Sharanu Mrutyunjaya

Composer : Shri Jagannatha dasaru

By Smt.Shubhalakshmi Rao

ಶರಣು ಮೃತ್ಯುಂಜಯ ಶರಣು |
ಸಜ್ಜನರ ಭಯ ಪರಿಹರಿಸು ಕರುಣಾಳು
ಭಿನ್ನಪವ ಕೇಳೊ [ಅ.ಪ]

ವಾಸವಾದ್ಯಮರನುತ ವನಜ ಸಂಭವ ಸುತ
ನೀ ಸಲಹೊ ಕೈಲಾಸವಾಸ ಈಶ |
ಕ್ಲೇಶ ಮೋದಗಳ ಸಮ ತಿಳಿಸು ಅಶ್ವತ್ಥಾಮ
ಶ್ರೀಶುಕನೆ ದುರ್ವಾಸ ಸ್ಫಟಿಕ ಸಮಭಾಸ ||೧||

ವೈಕಾರಿಕಾದಿ ತ್ರೈರೂಪ ನಿನ್ನಯ ಕೋಪ
ಶೋಕ ಕೊಡುವುದು ದೈತ್ಯ ಜನಕೆ ನಿತ್ಯ |
ಲೌಕಿಕವೆಲ್ಲ ವೈದಿಕವಾಗಲೆನಗೆ ಮೈನಾಕಿ
ಹೃತ್ಕುಮುದೇಂದು ಭಕುತಜನ ಬಂಧೊ ||೨||

ಪವಮಾನ ತನಯ ನಿನ್ನವರಲ್ಲಿ ಕೊಡು ವಿನಯ
ದಿವಸ ಸವನಗಳಲ್ಲಿ ಎನ್ನಿರವ ಬಲ್ಲಿ |
ಪವನ ದ್ವಿತಿಯ ರೂಪ ಸತತ ಎನ್ನಯ ಪಾಪ
ಅವಲೋಕಿಸದಲೆನ್ನ ಸಲಹೊ ಸುರಮಾನ್ಯ ||೩||

ಶೇಷನಂದನ ಶೇಷಭೂಷಣನೆ ನಿಶೇಷ
ದೊಷದೂರನ ತೋರೊ ಕರುಣವನು ಬೀರೊ
ಶ್ರೀ ಷಣ್ಮುಖನ ತಂದೆ ಸತತ ನೀ ಗತಿಯೆಂದು
ಶೋಷಿಸು ಭವಾಮಯವ ಬೇಡುವೆನು ದಯವ ||೪||

ಗರ್ಗ ಮುನಿಕರ ಕಮಲ ಪೂಜ್ಯ ಚರಣಾಬ್ಜ ಮಮ
ದುರ್ಗುಣಗಳೆಣಿಸದಲೆ ಇಹದಿ ಸ್ವಾಮಿ
ನಿರ್ಗತಾಶನ ಜಗನ್ನಾಥ ವಿಠ್ಠಲನ
ಸನ್ಮಾರ್ಗವನೆ ತೋರೊ ಈ ದೇಹ ನಿನ್ನಯ ತೇರೊ ||೫||


sharaNu mRutyuMjaya sharaNu |
sajjanara bhaya pariharisu karuNALu
bhinnapava kELo [a.pa]

vAsavAdyamaranuta vanaja saMbhava suta
nI salaho kailAsavAsa Isha |
klEsha mOdagaLa sama tiLisu ashvatthAma
shrIshukane durvAsa sphaTika samabhAsa ||1||

vaikArikAdi trairUpa ninnaya kOpa
shOka koDuvudu daitya janake nitya |
loukikavella vaidikavAgalenage mainAki
hRutkumudEMdu bhakutajana baMdho ||2||

pavamAna tanaya ninnavaralli koDu vinaya
divasa savanagaLalli ennirava balli |
pavana dvitiya rUpa satata ennaya pApa
avalOkisadalenna salaho suramAnya ||3||

shEShanaMdana shEShabhUShaNane nishESha
doShadUrana tOro karuNavanu bIro
shrI ShaNmukhana taMde satata nI gatiyeMdu
shOShisu bhavAmayava bEDuvenu dayava ||4||

garga munikara kamala pUjya charaNAbja mama
durguNagaLeNisadale ihadi svAmi
nirgatAshana jagannAtha viThThalana
sanmArgavane tOro ee dEha ninnaya tEro ||5||

Leave a Reply

Your email address will not be published. Required fields are marked *

You might also like

error: Content is protected !!