Composer : Shri Prasannavenkata dasaru
ನಮಃ ಪಾರ್ವತಿ ಪತಯೆ ಮಹತತ್ವಗಧಿಪತೆ |
ನಮೋ ನಮೋ ನೀಲಕಂಠ ನಮಃ ಚಂದ್ರಮೌಳೆ [ಪ]
ಮಹಾಕೇಶ ವಿಷಕಂಠ ಸದಾಶಿವ |
ಅಹಂಕಾರಗುಣ ಸ್ವಭಾವ ಸುಂದರಾ ||
ಅಹಿಭೂಷಣ ಬಹುರೂಪಕೂಟಮನೆ |
ಮಹಾದೇವ ಮಹದಾದಿ ದೇವರತ [೧]
ಗಗನಕೇಶ ಗೋರಾಜ ತುರಂಗಾ |
ಸದ್ಗಹನ ಭಕುತರತ ಭೂತನಾಥಾ ||
ನಗಪಗೆ ಮಗನನ ಮೃಗ ನೆಪದಲಿ ಕಾ – |
ಳಗ ಮಾಡಿದ ಅಘನಾಶನ ಹರ ಹರ [೨]
ಮನ್ಮಥ ವೈರಿ ಜಗನ್ಮತ ಸಾರಿ |
ಮನ್ಮತಕೆ ಗುರು ಮುಪ್ಪುರಹರ ||
ಉನ್ಮತ್ತರ ಕಿತ್ತೊಗೆದು ಸಂತತ |
ಚಿನ್ಮಯನಲಿ ಮನ್ಮನವ ನಿಲ್ಲಿಸೋ [೩]
ಧರಿಸಿದೆ ಹರಿಪಾದೋದಕ ಶಿರದಲಿ |
ಮೆರೆಸಿದೆ ಹರಿಭಕುತರ ನೀ ಧರೆಯಲಿ ||
ಸರಿಯಾರಿಹರೈ ಸುರಗುರು ನಿನಗೆ
ವೈರಾಗ್ಯ ಭಕುತಿ ಘನ ಜ್ಞಾನ ಬೋದೆಲಿ [೪]
ಅದ್ರಿನಂದನೆಯರಮಣ ರುದ್ರಾ |
ರೌದ್ರ ಮೂರುತಿ ದಯಾಸಮುದ್ರಾ ||
ಭದ್ರ ಭುಜ ಪ್ರಸನ್ವೆಂಕಟರಾಯನ |
ಸದ್ರತಿಯಲಿ ಸ್ಮರಿಪಾನಂದಲಿಂಗಾ [೫]
namaH pArvati pataye mahatatvagadhipate |
namO namO nIlakaMTha namaH caMdramauLe [pa]
mahAkESa viShakaMTha sadASiva |
ahaMkAraguNa svaBAva suMdarA ||
ahiBUShaNa bahurUpakUTamane |
mahAdEva mahadAdi dEvarata [1]
gaganakESa gOrAja turaMgA |
sadgahana Bakutarata BUtanAthA ||
nagapage maganana mRuga nepadali kA – |
Laga mADida aGanASana hara hara [2]
manmatha vairi jaganmata sAri |
manmatake guru muppurahara ||
unmattara kittogedu saMtata |
cinmayanali manmanava nillisO [3]
dhariside haripAdOdaka Siradali |
mereside hariBakutara nI dhareyali ||
sariyAriharai suraguru ninage
vairAgya Bakuti Gana j~jAna bOdeli [4]
adrinaMdaneyaramaNa rudrA |
raudra mUruti dayAsamudrA ||
Badra Buja prasanveMkaTarAyana |
sadratiyali smaripAnaMdaliMgA [5]
Leave a Reply