುಡಾದಿಗಳ ಬಯಕೆ ಪೂರೈಪರಿಗೆ |
ವರ ಸುವೃಂದಾವನದಿ ಶೋಭಿಪರಿಗೆ || ೨ ||
ಆರಾಧನೆಯ ಜನರು ಮಾಡುವದು ನೋಡಲ್ಕೆ
ವಾರವಾರಕ್ಕಧಿಕ-ವೆನಿಸುವರಿಗೆ |
ಮಾರಮಣ ಪ್ರಾಣೇಶ ವಿಠಲನಂಘ್ರಿ ಜಲಜಕೆ |
ಆರುವದವೆನಿಪಗೆ ಕರುಣಾಜಲಧಿಗೆ ||೩|| ಜಯ
jayamaMgaLaM nitya SuBamaMgaLaM || pa ||
yOgEMdratIrtha kara rAjIva pUjitage |
BAgavata jana prIyarenisuvarige |
yOgi gaLigadhipati sudhIMdra karajAtarige |
bAgivaMdipara salahuva svAmige |
jayamaMgaLaM || 1 ||
varahajAtIra maMtrAlayanikEtanage |
dharaNi yoLagapratima carite tOrvavage |
kuruDu kivuDAdigaLa bayake pUraiparige |
vara suvRuMdAvanadi SOBiparige || 2 ||
ArAdhaneya janaru mADuvadu nODalke
vAravArakkadhika-venisuvarige |
mAramaNa prANESa viThalanaMghri jalajake |
Aruvadavenipage karuNAjaladhige ||3|| jaya
Leave a Reply