Composer : Shri Badarayana Vittala
ನಂಜುಂಡ ನಮ್ಮ ಗುರು ನಂಜುಂಡ || ಪ ||
ನಂಜುಂಡ ನತಜನಪಾಲ | ಭವ
ಭಂಜನ ಕರುಣಾಲವಾಲ || ಆಹಾ ||
ಆಂಜನೇಯನ ಪ್ರಿಯ ಅಂಜಲಿ ಮುಗಿವೆನು |
ಕಂಜನಾಭನ ಪಾದಕಂಜವ ತೋರಿಸೊ || ಅ.ಪ ||
ವಿಷಕಂಧರನೆ ವೀತಭಯನೆ | ವರ
ವೃಷಕೇತು ವೈಷ್ಣವೋತ್ತಮನೆ | ನಮ್ಮ
ಶಶಿಮುಖಿ ಗೌರಿನಾಯಕನೆ | ನಿನಗೆ ನ
ಮಿಸುವೆ ಕರುಣಾಳು ಶಿವನೆ || ಆಹಾ ||
ಭಸಿತ ಭೂಷಿತವಾದ ಶಶಿ ಸನ್ನಿಭಾಂಗನೆ
ನಸುನಗೆಯ ಮುಖವ ತೋರಿಸೊ ಶಂಕರನೆ || ೧ ||
ಮನಸಿನ ಚಾಪಲ್ಯ ಬಿಡಿಸೊ | ಮಧ್ವ
ಮುನಿ ಕೃಪಾ ಕವಚವ ತೊಡಿಸೊ | ಕ್ಷಣ
ಕ್ಷಣದಲಿ ಹರಿನಾಮ ನುಡಿಸೊ | ದಿವ್ಯ
ಘನ ವೈರಾಗ್ಯ ಭಾಗ್ಯ ಉಣಿಸೊ || ಆಹಾ ||
ಕನಸು ಮನಸಿನಲ್ಲಿ ಹರಿರೂಪ ಗುಣಕ್ರಿಯೆ |
ನೆನವಿತ್ತು ಸಂತೈಸು ಗಣಪ ಶಣ್ಮುಖರೈಯ್ಯ || ೨ ||
ಮುನಿವೇಷವನು ತಾಳಿ ನೃಪಗೆ | ಶ್ರೀ ವಿಷ್ಣು-
ವಿನ ಕಥೆ ಅರುಹಿದೆ ಸದ್ಗತಿಗೆ | ಮಾರ್ಗ-
ವನೆ ಮಾಡಿ ಸಲಹಿದೆ ಕೊನೆಗೆ | ಕ-
ರುಣಿಗಳೊಳು ಎಣೆಯಾರೊ ನಿನಗೆ || ಆಹಾ ||
ಗುಣನಿಧಿ ಬಾದರಾಯಣವಿಠಲನ ಧ್ಯಾನ
ನೆನವಿತ್ತು ಸಂತೈಸು ಗಣಪ ಷಣ್ಮುಖರೈಯ್ಯ || ೩ ||
naMjuMDa namma guru naMjuMDa || pa ||
naMjuMDa natajanapAla | Bava
BaMjana karuNAlavAla || AhA ||
AMjanEyana priya aMjali mugivenu |
kaMjanABana pAdakaMjava tOriso || a.pa ||
viShakaMdharane vItaBayane | vara
vRuShakEtu vaiShNavOttamane | namma
SaSimuKi gaurinAyakane | ninage na
misuve karuNALu Sivane || AhA ||
Basita BUShitavAda SaSi sanniBAMgane
nasunageya muKava tOriso SaMkarane || 1 ||
manasina cApalya biDiso | madhva
muni kRupA kavacava toDiso | kShaNa
kShaNadali harinAma nuDiso | divya
Gana vairAgya BAgya uNiso || AhA ||
kanasu manasinalli harirUpa guNakriye |
nenavittu saMtaisu gaNapa shaNmukharaiyya || 2 ||
munivEShavanu tALi nRupage | SrI viShNu-
vina kathe aruhide sadgatige | mArga-
vane mADi salahide konege | ka-
ruNigaLoLu eNeyAro ninage || AhA ||
guNanidhi bAdarAyaNaviThalana dhyAna
nenavittu saMtaisu gaNapa ShaNmuKaraiyya || 3 ||
Leave a Reply