Bhame nee tandu

Composer : Shri Mahipati dasaru

By Smt.Shubhalakshmi Rao

ಭಾಮೆ ನೀ ತಂದು ತೋರೆ
ದೇವ ದೇವೆನಿಸುವ ಶ್ರೀ ಹರಿ ವಾಸುದೇವನ [ಪ]

ಬ್ರಹ್ಮಾದಿ ವಂದ್ಯನ ಹೊಮ್ಮುಕುಟದವನ
ರಮ್ಯದೋರುವ ಜಗನ್ ಮೋಹನನ
ಘಮ್ಮನೆ ಹೊಳೆವ ಕಸ್ತುರಿ ತಿಳಕನ
ಸುಮ್ಮನೆ ಸುಸ್ವರದಿ ಕೊಳಳನೂದುವನ [೧]

ಹದ್ದೆ ಅಡುವನ ಮುದ್ದು ಮಾತಿನವನ
ಗೆದ್ದು ಸಿದ್ದಿಯ ಮಣಿ ತಂದವನ
ತಿದ್ದಿ ಕುಬಜೆಗೊಲಿದು ಶುದ್ಧ ಮಾಡಿದವನ
ಉದ್ಧವಪ್ರಿಯ ಶ್ರೀ ಆದಿಕೇಶವನ [೨]

ಸುಂದರ ವದನನ ಸಾಂದ್ರ ಸುಖದವನ
ಕಂದರ್ಪಕೋಟಿ ಸುಲಾವಣ್ಯನ
ಎಂದೆಂದು ಕರುಣನ ಇಂದಿರೆ ರಮಣನ
ಬಂದು ಮಹಿಪತಿ ಮನೋಹರ ಮಾಡುವನ [೩]


BAme nI taMdu tOre
dEva dEvenisuva SrI hari vAsudEvana [pa]

brahmAdi vaMdyana hommukuTadavana
ramyadOruva jagan mOhanana
Gammane hoLeva kasturi tiLakana
summane susvaradi koLaLanUduvana [1]

hadde aDuvana muddu mAtinavana
geddu siddiya maNi taMdavana
tiddi kubajegolidu Suddha mADidavana
uddhavapriya SrI AdikESavana [2]

suMdara vadanana sAMdra suKadavana
kaMdarpakOTi sulAvaNyana
eMdeMdu karuNana iMdire ramaNana
baMdu mahipati manOhara mADuvana [3]

Leave a Reply

Your email address will not be published. Required fields are marked *

You might also like

error: Content is protected !!