Composer : Shri Kanakadasaru
ಶಿವ ಶಿವ ಶಿವ ಎನ್ನಿರೊ ಮೂರ್ಜಗದವರೆಲ್ಲ
ಶಿವ ಶಿವ ಶಿವ ಎನ್ನಿರೊ ||ಪ||
ಆಗಮ ಸಿದ್ಧಾಂತ ಮೂಲದ ಜಪವಿದು
ಶಿವ ಶಿವ ಶಿವ
ನಿಮ್ಮ ರೋಗದ ಮೂಲವ ಕೆಡಿಪ
ಔಷಧವಿದು ಶಿವ ಶಿವ ಶಿವ ||ಅ.ಪ||
ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ
ಶಿವ ಶಿವ ಶಿವ
ನಿಮ್ಮ ತನು ಮನ ಪ್ರಾಣವ ವ್ಯರ್ಥವ
ಮಾಡದೆ ಶಿವ ಶಿವ ಶಿವ ಎನ್ನಿರೊ ||೧||
ಅಪರಾಧಕೋಟಿ ತ್ಯಜಿಸ ಬೇಕಾದರೆ
ಶಿವ ಶಿವ ಶಿವ
ಮುಂದೆ ಉಪಮಿತರೋರ್ಮಿತರರಿಯದ
ಜಪವಿದು ಶಿವ ಶಿವ ಶಿವ ||೨||
ಜವನ ಬಾಧೆಯ ನೀವು ಜಯಿಸಬೇಕಾದರೆ
ಶಿವ ಶಿವ ಶಿವ
ನಿಜಸವಿಮಲ ಮುಕ್ತಿಯ ಪಡೆಯ
ಬೇಕಾದರೆ ಶಿವ ಶಿವ ಶಿವ ||೩||
ಭುವನಕೆ ಬಲ್ಲಿದರಾಗ ಬೇಕಾದರೆ
ಶಿವ ಶಿವ ಶಿವ
ನೀವುಭವನ ಪದವಿಯನು ಪಡೆಯ
ಬೇಕಾದರೆ ಶಿವ ಶಿವ ಶಿವ ||೪||
ಗುರುಲಿಂಗ ಜಂಗಮವ ಅರಿಯಬೇಕಾದರೆ
ಶಿವ ಶಿವ ಶಿವ
ಮುಂದೆ ಪರಮಾತ್ಮನ ನೀವು
ತಿಳಿಯಬೇಕಾದರೆ ಶಿವ ಶಿವ ಶಿವ ||೫||
ಪೃಥ್ವಿಗೆ ಸದ್ಗುರು ಆಗಬೇಕಾದರೆ
ಶಿವ ಶಿವ ಶಿವ
ನೀವು ತತ್ತ್ವಪತಿ ಆದಿಕೇಶವನ ಕೂಡ
ಬೇಕಾದರೆ ಶಿವ ಶಿವ ಶಿವ ||೬||
Siva Siva Siva enniro – mUrjagadavarella
Siva Siva Siva enniro ||pa||
Agama siddhAMta mUlada japavidu
Siva Siva Siva
nimma rOgada mUlava keDipa
auShadhavidu Siva Siva Siva ||a.pa||
manuja janmadi huTTi maimaredirabEDi
Siva Siva Siva
nimma tanu mana prANava vyarthava
mADade Siva Siva Siva enniro ||1||
aparAdhakOTi tyajisa bEkAdare
Siva Siva Siva
muMde upamitarOrmitarariyada
japavidu Siva Siva Siva ||2||
javana bAdheya nIvu jayisabEkAdare
Siva Siva Siva –
nijasavimala muktiya paDeya
bEkAdare Siva Siva Siva ||3||
Buvanake ballidarAga bEkAdare
Siva Siva Siva –
nIvuBavana padaviyanu paDeya
bEkAdare Siva Siva Siva ||4||
guruliMga jaMgamava ariyabEkAdare
Siva Siva Siva –
muMde paramAtmana nIvu
tiLiyabEkAdare Siva Siva Siva ||5||
pRuthvige sadguru AgabEkAdare
Siva Siva Siva –
nIvu tattvapati AdikESavana kUDa
bEkAdare Siva Siva Siva ||6||
Leave a Reply