Composer : Shri Prasannavenkata dasaru
ಕಂಡೆ ಕೆಂಡಗಣ್ಣಿನ ಖಂಡೇಶ್ವರನಾ [ಪ]
ರುಂಡಮಾಲಧರನಾ ಪ್ರಚಂಡಲಿಂಗನಾ [ಅ.ಪ]
ಗಂಗ ಮಾರಂಗ ಶ್ರೀಕರ್ಪುರಾಂಗನ |
ರಂಗ ಸಖನಾಯೆನ್ನಂತರಂಗ ಲಿಂಗನ ||
ಭಂಗಗೊಳಿಸಿ ಭವದಘಂಗಳನುನರ |
ಸಿಂಗನಂಫ್ರಿಯ ತೋರ್ಪಲಿಂಗನ [೧]
ಶಶಿಶೇಖರ ಶಶಿಮುಖಿಯಶಿಖರನ
ವಿಷಕಾರಿಗಳ ವಿಶೇಷ ಭೂಷಿತನ ||
ಭಸುಮಭಸಿತದನೊಸಲಿನ ಶಿವನ |
ವಸುಮತಿಗಧಿಕ ಕೈಲಾಸ ವಾಸನ [೨]
ಕೆಂಜೆಡೆಯೊಳ್ನಂದಿನಿಯನಿಟ್ಟು ಸಲೆ |
ಗುಂಜರ ಚರ್ಮಾಂಬರವನುಟ್ಟಿಹನ ||
ನಂಜನುಂಡು ಜಗದಂಜಿಕೆ ಕಳೆದನ |
ಕಂಜನಾಭ ಪ್ರಸನ್ವೆಂಕಟಪ್ರೀಯನ [೩]
kaMDe keMDagaNNina KaMDESvaranA [pa]
ruMDamAladharanA pracaMDaliMganA [a.pa]
gaMga mAraMga SrIkarpurAMgana |
raMga saKanAyennaMtaraMga liMgana ||
BaMgagoLisi BavadaGaMgaLanunara |
siMganaMPriya tOrpaliMgana [1]
SaSiSEKara SaSimuKiyaSiKarana
viShakArigaLa viSESha BUShitana ||
BasumaBasitadanosalina Sivana |
vasumatigadhika kailAsa vAsana [2]
keMjeDeyoLnaMdiniyaniTTu sale |
guMjara carmAMbaravanuTTihana ||
naMjanuMDu jagadaMjike kaLedana |
kaMjanABa prasanveMkaTaprIyana [3]
Leave a Reply