Composer : Shri Pranesha dasaru
ಶಿವಭಕ್ತನಾಗೋ ಪ್ರಾಣೀ | ಅವನಿಯಲ್ಲಿ ಪರದಲ್ಲಿ ||
ವಿವಿಧ ಭೋಗಗಳ ಕಾಂಬೀ | ಶಿವಭಕ್ತನಾಗೊ ಪ್ರಾಣೀ ||ಪ||
ಲಿಂಗಾಧಾರಣ ಮಾಡಿ ಜಂಗಮರಧಿಕಾರಾ ಸಾರೀ |
ಹಿಂಗಿಕೊ ಭವಜನ್ನ್ಯ ದುಃಖ ||
ಸಂಗಾವಾಗಿ ರುದ್ರಾಕ್ಷಿಯಂಗಾಳರ್ಚಿಸೂತಾ |
ನಿಃ ಸಂಗನಾಗೊ ದುರ್ವಿಷಯದೀ ||೧||
ಸುವಿವೇಕಿ ಮನಸಿಲಿಂದಾ ಶಿವಶಬ್ದವ ಶೋಧಿಸಿ |
ಕವಿಗಳ ಮುಖದಿಂದ ತಿಳಿಯೋ ||
ನವತ್ರಿಪತ್ರಯುಕ್ತ ಬಿಲ್ವಾ ಸಮರ್ಪಣೆ ಮಾಡೊ |
ಸವೆಯಾದಂಥ ಪದವೈದೂವಿ ||೨||
ಭಜಿಸೋ ವೀಭೂತಿಯನ್ನು ದ್ವಿಜಸ್ತೋಮಾಕೆರಗಾದೀರೊ |
ಪ್ರಜಗಳಿಗೆ ತೋರದಿರು ಭಾವಾ ||
ಅಜ ಪ್ರಾಣೇಶ ವಿಠ್ಠಲಾನು ಅಜಿನಾಂಬರ
ಸಮನೆನಬ್ಯಾಡಾ | ವಿಜಯವಂತನಾಗುವೀ ಜಗದೀ ||೩||
SivaBaktanAgO prANI | avaniyalli paradalli ||
vividha BOgagaLa kAMbI | SivaBaktanAgo prANI ||pa||
liMgAdhAraNa mADi jaMgamaradhikArA sArI |
hiMgiko Bavajannya duHKa ||
saMgAvAgi rudrAkShiyaMgALarcisUtA |
niH saMganAgo durviShayadI ||1||
suvivEki manasiliMdA SivaSabdava SOdhisi |
kavigaLa muKadiMda tiLiyO ||
navatripatrayukta bilvA samarpaNe mADo |
saveyAdaMtha padavaidUvi ||2||
BajisO vIBUtiyannu dvijastOmAkeragAdIro |
prajagaLige tOradiru BAvA ||
aja prANESa viThThalAnu ajinAMbara
samanenabyADA | vijayavaMtanAguvI jagadI ||3||
Leave a Reply