Composer : Shri Purandara dasaru
ಮಧ್ವರಾಯರ ನೆನೆದು ಶುದ್ಧರಾಗಿರೋ ||ಪ||
ಹೊದ್ದಿ ವೈಷ್ಣವ ಮತವ ಭವಾಬ್ಧಿ ಧಾಟಿರೋ ||ಅ.ಪ||
ಉದಯದಲ್ಲಿ ಏಳುವಾಗ ಮುದದಿ ಸ್ನಾನ ಮಾಡುವಾಗ
ಒದಗಿ ನಿತ್ಯ ಕರ್ಮಗಳನು ನಡೆಸುವಾಗ
ಹೃದಯದಲ್ಲಿ ಬೀಜಾಕ್ಷರ ಮಂತ್ರಗಳನು ಜಪಿಸುವಾಗ
ಸದಮಲಾನಂದ ಹನುಮನನ್ನು ನೆನೆಯಿರೋ ||೧||
ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವ ಮಾಡುವಾಗ
ಪ್ರೇಮದಿ ವೈಷ್ಣವೊತ್ತಮರ ಅರ್ಚಿಸುವಾಗ
ಆ ಮಹಾ ಭಕ್ಷ್ಯ ಭೋಜ್ಯ ಆರೋಗಣೆ ಮಾಡುವಾಗ
ನೇಮದಿಂದ ಕೌರವಾಂತಕ ಭೀಮಸೇನನ ನೆನೆಯಿರೋ ||೨||
ಕರಗಳನು ತೊಳೆದು ತೀರ್ಥ ತುಳಸಿದಳವನೀಯುವಾಗ
ಪರಿಪರಿಯ ಪುಷ್ಪ ವೀಳ್ಯ ಅರ್ಪಿಸುವಾಗ
ಸರುವರಂತರ್ಯಾಮಿ ನಮ್ಮ ಪರಮಗುರು ಮಧ್ವಾಂತರಾತ್ಮಕ
ಸಿರಿ ಪುರಂದರ ವಿಠ್ಠಲಗೆ ಸಮರ್ಪಣೆಯ ಮಾಡಿರೋ ||೩||
madhvarAyara nenedu shuddharAgirO ||pa||
hoddi vaiShNava matava bhavAbdhi dhATirO ||a.pa||
udayadalli ELuvAga mudadi snAna mADuvAga
odagi nitya karmagaLanu naDesuvAga
hRudayadalli bIjAkShara maMtragaLanu japisuvAga
sadamalAnaMda hanumanannu neneyirO ||1||
kAmavillada hariya pUje vaiSvadEva mADuvAga
prEmadi vaiShNavottamara arcisuvAga
A mahA BakShya BOjya ArOgaNe mADuvAga
nEmadiMda kauravAMtaka bheemasEnana neneyirO ||2||
karagaLanu toLedu tIrtha tuLasidaLavanIyuvAga
paripariya puShpa vILya arpisuvAga
saruvaraMtaryAmi namma paramaguru madhvAMtarAtmaka
siri puraMdara viThThalage samarpaNeya mADirO ||3||
Leave a Reply