Composer : Shri Vadirajaru
ಏನ ಬಣ್ಣಿಪೆನಮ್ಮ ||
ಏನ ಬಣ್ಣಿಪೆ ಪೂರ್ಣಪ್ರಜ್ಞ ಪಂಡಿತರಾಯರ ||ಅ.ಪ||
ಮಧ್ವಸರೋವರ ತೀರದ ಮುದ್ದುಕೃಷ್ಣನ
ಪ್ರಸಿದ್ಧಿಯಿಂದ ಪೂಜೆಮಾಡಿ ಗೆದ್ದ ಬಲವಂತ ರಾಯರ ||೧||
ಭವಬಂಧ ಮಾಯಿಗಳ ಕಾಲಲೊದ್ದು
ಮಧ್ವಶಾಸ್ತ್ರವೆಲ್ಲ ಪ್ರಸಿದ್ಧ ಮಾಡಿದ ಯತಿರಾಯರ ||೨||
ಸಿರಿ ಹಯವದನನ ಚರಣ ಕಮಲವನು
ನಿರುತವಾಗಿ ಸೇವಿಸುವ ಅಚ್ಛಿನ್ನ ನಿಜದಾಸರ ||೩||
Ena baNNipenamma ||
Ena baNNipe pUrNapraj~ja paMDitarAyara ||a.pa||
madhvasarOvara tIrada muddukRuShNana
prasiddhiyiMda pUjemADi gedda balavaMta rAyara ||1||
BavabaMdha mAyigaLa kAlaloddu
madhvaSAstravella prasiddha mADida yatirAyara ||2||
siri hayavadanana caraNa kamalavanu
nirutavAgi sEvisuva acCinna nijadAsara ||3||
Leave a Reply