Anjisuvudyakamma

Composer : Shri Vyasatatvajnaru – Vasudeva vittala ankita

By Smt.Shubhalakshmi Rao

ಅಂಜಿಸುವುದ್ಯಾಕಮ್ಮ ಕಂಜೋದ್ಭವ ನಮ್ಮ ನೀ |
ಅಂಜಿಸಿದರೆ ಲೋಕ ಅಂಜದಿರುವುದೆ || ಪ ||

ಕುಂಜರಗಮನೆ ನಾವಂಜನದೇವಿ |
ಸಂಜಾತನಾದ ಪ್ರಭಂಜನನಣುಗರು ||
ಕಂಜನಾಭನ ಪಾದ ಕಂಜಕ್ಕೆ ವಿಮುಖ |
ಸಂಜಿಲಿ ಚರಿಸುವ ಪುಂಜರು ಕಡಿಮೆ || ೧ ||

ನಿನ್ನಾನೆ ನಂಬಿ ನಾವಿನ್ನು ಸಂಸೃತಿಯಾ |
ಬನ್ನಾವೆ ಕಳಕೊಂಡು ಚನ್ನಾಗಿ ಜಗದಿ ||
ಧನ್ಯಾರಾದೇವೆಂದು ಮನ್ನಾದಿ ಬಯಸೆ |
ಅನ್ಯಾರಂದದಲಿ ನೀ ನಮ್ಮನ್ನ ನೋಡುವರೆ || ೨ ||

ಸಿರಿ ನಾರಸಿಂಹನ್ನ ವರ ಭಕ್ತಿಯಲಿ ನೀನು |
ಕರವಶ ಮಾಡಿಪ್ಪೆ ಪರವೇನೆ ನಿನಗೆ ||
ಪರಮೇಷ್ಠಿ ಮೊದಲಾದಮರರ ನೀ ಪೊರೆವೆ |
ಸಿರಿ ವಾಸುದೇವವಿಠಲನ್ನ ತೋರಮ್ಮ || ೩ ||


aMjisuvudyAkamma kaMjOdBava namma nI |
aMjisidare lOka aMjadiruvude || pa ||

kuMjaragamane nAvaMjanadEvi |
saMjAtanAda praBaMjananaNugaru ||
kaMjanABana pAda kaMjakke vimuKa |
saMjili carisuva puMjaru kaDime || 1 ||

ninnAne naMbi nAvinnu saMsRutiyA |
bannAve kaLakoMDu cannAgi jagadi ||
dhanyArAdEveMdu mannAdi bayase |
anyAraMdadali nI nammanna nODuvare || 2 ||

siri nArasiMhanna vara Baktiyali nInu |
karavaSa mADippe paravEne ninage ||
paramEShThi modalAdamarara nI poreve |
siri vAsudEvaviThalanna tOramma || 3 ||

Leave a Reply

Your email address will not be published. Required fields are marked *

You might also like

error: Content is protected !!