Composer : Shri Purandara dasaru
ಶಿವ ದರುಶನ ನಮಗಾಯಿತು ಕೇಳಿ |
ಶಿವರಾತ್ರಿಯ ಜಾಗರಣೆ [ಪ]
ಪಾತಾಳ ಗಂಗೆಯ ಸ್ನಾನವ ಮಾಡಲು |
ಪಾತಕವೆಲ್ಲ ಪರಿಹಾರ |
ಜ್ಯೋತಿರ್ಲಿಂಗನ ಧ್ಯಾನವ ಮಾಡಲು |
ದ್ಯೂತಿಗಳಿಲ್ಲ ಅನುದಿನವು |೧|
ಬೇಡಿದ ವರಗಳ ಕೊಡುವನು ತಾಯಿ |
ಬ್ರಹ್ಮಾರಧನೆ ಮಾಡುವನು |
ಆಡುತ ಪಾಡುತ ಏರುತ ಬಸವನ |
ಆನಂದದಲಿ ನಲಿದಾಡುವನು |೨|
ಶಿಖರವ ಕಂಡೆನು ಪುರಂದರವಿಠಲನ |
ಹರಿನಾರಾಯಣ ಧ್ಯಾನದಲೀ |೩|
Siva daruSana namagAyitu kELi |
SivarAtriya jAgaraNe [pa]
pAtALa gaMgeya snAnava mADalu |
pAtakavella parihAra |
jyOtirliMgana dhyAnava mADalu |
dyUtigaLilla anudinavu |1|
bEDida varagaLa koDuvanu tAyi |
brahmAradhane mADuvanu |
ADuta pADuta Eruta basavana |
AnaMdadali nalidADuvanu |2|
SiKarava kaMDenu puraMdaraviThalana |
harinArAyaNa dhyAnadalI |3|
Leave a Reply