Composer : Shri Kurudi Raghavendrachar – Lakumeesha ankita
ನಂದಿವಾಹನ ನಿನಗೆ ವಂದಿಸುವೆ ನಿರುತ |
ಶ್ರೀ ಮಂತ್ರ ಮಂದಿರದಿ ಮೆರೆವಂಥ ಗೌರೀ ನಾಥ || ಪ ||
ಅಜಿನ ವಸನನು ನೀನು ಅಜನಿಗೆ ಸುತನಯ್ಯ |
ವಿಜಯ ಸಖನಿಗೆ ಸೂನು ಮೊಮ್ಮಗನು ನೀನು |
ವಿಜಯನಿಗೆ ಶರವಿತ್ತೆ ವಿಜಯವೇ ಕರುಣಿಸೈ |
ವಿಜಯವಿಠ್ಠಲನಲ್ಲಿ ಭಜಿಪ ಮನ ಕೊಡು ಎಂದೂ || ೧ ||
ತುಂಗ ವಿಕ್ರಮ ನೀನು ಗಂಗೆಯನು ಜಟದಿಟ್ಟೆ |
ಮಂಗೇಶ ಛಾತ್ರನೀ ಭಸ್ಮಾಂಗದವನೇ |
ಮಂಗಳಪ್ರದ ನಿರುತ ತಿಂಗಳ ಶೇಖರನೆ |
ಅಂಗನೆ ಸರ್ವಮಂಗಳೆಗೆ ಒಲಿದಂಥ || ೨ ||
ಶರಧಿಯಲಿ ತಪಗೈದೆ ಶರಶರನ ಸಂಹಾರಿ |
ಶರಧಿ ತೀರದಿ ನಿನ್ನ ಸ್ಥಾಪಿಸಿದ ರಾವಣಾರಿ |
ಶರವದನದಲಿ ನಿತ್ಯ ಲಕುಮೀಶನ ಭಜಿಸಿ |
ಬರುವ ಕಲ್ಪಕೆ ಶೇಷ ಪದವಿಯನೇ ಪಡೆದಂಥ || ೩ ||
naMdivAhana ninage vaMdisuve niruta |
SrI maMtra maMdiradi merevaMtha gaurI nAtha || pa ||
ajina vasananu nInu ajanige sutanayya |
vijaya saKanige sUnu mommaganu nInu |
vijayanige Saravitte vijayavE karuNisai |
vijayaviThThalanalli Bajipa mana koDu eMdU || 1 ||
tuMga vikrama nInu gaMgeyanu jaTadiTTe |
maMgESa CAtranI BasmAMgadavanE |
maMgaLaprada niruta tiMgaLa SEKarane |
aMgane sarvamaMgaLege olidaMtha || 2 ||
Saradhiyali tapagaide SaraSarana saMhAri |
Saradhi tIradi ninna sthApisida rAvaNAri |
Saravadanadali nitya lakumISana Bajisi |
baruva kalpake SESha padaviyanE paDedaMtha || 3 ||
Leave a Reply