Composer : Shri Prasannavenkata dasaru
ಸದಾಯೆನ್ನ ಪೊರೆ ಶಿವಶಂಕರನೇ |
ವಿಧು ಶೇಖರನೇ ಸದಾಶಿವ ಹರನೆ [ಪ]
ಭಸಿತ ಭೂಸಿತನೆ ಮೃಗಾಂಕದಂಗನೆ |
ತಿಸುಳಗೈವ ಮನ ಕ್ಲೇಶಗಳಳಿವನೆ |೧|
ಕೃತ್ತಿವಾಸ ನಿಜ ನೃತ್ಯ ಭಾಷಿತನೆ |
ಸತ್ಯುಳ್ಳವರಪಮೃತ್ಯು ಕಳೆವನೆ |೨|
ತೋಪಲೋಪಮ ಕಂಠ ಚಾಪ ಪಾಣೇ |
ಶ್ರೀಪತಿ ಧ್ಯಾನವನಿತ್ತು ಪೊರೆವನೆ |೩|
ಕಿಸಲಯೋಪಮ ನವಿರ ಶಶಿಶೇಖರ |
ಬಿಸಜನಾಭನ್ ಹಸನಾಗಿ ಭಜಿಪಹರ |೪|
ನಾಭಿಕೂಪ ಸಂಭವ ತನಯನೇ |
ವಿಬುಧವಲಯಕತಿ ಸುಭೀಷ್ಟದಾತನೆ |೫|
ಉಪಮೆಗಾರ ತ್ರಿಪುರಾಂತಕ ಹರನೆ |
ಗೋಪತಿಧ್ವಜ ದ್ವಿಜ ಪಾಪಸಂಹರನೆ |೬|
ಹೇಮಗಿರಿ ಕೈಲಾಸವಾಸ ಪದ |
ಸ್ತೋಮನಮಿಪಗೆ ಕಾಮಿತವೀವನೆ |೭|
ಕಾಮದಹಿಸಿ ಶ್ರೀರಾಮ ನಾಮ ಜಪ |
ನೇಮದಿ ಮಾಳ್ಪಾ ತಪಧನೇಶಾ |೮|
ನಂದಿಗಮನ ಖಳ ವೃಂದದಂಕುಶ |
ಅಂಧಕರಿಪು ಶಿಖಿಸ್ಯಂದನ ಜನಕನೆ |೯|
ಶಾರ್ವರಿಧವ ಭವ ಭೀಮ ಭಯಾಂತಕ |
ಸರ್ವೋತ್ತಮ ಪ್ರಸನ್ವೆಂಕಟ ಭಜಕ |೧೦|
sadAyenna pore SivaSaMkaranE |
vidhu SEKaranE sadASiva harane [pa]
Basita BUsitane mRugAMkadaMgane |
tisuLagaiva mana klESagaLaLivane |1|
kRuttivAsa nija nRutya BAShitane |
satyuLLavarapamRutyu kaLevane |2|
tOpalOpama kaMTha cApa pANE |
SrIpati dhyAnavanittu porevane |3|
kisalayOpama navira SaSiSEKara |
bisajanABan hasanAgi Bajipahara |4|
nABikUpa saMBava tanayanE |
vibudhavalayakati suBIShTadAtane |5|
upamegAra tripurAMtaka harane |
gOpatidhvaja dvija pApasaMharane |6|
hEmagiri kailAsavAsa pada |
stOmanamipage kAmitavIvane |7|
kAmadahisi SrIrAma nAma japa |
nEmadi mALpA tapadhanESA |8|
naMdigamana KaLa vRuMdadaMkuSa |
aMdhakaripu SiKisyaMdana janakane |9|
SArvaridhava Bava BIma BayAMtaka |
sarvOttama prasanveMkaTa Bajaka |10|
Leave a Reply