Composer: Shri Gopaladasaru
ಆದರಿಸೋ ಆದರಿಸೊ ಆಗಮ ಪ್ರತಿ ಪಾದ್ಯ |
ಮೋದತೀರಥ ಪೂರ್ಣಬೋಧಾಚಾರ್ಯ | ಪ |
ಮುನಿ ಕುಲೋತ್ತಮಾ ಶಿರೋರತುನ ಕಾಂಚನ ವರ್ಣ
ಘನಜ್ಞಾನ ಪರಿ ಪೂರ್ಣ ಶುಭಾ ಗುಣಣಾರ್ಣಾ |
ಅನಿಮಿಷರ ಗುರುವೆ ಅನಮಿತ್ತಬಂಧು ದಯಾಸಿಂಧು |
ಸನಕಾದಿ ವಂದ್ಯನೇ ಸರ್ವಜ್ಞರಾಯಾ || ೧ ||
ಶಕುತವ್ಯಕುತಾ ವ್ಯಾಪ್ತ ಭಕುತ ಜನಕೆ ಆಪ್ತ
ಭಕುತಿ ನಿಧಿಯೆಂಬೊ ಬಹುಭಾಗ್ಯಭರಿತಾ |
ಭಕುತಿರಹಿತ ನಾನಲ್ಲ ಭಕುತ ಕಾಮಧೇನು |
ಶುಕುತ ಶೋಣಿತರಹಿತ ಸುಖತೀರ್ಥರಾಯಾ || ೨ ||
ನಂಬಿದವರಿಗೆ ಮಿತ್ರಾ ಡಂಬ ಜನರಿಗೆ ಶತ್ರು
ಹಂಬಲಿಸೋ ಜನಕೆ ಹರುಷಾಂಬುಧಿಯು |
ಬಿಂಬಾ ಮೂರುತಿ ಗೋಪಾಲವಿಠ್ಠಲನ ಪಾ|
ದಾಂಬುಜಕೆ ಅನುದಿನಾ ತುಂಬೆ ನಾಕಾಂಬೆ || ೩ ||
AdarisO Adariso Agama prati pAdya |
mOdatIratha pUrNabOdhAcArya | pa |
muni kulOttamA SirOratuna kAMcana varNa
Ganaj~jAna pari pUrNa SuBA guNaNArNA |
animiShara guruve anamittabaMdhu dayAsiMdhu |
sanakAdi vaMdyanE sarvaj~jarAyA || 1 ||
SakutavyakutA vyApta bhakuta janake Apta
Bakuti nidhiyeMbo bahuBAgyaBaritA |
Bakutirahita nAnalla Bakuta kAmadhEnu |
Sukuta SONitarahita suKatIrtharAyA || 2 ||
naMbidavarige mitrA DaMba janarige Satru
haMbalisO janake haruShAMbudhiyu |
biMbA mUruti gOpAlaviThThalana pA|
dAMbujake anudinA tuMbe nAkAMbe || 3 ||
Leave a Reply